ಹೊಸದುರ್ಗ
ನಾಳೆ ವಿದ್ಯುತ್ ವ್ಯತ್ಯಯ | ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಕರೆಂಟ್ ಇರಲ್ಲ..

CHITRADURGA NEWS | 15 MARCH 2025
ಹೊಸದುರ್ಗ: ಗುತ್ತೂರು 400/220/66 ಕೆ.ವಿ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಿರ್ವಹಿಸುವುದರಿಂದ (ನಾಳೆ)ಮಾ.16 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹೊಸದುರ್ಗ ಉಪ-ವಿಭಾಗದ ಎಲ್ಲಾ 66/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ ಪಂಪ್‌ಸೆಟ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Also Read: ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ..!!?

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ಹೊಸದುರ್ಗ ತಾಲ್ಲೂಕಿನ ಕಸಬಾ ಮತ್ತು ಮಾಡದಕೆರೆ ಹೋಬಳಿಯ ಎಲ್ಲಾ ಗ್ರಾಮಗಳ ನೀರಾವರಿ ಸ್ಥಾವರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಐ.ಪಿ ಸ್ಥಾವರಗಳ ವಿದ್ಯುತ್ ಸರಬರಾಜನ್ನು ಬೆಳಿಗ್ಗೆ 10 ಗಂಟೆಯ ಒಳಗೆ ನೀಡಲಾಗುವುದು ಎಂದು ಹೊಸದುರ್ಗ ಬೆ.ವಿ.ಕಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Also Read: PSI ಗಾದಿಲಿಂಗಪ್ಪ – ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಲ್ಲೇ ಪ್ರಕರಣ | ಪಿಎಸ್ಐ ವಿರುದ್ಧ FIR ದಾಖಲಿಸಲು ಪಟ್ಟು
