ಮುಖ್ಯ ಸುದ್ದಿ
ನಾಳೆ ಮುಖ್ಯಮಂತ್ರಿ ಬರಲ್ಲ | ಬಾಗೀನ ಕಾರ್ಯಕ್ರಮ ಮುಂದೂಡಿಕೆ

Published on

CHITRADURGA NEWS | 17 JANUARY 2025
ಚಿತ್ರದುರ್ಗ: ಇತಿಹಾಸದಲ್ಲಿ ಮೂರನೇ ಬಾರಿಗೆ ಕೋಡಿ ಬಿದ್ದಿರುವ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯಕ್ಕೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗೀನ ಅರ್ಪಣೆ ಮಾಡಲು ಕಾರ್ಯಕ್ರಮ ನಿಗಧಿ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಬಂದ ಮಾಹಿತಿಯ ಅನ್ವಯ, ಜನವರಿ 18 ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಮುಂದೂಡಲಾಗಿದೆ.
ಬದಲಾಗಿ ಜನವರಿ 23 ಗುರುವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಿಗಧಿ ಮಾಡಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಮುಖ್ಯಮಂತ್ರಿಗಳ ಕಚೇರಿಯಿಂದ ತಿಳಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಚಿತ್ರದುರ್ಗ ನಡುವೆ ರೈಲು ಮಾರ್ಗ | ಬಿ.ವೈ.ರಾಘವೇಂದ್ರ ಪ್ರಸ್ತಾವನೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
Continue Reading
Related Topics:Bagina, Chief Minister Siddaramaiah, Chitradurga, Chitradurga Latest, Chitradurga news, DK Shivakumar, Hiriyur, Kannada News, Vanivilasa Sagar Reservoir, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ಡಿ.ಕೆ.ಶಿವಕುಮಾರ್, ಬಾಗೀನ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಣಿವಿಲಾಸ ಸಾಗರ ಜಲಾಶಯ, ಹಿರಿಯೂರು

Click to comment