ಮುಖ್ಯ ಸುದ್ದಿ
PM Vishwakarma; ಪಿಎಂ ವಿಶ್ವಕರ್ಮ ಯೋಜನೆ | ರೂ.3 ಲಕ್ಷದವರೆಗೂ ಸಾಲ ಸೌಲಭ್ಯ

CHITRADURGA NEWS | 20 SEPTEMBER 2024
ಚಿತ್ರದುರ್ಗ: ಕುಶಲಕರ್ಮಿಗಳಿಗೆ ವಿಶೇಷ ಯೋಜನೆ ಜಾರಿಗೆ ತರುವ ಮೂಲಕ ರೂ.3 ಲಕ್ಷದವರೆಗೂ ಸಾಲ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಕ್ಲಿಕ್ ಮಾಡಿ ಓದಿ: Cotpa act: ನಿಯಮ ಉಲ್ಲಂಘಿಸುವ ಅಂಗಡಿಗಳ ಪರವಾನಿಗೆ ರದ್ದು ಮಾಡಿ | ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ
ನಗರದ ಶಾರದ ಸಭಾ ಭವನದಲ್ಲಿ ಶುಕ್ರವಾರ ಪಿಎಂ ವಿಶ್ವಕರ್ಮ ಯೋಜನೆ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ರಾಷ್ಟ್ರೀಯ ಪಿಎಂ ವಿಶ್ವಕರ್ಮ(PM Vishwakarma) ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಹಾಗೂ ಫಲಾನುಭವಿಗಳಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
30 ತಿಂಗಳ ಅವಧಿಯೊಳಗೆ ಅತೀ ಕಡಿಮೆ ಬಡ್ಡಿಯಲ್ಲಿ ಶೇ.5 ಬಡ್ಡಿದರಲ್ಲಿ ಸಾಲ ಮರುಪಾವತಿಗೂ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಶೇ.8ರಷ್ಟು ಬಡ್ಡಿ ಸಬ್ಸಿಡಿ ತುಂಬಲಿದೆ ಎಂದರು.
ದೇಶದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ 20 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ರೂ.1400 ಕೋಟಿಗೂ ಹೆಚ್ಚು ಹಣವನ್ನು ಫಲಾನುಭವಿಗಳಿಗೆ ಸಬ್ಸಿಡಿ ರೂಪದಲ್ಲಿ ಬಿಡುಗಡೆ ಮಾಡಿದೆ.
ಕ್ಲಿಕ್ ಮಾಡಿ ಓದಿ: Cruiser tire blast; ಕ್ರೂಸರ್ ವಾಹನದ ಟಯರ್ ಬ್ಲಾಸ್ಟ್ | 13 ಮಂದಿ ಪ್ರಾಣಾಪಯಾದಿಂದ ಪಾರು
ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೂ ಸುಮಾರು 20 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ನೋಂದಣಿ ಮಾಡಿಕೊಂಡಿದ್ದು, 8 ಲಕ್ಷ ಕುಶಲಕರ್ಮಿಗಳು ಉನ್ನತ ತರಬೇತಿಯನ್ನೂ ಪಡೆದಿದ್ದಾರೆ. ಈಗಾಗಲೇ 1.60 ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆದಿದ್ದಾರೆ. ಕುಶಲಕರ್ಮಿಗಳಿಗೆ ರೂ.15 ಸಾವಿರ ಟೂಲ್ ಕಿಟ್ ಪ್ರೋತ್ಸಾಹವನ್ನು ಮನೆ ಬಾಗಿಲಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಕಳಕಳಿ ಮತ್ತು ಕಾಳಜಿಯಿಂದ ದೇಶದ 18 ವಿವಿಧ ಕ್ಷೇತ್ರಗಳ ಅಡಿಯಲ್ಲಿ ಕುಲದ ಕಸುಬು ನಂಬಿ ಜೀವನ ನಡೆಸುತ್ತಿರುವ ವರ್ಗದವರಿಗೆ ಆರ್ಥಿಕ ನೆರವು, ಸ್ವಯಂ ಉದ್ಯೋಗ, ವ್ಯಾಪಾರ ವಹಿವಾಟು ಸೌಲಭ್ಯ ಕಲ್ಪಿಸುವ ಕಳೆದ ವರ್ಷ ಸೆ.17ರಂದು ರೂ.13 ಸಾವಿರ ಕೋಟಿ ವೆಚ್ಚದಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನಗೊಳಿಸಿದರು.
ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಬಡಿಗೆ ವೃತ್ತಿ ಮಾಡುವವರು, ದೋಣಿ ತಯಾರಿಸುವವರು, ಕಮ್ಮಾರ ವೃತ್ತಿ ಮಾಡುವವರು, ಕಲ್ಲುಕುಟಿಗ ವೃತ್ತಿ ಮಾಡುವವರು, ಟೈಲರಿಂಗ್, ಚಾಫೆ-ಕಸ ಪೊರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕ ವೃತ್ತಿ ಮಾಡುವವರು, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ದೋಬಿ, ಅಭರಣ ತಯಾರಕರು, ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿ, ಚಮ್ಮಾರ, ಪಾದರಕ್ಷೆ ತಯಾರಕರು, ಬೀಗ ತಯಾರಿಕಾ ಕುಶಲಕರ್ಮಿಗಳು ಸೇರಿದಂತೆ ಹೀಗೆ 18 ಬಗೆಯ ಕುಲಕಸುಬು ನಂಬಿ ಜೀವನ ನಡೆಸುವ ವಿಶ್ವಕರ್ಮ ಪಾಲುದಾರರು ಈ ಯೋಜನೆಯ ಫಲಾನುಭವಿಗಲಾಗಿದ್ದಾರೆ.
ಸರ್ಕಾರದ ಅಂಗಸಂಸ್ಥೆಯಾದ ನಕಾಫ್ ಸಂಸ್ಥೆಯ ತರಬೇತಿ ವ್ಯವಸ್ಥಾಪಕ ಉಮಾಕಾಂತ್ ಮನ್ನಾಳೆ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಡಿ ಚಿತ್ರದುರ್ಗ ನಗರದ ಅಮ್ಮ ಪಬ್ಲಿಕ್ ಶಾಲೆಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕ್ಲಿಕ್ ಮಾಡಿ ಓದಿ: BREAKING NEWS: ಗಂಡ ಹೆಂಡತಿಯ ಬರ್ಭರ ಕೊಲೆ | ಬೆಚ್ಚಿ ಬಿದ್ದಕೋಟೆ ನಾಡು
ಮಾಲಾಕಾರ್, ಬಾಸ್ಕೆಟ್ ಮೇಕರ್, ದೋಬಿ ಸೇರಿದಂತೆ ವಿವಿಧ ಬಗೆಯ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ತರಬೇತಿ ಕೋರ್ಸ್ ನಡೆಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 700 ಜನರಿಗೆ ತರಬೇತಿ ನೀಡಲಾಗಿದ್ದು, ಎಲ್ಲರಿಗೂ ಶಿಷ್ಯವೇತನ ಹಾಗೂ ಟೂಲ್ ಕಿಟ್ ವಿತರಣೆ ಹಾಗೂ ಸಾಲ-ಸೌಲಭ್ಯಕ್ಕೂ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇವಣ್ಣ ಸೇರಿದಂತೆ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಇದ್ದರು.
