
CHITRADURGA NEWS | 24 SEPTEMBER 2025
ಚಿತ್ರದುರ್ಗ: ಯುವ ಮುಖಂಡ ಪಿ.ರಘು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಇದನ್ನೂ ಓದಿ: ಹಿರಿಯೂರು | ನಾಳೆ ವಿದ್ಯುತ್ ವ್ಯತ್ಯಯ

ಕಳೆದ ವಿಧಾನಸಭೆ ಚುನಾವಣೆ ವೇಳೆ ಹೊಳಲ್ಕೆರೆ ವಿಧಾನಸಭೆಗೆ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ರಘು ಅವರು, ಭಾರೀ ಪೈಪೋಟಿ ನಡೆಸಿದ್ದರು.
ಹೊಳಲ್ಕೆರೆ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಆಂಜನೇಯ ಸ್ಪರ್ಧಿಸುತ್ತಿದ್ದು, ಈ ಕಾರಣಕ್ಕೆ ಕಾಂಗ್ರೆಸ್ ನಾಯಕರು ರಘು ಅವರಿಗೆ ಟಿಕೇಟ್ ನೀಡಿರಲಿಲ್ಲ.
ತೀವ್ರ ಪೈಪೋಟಿ ನಡೆಸಿ ಕೊನೆಗೆ ಹಿಂದೆ ಸರಿದ ಕಾರಣಕ್ಕೆ ಇಂದು ರಘು ಅವರಿಗೆ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಈ ಹಿಂದೆ ರಘು ಅವರ ಪತ್ನಿ ಸವಿತಾ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಅವರಿಗಾದರೂ ಹೊಳಲ್ಕೆರೆ ಟಿಕೇಟ್ ಕೊಡಿ ಎಂಬ ಬೇಡಿಕೆ ಇತ್ತು. ಸದಸ್ಯತ್ವ ಅಭಿಯಾನದಲ್ಲಿ ಛಾಪು ಮೂಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಂವಾದದಲ್ಲೂ ಭಾಗವಹಿಸಿದ್ದರು.
ಆದರೆ, ಹಿರಿಯ ನಾಯಕರಾದ ಎಚ್.ಆಂಜನೇಯ ಅವರಿಗೆ ಟಿಕೇಟ್ ನೀಡಲಾಗಿತ್ತಿ. ಈ ವೇಳೆ ರಘು ಅವರ ಬೆಂಬಲಿಗರು ನಿರಾಸೆಗೊಂಡಿದ್ದರು. ಈ ಕಾರಣಕ್ಕೆ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ರಘು ಅವರ ಪತ್ನಿ ಸವಿತಾ ಅವರಿಗೆ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ಸ್ಥಾನ ಘೋಷಣೆಯಾಗಿತ್ತು. ಆದರೆ, ಅವರು ಜವಾಬ್ದಾರಿ ವಹಿಸಿಕೊಂಡಿರಲಿಲ್ಲ.
ಇದನ್ನೂ ಓದಿ: ಜಾತಿ ಗಣತಿ ಬದಲಿಗೆ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ನೀಡಲಿ | ತರಳಬಾಳು ಶ್ರೀ
ಈಗ ಬದಲಾವಣೆ ಮಾಡಿ, ಸವಿತಾ ಬದಲಾಗಿ ಅವರ ಪತಿ ರಘು ಅವರಿಗೆ ಆಯೋಗದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.
ರಘು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಯಾಗಿದ್ದು, ಸ್ವಯಂ ನಿವೃತ್ತಿ ಪಡೆದು ರಾಜಕಾರಣಕ್ಕೆ ಬಂದಿದ್ದರು. ಎಚ್.ಆಂಜನೇಯ ಸಚಿವರಾಗಿದ್ದ ಅವಧಿಯಲ್ಲಿ ಉತ್ತಮ ಒಡನಾಟ ಇಟ್ಟುಕೊಂಡಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
