ಮುಖ್ಯ ಸುದ್ದಿ
Loan; ಹತ್ತು ಲಕ್ಷದವರೆಗೆ ಸಾಲ ಪಡೆಯಲು ಅವಕಾಶ | ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ

CHITRADURGA NEWS | 16 SEPTEMBER 2024
ಚಿತ್ರದುರ್ಗ: ಸಹಕಾರ ಸಂಘದಿಂದ ನೀಡುವ ಸಾಲ(Loan)ವನ್ನು ಆಡಳಿತ ಮಂಡಳಿಯು ಹತ್ತು ಲಕ್ಷದವರೆಗೆ ಸಾಲ ಪಡೆಯಲು ಅವಕಾಶ ಕಲ್ಪಿಸಿದ್ದು, ಸದಸ್ಯರುಗಳು ಸೌಲಭ್ಯವನ್ನು ಪಡೆದುಕೊಂಡು ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಸಹಕಾರ ಸಂಘದ ಅಧ್ಯಕ್ಷ ಕೆ.ಪಿ.ಬಸವರಾಜ್ ಹೇಳಿದರು.
ಕ್ಲಿಕ್ ಮಾಡಿ ಓದಿ: Upper Bhadra Project Protest: ಯಾರ ಬಳಿ ನೋವು ತೋಡಿಕೊಳ್ಳಲಿ | ನೀರಾವರಿ ಅನುಷ್ಠಾನ ಹೋರಾಟ ಸಮಿತಿ

ಕೆ.ಇ.ಬಿ.ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ವಿಭಾಗೀಯ ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿ ನೌಕರರ ಪತ್ತಿನ ಸಹಕಾರ ಸಂಘದ 64 ನೇ ವಾರ್ಷಿಕ ಮಹಾಸಭೆ ಉದ್ಗಾಟಿಸಿ ಮಾತನಾಡಿದರು.
ಚಿತ್ರದುರ್ಗ ವಲಯ ವಿದ್ಯುತ್ ಮುಖ್ಯ ಇಂಜಿನಿಯರ್ ರೋಮರಾಜ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯವನಾಗಿ 1993 ರಿಂದ ಸಹಕಾರ ಸಂಘದ ಕಾರ್ಯವೈಖರಿಯನ್ನು ನೋಡಿದ್ದೇನೆ. ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತದಿಂದ ಸಹಕಾರ ಸಂಘ ಅಭಿವೃದ್ದಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಹಕಾರ ಸಂಘದ ಕಾರ್ಯದರ್ಶಿ ವೀರೇಶ್ ಮಾತನಾಡಿ, 2023-24 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ ಸಹಕಾರ ಸಂಘವು ಸದರಿ ಸಾಲಿನಲ್ಲಿ 1 ಕೋಟಿ 38 ಲಕ್ಷ ರೂ.ಗಳ ಲಾಭ ಗಳಿಸಿದೆ ಎಂದರು.
ಕ್ಲಿಕ್ ಮಾಡಿ ಓದಿ: BJP: ನಗರಸಭೆ ಉಪಾಧ್ಯಕ್ಷೆ ಸೇರಿ ನಾಲ್ವರ ಉಚ್ಛಾಟನೆ | ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ
ವಾರ್ಷಿಕ ಮಹಾಸಭೆಯಲ್ಲಿ ಅಧಿಕಾರಿಗಳಾದ ಮೇಘರಾಜ್, ಮಲ್ಲಿಕಾರ್ಜುನ್, ತಿಮ್ಮಣ್ಣ, ಕಿರಣ್‍ರೆಡ್ಡಿ, ಷಣ್ಮುಖಪ್ಪ, ಮಹೇಶ್, ಶಿವರಾಂ ಹಾಗೂ ಸಂಘದ ಪದಾಧಿಕಾರಿಗಳಾದ ರವಿ, ಆರ್.ರಮೇಶ್, ಸುರೇಶ್‍ಬಾಬು, ಆರ್.ರವಿಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ಮತ್ತು ಸಹಕಾರ ಸಂಘದ ನಿರ್ದೇಶಕರುಗಳು ಭಾಗವಹಿಸಿದ್ದರು.
