Connect with us

    Gnanasiri Award; ನಿವೃತ್ತ ಶಿಕ್ಷಕ ಹೊನ್ನೂರುಸಾಬ್ ಗೆ ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನಸಿರಿ ಪ್ರಶಸ್ತಿ

    ನಿವೃತ್ತ ಶಿಕ್ಷಕ ಹೊನ್ನೂರುಸಾಬ್ ಗೆ ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನಸಿರಿ ಪ್ರಶಸ್ತಿ

    ಮುಖ್ಯ ಸುದ್ದಿ

    Gnanasiri Award; ನಿವೃತ್ತ ಶಿಕ್ಷಕ ಹೊನ್ನೂರುಸಾಬ್ ಗೆ ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನಸಿರಿ ಪ್ರಶಸ್ತಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 SEPTEMBER 2024

    ಚಿತ್ರದುರ್ಗ: ಭಯದಿಂದ ಭಕ್ತಿ ಉದಯಿಸುತ್ತದೆ. ಭಕ್ತಿಯಿಂದ ಜ್ಞಾನ ಸಿದ್ದಿಯಾಗುತ್ತದೆ. ಜ್ಞಾನದಿಂದ ವೈರಾಗ್ಯ ಉಂಟಾಗಿ ಈ ಬದುಕನ್ನು ಸಾರ್ಥಕಗೊಳಿಸುತ್ತದೆ ಎಂದು ಶತಾಯಿಷಿ, ಸಂಸ್ಕೃತಿ ಚಿಂತಕ, ನಿವೃತ್ತ ಶಿಕ್ಷಕರಾದ ಹೊನ್ನೂರುಸಾಬ್ ಹೇಳಿದರು.

    ಕ್ಲಿಕ್ ಮಾಡಿ ಓದಿ: Kannada Novel: ಕರುವುಗಲ್ಲು ನೆಟ್ಟು ಊರು ಕಟ್ಟಿದರು – 2

    ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿ ನವಗ್ರಾಮ ನೆಲ್ಲಿಕಟ್ಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನಸಿರಿ ಪ್ರಶಸ್ತಿ(Nellikatte Marakkamate Gnanasiri Award) ಸ್ವೀಕರಿಸಿ ಮಾತಾಡಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆತ್ತಹೊತ್ತವರ ಸಾಕುವುದರೊಳಗೆ ಜೀವನ ತೃಪ್ತಿಯಿದೆ. ಅಂತಹ ಸಂತೃಪ್ತ ಜೀವನ ಮಾರಕ್ಕಮಾತೆಯ ಮಕ್ಕಳದು. ಆ ಮಹಾತಾಯಿಯ ಹೆಸರನ್ನು ಚಿರಾಯುವಾಗಿಸಲಾಗಿದೆ ಎಂದರು.

    ನೆಲ್ಲಿಕಟ್ಟೆ ಮಾರಕ್ಕಮಾತೆ ಸಂಗೀತ ಸಿರಿ ಪ್ರಶಸ್ತಿಯನ್ನು ಅನನ್ಯಕಲಾವಿದ ಬಸವರಾಜ್ ಹುಲ್ಲೆಹಾಳು ಅವರಿಗೆ ಪ್ರದಾನ ಮಾಡಿದ ಯುಗಧರ್ಮರಾಮಣ್ಣ ಅವರು ಈ ಲೋಕದ ಸಂಕಟಗಳಿಂದ ಪಾರಾಗಲು ಜನಸೇವೆಯು ಸರಿದಾರಿ ತೋರಿಸುವುದು ಎಂದರು.

    ಕ್ಲಿಕ್ ಮಾಡಿ ಓದಿ: Muruga Math; ಮುರುಘಾ ಮಠದಲ್ಲಿ ಚಿಂತಕರ ಸಭೆ | ಜಯದೇವ ಶ್ರೀಗಳ ಸಂಸ್ಮರಣ ಗ್ರಂಥ ಹೊರತರಲು ತೀರ್ಮಾ‌ನ 

    ಬೆಳಗಟ್ಟದ ಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷರಾದ ಅಮ್ಮಮಹದೇವಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ದಿವ್ಯಸಾನಿದ್ಯ ವಹಿಸಿ ಮಾತಾಡಿದ ಬಸವನಾಗೀದೇವಶರಣರು ಆಶೀರ್ವಾದ ನುಡಿಗಳಾನ್ನಾಡಿದರು.

    ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೆ.ನಾಡಿಗ್, ಸಿ.ಎಂ.ನೇತ್ರಾವತಿ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top