CHITRADURGA NEWS | 04 JANUARY 2026
ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಗರ್ಭಗುಡಿಗೆ ದಾನಿಗಳ ನೆರವಿನಿಂದ ಚಿನ್ನಲೇಪಿತ ಬಾಗಿಲವಾಡ ಅಳವಡಿಸಿದ್ದು, ಭಕ್ತಾದಿಗಳಿಗೆ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ. ಸುಮಾರು 30 ಲಕ್ಷ ವೆಚ್ಚದಲ್ಲಿ ಚಿನ್ನಲೇಪನ ಕಾರ್ಯವನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಹೊಳಲ್ಕೆರೆ, ಭರಮಸಾಗರಕ್ಕೆ ಬಿಜೆಪಿ ಮಂಡಲ ಅಧ್ಯಕ್ಷರ ನೇಮಕ
ಈ ಹಿಂದೆ ಕಲ್ಲಿನ ಗೋಡೆಗಳ ಮೇಲೆ ತಾಮ್ರದ ಬಾಗಿಲವಾಡ ಅಳವಡಿಸಲಾಗಿತ್ತು. ಇದೀಗ ತಾಮ್ರದ ಶೀಟ್ ಮತ್ತು ಚಿತ್ರಾಕೃತಿಗಳಿಗೆ ಚಿನ್ನದ ಲೇಪನ ಮಾಡಲಾಗಿದೆ. ಹೀಗಾಗಿ ದೇವಾಲಯದ ಗರ್ಭಗುಡಿಯಲ್ಲಿ ಚಿನ್ನ ಲೇಪನದ ಬಾಗಿಲವಾಡದ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಸುಮಾರು 11 ಅಡಿ ಎತ್ತರ ಮತ್ತು 21 ಅಡಿ ಅಗಲವಿರುವ ಈ ಬಾಗಿಲವಾಡದಲ್ಲಿ ಪ್ರಮುಖವಾಗಿ ತಾಮ್ರವನ್ನು ಬಳಸಲಾಗಿದೆ. ಇದರ ಮೇಲೆ ಬೆಳ್ಳಿ ಮತ್ತು ಬಂಗಾರದ ಲೇಪನ ಮಾಡಲಾಗಿದೆ.
ಒಟ್ಟಾರೆ 157.2 ಕೆ.ಜಿ ತೂಕವಿರುವ ಇದರಲ್ಲಿ ಎಂಟು ವಿಗ್ರಹಗಳು ಮತ್ತು ತಾಮ್ರದ ಶೀಟ್‌ನ್ನು ಒಳಗೊಂಡಿದೆ. ಇವುಗಳಲ್ಲಿ 32 ಕೆ.ಜಿ ತೂಕದಷ್ಟು ಹಿತ್ತಾಳೆಯ ವಿಗ್ರಹಗಳಿವೆ. ಇವುಗಳಿಗೆ ನಿಕ್ಕಲ್ ಎಲೆಕ್ಟ್ರೋಪ್ಲೇಟಿಂಗ್ ಮಾಡಲಾಗಿದೆ.
ಗಂದರ್ವ, ಆನೆ, ಸಿಂಹ, ಗಂಡಬೇರುಂಡ, ದೀಪದ ಲಕ್ಷ್ಮಿ, ಗಣಪತಿ ಮತ್ತು ಗಜ ಲಕ್ಷ್ಮಿಯರ ವಿಗ್ರಹಗಳು ಬಾಗಿಲವಾಡದಲ್ಲಿವೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯಕ್ಕೆ ಬಾಗೀನ | ಸಚಿವ ಡಿ.ಸುಧಾಕರ್, ಜಿಲ್ಲೆಯ ಶಾಸಕರು ಭಾಗೀ
ಪ್ರವೇಶದ ಎರಡು ಬದಿಯಲ್ಲಿ ನವಿಲುಗಳು ಮತ್ತು ದೀಪಗಳನ್ನು ಅಳವಡಿಸಿರುವುದು ವಿಶೇಷ. ಬಾಗಿಲಿನ ಮೇಲ್ಭಾಗದಲ್ಲಿ ಹೂಮಾಲೆಯನ್ನು ಕೈಯಲ್ಲಿ ಹಿಡಿದಿರುವ ಗಂಧರ್ವರ ಚಿತ್ರಗಳಿವೆ. ತಳಭಾಗದಲ್ಲಿ ಆನೆಗಳ ಚಿತ್ರಗಳಿವೆ.
ಎರಡೂ ಬದಿಯಲ್ಲಿ ಹೂವಿನ ಚಿತ್ರಗಳಿಂದ ಅಲಂಕರಿಸಲಾಗಿದೆ. ಚಿನ್ನಲೇಪನದ ಬಾಗಿಲವಾಡದ ನಡುವಿರುವ ನಿಕ್ಕಲ್ ಎಲೆಕ್ಟ್ರೋಪ್ಲೇಟಿಂಗ್ ವಿಗ್ರಹಗಳು ಗಮನ ಸೆಳೆಯುತ್ತವೆ.
ಅತ್ಯಾಧುನಿಕ ವಿಧಾನದಲ್ಲಿ ತಾಮ್ರದ ಮೇಲೆ ನಿಕ್ಕಲ್ ಮತ್ತು ಬಂಗಾರದ ಲೇಪನ ಮಾಡಲಾಗಿದೆ. ಇದಕ್ಕೂ ಮುಂಚೆ ಕ್ಲೀನಿಂಗ್ ಮತ್ತು ಬಫಿಂಗ್ ಮಾಡಲಾಗಿದೆ. ತಾಮ್ರದ ಶೀಟ್‌ಗಳ ಮೇಲೆ 8 ರಿಂದ 10 ಮೈಕ್ರಾನ್ ದಪ್ಪದ ಚಿನ್ನದ ಲೇಪನ ಮಾಡಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 03 | ಹತ್ತಿ ರೇಟ್ ಎಷ್ಟಿದೆ?
ಹೊಸ ವರ್ಷದ ಆರಂಭದಲ್ಲಿ ದೊಡ್ಡ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ದೇವಾಲಯ ದರ್ಶನ ಮತ್ತು ದಾಸೋಹದಲ್ಲಿ ಹೆಚ್ಚುವರಿ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.
ಅಭಿಪ್ರಾಯ
ಸ್ಥಳೀಯ ಮೂಲದ ಶಿಲ್ಪಿಗಳಾದ ಸಿ.ಮಂಜುನಾಥ ಮತ್ತು ಸಹೋದರರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೊದಲಿದ್ದ ಎಲ್ಲ ಕಲಾಕೃತಿಗಳನ್ನು ಮೂಲರೂಪದಲ್ಲಿಯೇ ಉಳಿಸಿಕೊಂಡು ಚಿನ್ನದ ಲೇಪನ ಮಾಡಲಾಗಿದೆ.
ಗಂಢಬೇರುಂಡ, ಆನೆ ಸೇರಿದಂತೆ ನಾನಾ ಹಿತ್ತಾಳೆಯ ಪ್ರತಿಮೆಗಳು ಹೊಸ ರೂಪ ಪಡೆದಿವೆ. ಹೊಸವರ್ಷದ ದಿನ ಪ್ರಾಂಗಣದ ವಿಶೇಷ ಅಲಂಕಾರಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.
-ಹೆಚ್.ಗಂಗಾಧರಪ್ಪ, ಕಾರ್ಯನಿರ್ವಾಹಕ ಅಧಿಕಾರಿಗಳು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
