ಚಿತ್ರದುರ್ಗನ್ಯೂಸ್.ಕಾಂ
ಪವಾಡಪುರುಷ, ಬಯಲು ಸೀಮೆಯ ಜಲಪುರುಷ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರ ಕಾರ್ತಿಕೋತ್ಸವದ ಪ್ರಯುಕ್ತ ಶುಕ್ರವಾರ ಸಡಗರ, ಸಂಭ್ರಮದಿಂದ ಚಿಕ್ಕ ರಥೋತ್ಸವ ಅದ್ದೂರಿಯಾಗಿ ಸಾಗಿತು.
ಇದನ್ನೂ ಓದಿ: ವಾರಾಂತ್ಯಕ್ಕೆ ಪವರ್ ಶಾಕ್; ಎರಡು ದಿನ ಸಮಸ್ಯೆ
ರಥೋತ್ಸವದ ಅಂಗವಾಗಿ ಉತ್ಸವ ಮೂರ್ತಿಗೆ ಚಿನ್ನದ ಕಿರೀಟ, ಚಿನ್ನದ ಸರ ತೊಡಿಸಲಾಗಿತ್ತು. ಮೂರ್ತಿಯನ್ನು ಮಧ್ಯಾಹ್ನ 3.30ಕ್ಕೆ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಒಳಮಠದ ಮಂಭಾಗದಿಂದ ಆರಂಭವಾದ ರಥೋತ್ಸವ ನಂಧಿ ಧ್ವಜ, ಕರಡಿ ಮಜಲು ಸೇರಿದಂತೆ ದೇವಾಲಯದ ಸಾಂಪ್ರದಾಯಿಕ ವಾದ್ಯಗಳ ನಡುವೆ ವಾರೋತ್ಸವ ಬೀದಿಯಲ್ಲಿ ಚಲಿಸಿತು. ಭಕ್ತರು ರಥಕ್ಕೆ ತೆಂಗಿನಕಾಯಿ, ಬಾಳೆಹಣ್ಣು, ಚೂರುಬೆಲ್ಲ ಮೆಣಸು ಮಂಡಕ್ಕಿಯನ್ನು ಸಮರ್ಪಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ; ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಇಂದು ಮೊದಲ ಸಭೆ
ರಥವು ಆಂಜನೇಯಸ್ವಾಮಿ ದೇವರ ದೇವಾಲಯದ ಮಾರ್ಗದಲ್ಲಿ ಸಾಗಿ ವೀರಭದ್ರನ ಓಣಿಗೆ ಬಂದಾಗ ಹರಕೆ ಹೊತ್ತ ಯುವಕರು ಬಾಯಿಗೆ ಪಂಚಲೋಹ ಕಡ್ಡಿಗಳನ್ನು ಸಿಕ್ಕಿಸಿಕೊಂಡು ನೃತ್ಯ ಮಾಡಿ ಗಮನ ಸೆಳೆದರು. ಇದೇ ವೇಳೆ ದೇವರಿಗೆ ಚಿನ್ನದ ಕಿರೀಟ, ಚಿನ್ನದ ಸರಗಳಿಂದ ಅಲಂಕಾರ ಮಾಡಿದ್ದರಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಂಜೆ ಗುಡಿ ತುಂಬಿಸಲಾಯಿತು.
ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರದಲ್ಲಿ ಡಿ 18 ರವರೆಗೆ ಕಾರ್ತಿಕೋತ್ಸವ ನಡೆಯಲಿದೆ. ಕಾರ್ತೀಕಮಾಸ ಶ್ರವಣ ನಕ್ಷತ್ರದ ಡಿ.16ರಂದು ರಥೋತ್ಸವ ನಡೆಯುತ್ತದೆ.
ಇದನ್ನೂ ಓದಿ: ಜಂಗಮ ವಟುಗಳಿಗೆ ಉಚಿತ ಶಾಸ್ತ್ರೋಕ್ತ ದೀಕ್ಷೆ; ಕಾಡಸಿದ್ದೇಶ್ವರ, ರಟ್ಟೀಹಳ್ಳಿ ಸ್ವಾಮೀಜಿ ಸಾನಿಧ್ಯ
16 ರಂದು ಬೆಳಿಗ್ಗೆ 8 ಗಂಟೆಗೆ ಕಳಸಪೂಜೆ, 10 ಗಂಟೆಗೆ ರಥಕ್ಕೆ ಅನ್ನ ಸಂತರ್ಪಣೆ, ಮಧ್ಯಾಹ್ನ 2 ಗಂಟೆಗೆ ರಥೋತ್ಸವ,17 ರಂದು ಸ್ವಾಮಿಗೆ ಹೂವಿನ ಪಲ್ಲಕೋತ್ಸವ, ರಾತ್ರಿ 7 ಗಂಟೆಗೆ ಓಕಳಿ, 18 ರಂದು ಬೆಳಿಗ್ಗೆ 5 ಗಂಟೆಗೆ ಹೊರ ಮಠಕ್ಕೆ ಹೋಗುವುದು, ಬೆಳಿಗ್ಗೆ 8 ಗಂಟೆಗೆ ಪಲ್ಲಕೋತ್ಸವ, ಸಂಜೆ 7 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.
ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಸಿಬ್ಬಂದಿ ಸತೀಶ್, ಮಂಜುನಾಥ್, ಶಿವಕುಮಾರ್, ಶಂಕರಪ್ಪ, ಗ್ರಾಮಸ್ಥರಾದ ಕೆ.ಜಿ.ಆರ್.ಮಲ್ಲಿಕಾರ್ಜುನ, ಎನ್.ಮಹಾಂತಣ್ಣ, ಗಿರಿಯಪ್ಪ, ಆರ್.ಟಿ.ತಿಪ್ಪೇಸ್ವಾಮಿ, ರುದ್ರಯ್ಯ, ದಳವಾಯಿರುದ್ರಮುನಿ, ಉಮೇಶ್, ಶಿವಕುಮಾರ್ ಭಂಡಾರಿ, ಮಾರ್ಕಾಂಡೇಯ, ಜೀವಿತ್‌ಕುಮಾರ್, ಗಂಗಣ್ಣ, ಯೋಗೀಶ್ ಅವರು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
