
CHITRADURGA NEWS | 25 FEBRUARY 2026
ಚಿತ್ರದುರ್ಗ: ಚಿತ್ರದುರ್ಗ ಸರ್ಕಾರಿ ಶಾಲೆ ಶಿಕ್ಷಕಿ ಎ.ಎಂ.ಶೋಭಾ ʼರಾಷ್ಟ್ರಮಟ್ಟದ ಶಿಕ್ಷಣ ರತ್ನʼ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬೆಳಕು ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಟ್ರಸ್ಟ್ ಹಾಗೂ ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಸಹಯೋಗದಲ್ಲಿ ನಡೆಯುವ ರಾಷ್ಟ್ರಮಟ್ಟದ ಕಲಾ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಮಾರ್ಚ್ 1 ರವರೆಗೆ ವಿಸ್ತರಣೆ
ದಾವಣಗೆರೆಯ ಕನ್ನಡ ಭವನದಲ್ಲಿ 2026 ಮಾರ್ಚ್ 1 ರಂದು ನಡೆಯುವ ಸಮಾವೇಶದಲ್ಲಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಶೋಭಾ ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಎ.ಎಂ.ಶೋಭಾ ಸಂಕ್ಷಿಪ್ತ ಪರಿಚಯ:
ನಗರದ ಜಿಎಚ್‌ಆರ್ ಲೇಔಟ್ ನಿವಾಸಿಯಾಗಿರುವ ಸರ್ಕಾರಿ ಶಾಲೆ ಶಿಕ್ಷಕಿ ಶೋಭಾ ಎ.ಎಂ ಅವರು ಎಂಎ, ಬಿ.ಇಡಿ, ಪಿಜಿ ಡಿಎಲ್‌ಟಿ ಶಿಕ್ಷಣ ಪಡೆದಿದ್ದಾರೆ.
ಕಥೆ, ಕವನ, ಚುಟುಕು, ಗಜಲ್ ರಚನೆ ಮತ್ತು ವಾಚನದ ಸೃಜನಶೀಲ ಹವ್ಯಾಸ ಹೊಂದಿದ್ದು, ಇದರೊಟ್ಟಿಗೆ ಟ್ರಕಿಂಗ್, ಪ್ರವಾಸ, ಪ್ರಕೃತಿ ವೀಕ್ಷಣೆ , ವೈಜ್ಞಾನಿಕ ಮತ್ತು ವೈಚಾರಿಕ ವಿಚಾರ ವಿನಿಮಯ, ವಚನಗಳ ಅಧ್ಯಯನ ಮತ್ತು ಗಾಯನ, ಸಾಹಿತ್ಯ ಪುಸ್ತಕಗಳ ಅಧ್ಯಯನದಲ್ಲೂ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಡಿಕೆ ಧಾರಣೆ | 24 ಫೆಬ್ರವರಿ | ರಾಶಿ ಬೆಲೆಯಲ್ಲಿ ಮತ್ತೆ ತುಸು ಏರಿಕೆ
ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದು, ಕಾಲೇಜು ಹಂತದಿಂದಲೇ ಸುದ್ದಿ ಅಕ್ಷಯ, ಜನತಾವಾಣಿ, ಶಿರೋರತ್ನ, ಜನಮಿತ್ರ, ಜನಪತ್ರಿಕೆ, ಗಿರಿ ತರಂಗ ಇನ್ನಿತರೆ ಪತ್ರಿಕೆಗಳಿಗೆ ಕವನ ಬರೆದಿದ್ದಾರೆ.
ಈ ಹಿಂದೆ ಕ್ಲಸ್ಟರ್ ಹಂತದ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಶೋಭಾ ಭಾಜನರಾಗಿದ್ದು, ಕಳೆದ 25 ವರ್ಷಗಳಿಂದ ನಾಡಿನ ಪ್ರತಿಷ್ಠಿತ ಮುರುಘಾ ಮಠ ನಡೆಸುವ ವಚನ ಕಮ್ಮಟ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳ ರ್ಯಾಂಕ್ ಸಾಧನೆಗಾಗಿ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರಿಂದ ಸನ್ಮಾನಿತರಾಗಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಭದ್ರಾ ಯೋಜನೆ ನೊಂದಣಿ ಹೆಚ್ಚಿಸಿ | ಬ್ಯಾಂಕುಗಳಿಗೆ 100 ದಿನಗಳ ಟಾರ್ಗೆಟ್ ಕೊಟ್ಟ ಡಾ.ಆಕಾಶ್
ಕೋಟೆ ನಾಡಿನ ಹೆಸರಾಂತ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಲ್ಲಿ 15 ವರ್ಷಗಳ ಅವಿನಾಭಾವ ಸಂಬಂಧ ಜೊತೆಗೆ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದ್ದಾರೆ. ವಿಜಯಪುರದಲ್ಲಿ ನಡೆದ ಶ್ರೀ ಬಸವ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಬಿಜಾಪುರದಲ್ಲಿ ಕಾರ್ಯಕ್ರಮದ ನಿರ್ವಹಣೆ ಮತ್ತು 2015 ಮತ್ತು2016ನೇ ಸಾಲಿನಲ್ಲಿ ಸನ್ಮಾನಿತರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಸೇವಾ ರತ್ನ ಪ್ರಶಸ್ತಿ ಮತ್ತು ಪುರಸ್ಕಾರ 2021 ರಲ್ಲಿ 2023 ರಲ್ಲಿ ಚೊಚ್ಚಲ ಕವನಗುಚ್ಛ “ಮನದನಿ”ಲೋಕಾರ್ಪಣೆಯಾಗಿದೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ವತಿಯಿಂದ 2024 ರಲ್ಲಿ ಚೈತನ್ಯ ಶ್ರೀ ಪ್ರಶಸ್ತಿ, ಕಳೆದ ಎರಡು ಮೂರು ವರ್ಷಗಳಿಂದ ಸತತವಾಗಿ ದಿನಕ್ಕೊಂದು ಚುಟುಕು ರಚನೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
