CHITRADURGA NEWS | 21 APRIL 2025
ಹೊಸದುರ್ಗ: ನಿವೇಶನ ಹಾಗೂ ಕಟ್ಟಡಕ್ಕೆ ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತರ ಬಲೆಗೆ ಬಿದಿದ್ದಾರೆ.
ಇದನ್ನೂ ಓದಿ: ಸಾಲ ನೀಡಲು ಲಂಚದ ಬೇಡಿಕೆ | ಡಿಸಿಸಿ ಬ್ಯಾಂಕ್ ನೌಕರ ಲೋಕಾಯುಕ್ತ ಬಲೆಗೆ
ಹೊಸದುರ್ಗ ಪುರಸಭೆಯ ಮುಖ್ಯಾಧಿಕಾರಿ ತಿಮ್ಮರಾಜು 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇಂದು ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಘಟನೆಯ ಪೂರ್ಣ ವಿವರ:
ಹೊಸದುರ್ಗ ಪಟ್ಟಣದ ಡಿಎಚ್‌ಇ ಕುಮಾರ್ ಎಂಬುವವರ ನಿವೇಶನ ಹಾಗೂ ಕಟ್ಟಡದ ಇ-ಸ್ವತ್ತು ಮಾಡಿಕೊಡಲು ಅವರ ಪರವಾಗಿ ಪುರಸಭೆ ಸದಸ್ಯ ಎನ್.ಶಂಕರಪ್ಪ ಪುರಸಭೆಗೆ ಅಗತ್ಯ ದಾಖಲೆ ಒದಗಿಸಿದ್ದಾರೆ.
ಇದನ್ನೂ ಓದಿ: 60 ಸಾವಿರದ ಗಡಿ ದಾಟಿದ ಅಡಿಕೆ ರೇಟ್
ಆದರೆ, ಇ-ಸ್ವತ್ತು ಮಾಡಿಕೊಡದೆ, ಸತಾಯಿಸಿದ್ದು, ಕೇಳಿದಾಗ ಸಬೂಬು ಹೇಳಿದ್ದಾರೆ. ಕೊನೆಗೆ ೫೦ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಪಿರ್ಯಾದಿ ಶಂಕರಪ್ಪ 25 ಸಾವಿರಕ್ಕೆ ಒಪ್ಪಿಸಿದ್ದು, ಈ ಸಂಭಾಷಣೆಯನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಕೊಂಡು, ಲಂಚ ಕೊಡಲು ಇಷ್ಟವಿಲ್ಲದೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಭರ್ಜರಿ ಸುರಿದ ಅಶ್ವಿನಿ ಮಳೆ | ಮೊದಲ ಮಳೆಗೆ ತುಂಬಿ ಹರಿದ ಬ್ಯಾರೇಜ್
ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು, ಹೆಚ್ಚುವರಿ ಪೊಲೀಸ್ ಉಪಾಧೀಕ್ಷಕರಾದ ಎನ್.ಮೃತ್ಯಂಜಯ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದ್ದಿ, ಈ ವೇಳೆ, ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಬಸವರಾಜ ಬಿ ಲಮಾಣಿ, ಮುಸ್ತಾಕ್ ಅಹಮ್ಮದ್, ಸಿಬ್ಬಂದಿಗಳಾದ ಜಿ.ಎಂ.ತಿಪ್ಪೇಸ್ವಾಮಿ, ಎಚ್.ಶ್ರೀನಿವಾಸ್, ಎಸ್.ಆರ್.ಪುಷ್ಪ, ಮಂಜನಾಥ್, ಎಲ್.ಜಿ.ಸತೀಶ್, ರಾಜೇಶ್, ಎಂ.ವೀರೇಶ್, ಕೆ.ಟಿ.ಮಾರುತಿ, ಆರ್.ವೆಂಕಟೇಶ್ ಕುಮಾರ್, ಡಿ.ಮಾರುತಿ, ಟಿ.ವಿ.ಸಂತೋಷ್. ಎನ್.ಎಲ್.ಶ್ರೀಪತಿ ಕರ್ತವ್ಯದಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
