CHITRADURGA NEWS | 21 APRIL 2025
ಚಿತ್ರದುರ್ಗ: ಜಿಲ್ಲೆಯಲ್ಲಿ ಗುಡುಗು, ಸಿಡಿಲು, ವಿಪರೀತ ಗಾಳಿ ಸಹಿತ ಉತ್ತಮವಾದ ಮಲೆಯಾಗಿದೆ.
Also Read: ಬಬ್ಬೂರು ಕೃಷಿ ತರಬೇತಿ ಕೇಂದ್ರಕ್ಕೆ ರಾಜ್ಯಮಟ್ಟದ ಅವಾರ್ಡ್ | ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಆರ್.ರಜನಿಕಾಂತ್

ಏಪ್ರಿಲ್ ತಿಂಗಳಲ್ಲೇ ಉತ್ತಮವಾದ ಮಳೆಯಾಗಿರುವುದರಿಂದ ರೈತರು ಖುಷಿಯಾಗಿದ್ದಾರೆ.
ಅಶ್ವಿನಿ ಮಳೆ ಬರುವುದು ಅಷ್ಟಕ್ಕಷ್ಟೇ ಎನ್ನುವ ನಂಬಿಕೆ ಹೊಂದಿರುವ ಬಯಲು ಸೀಮೆಯ ರೈತರಿಗೆ ಈಗ ಸುರಿದಿರುವ ಮಳೆ ನೆಮ್ಮದಿ ನೀಡಿದೆ.
ಜಿಲ್ಲೆಯ ಕೆಲವೆಡೆ ಭಾನುವಾರ ಮಧ್ಯಾಹ್ನವೇ ಮಳೆ ಪ್ರಾರಂಭವಾಗಿತ್ತು. ಕೆಲವೆಡೆ ರಾತ್ರಿ ಶುರುವಾದ ಮಳೆ ಸತತ 1 ಗಂಟೆ ಕಾಲ ಹದವಾಗಿ ಸುರಿಯಿತು. ಆನಂತರ ತಡರಾತ್ರಿ ಮತ್ತೊಂದು ಹಂತದಲ್ಲಿ ಮಳೆಯಾಗಿದೆ.
ಗಾಳಿ ಮಳೆಗೆ ಮರ ಗಿಡಕ್ಕೆ ಹಾನಿ:
ವಿಪರೀತ ಗಾಳಿಯೊಂದಿಗೆ ಮಳೆ ಪ್ರಾರಂಭವಾಗಿದ್ದು, ಸಾಕಷ್ಟು ಕಡೆಗಳಲ್ಲಿ ಬೆಳೆ ಹಾನಿಯಾಗಿದೆ. ಬಾಳೆ, ಪಪ್ಪಾಯ ತೋಟಗಳಿಗೆ ಸಾಕಷ್ಟು ಹಾನಿಯಾಗಿದೆ. ಅಲ್ಲಲ್ಲಿ ಅಡಿಕೆ ಮರಗಳು ನೆಲಕ್ಕೆ ಬಿದ್ದಿವೆ.
Also Read: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಹೊಸದುರ್ಗ ತಾಲೂಕಿನ ಅತ್ತಿಮಗೆ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದ ಘಟನೆ ಆತಂಕ ಮೂಡಿಸಿತ್ತು.
ತುಂಬಿ ಹರಿದ ವೇದಾವತಿ ಬ್ಯಾರೇಜ್:
ಹಿರಿಯೂರು ತಾಲೂಕಿನ ಕಸವನಹಳ್ಳಿ ಬಳಿ ವೇದಾವತಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಬ್ಯಾರೇಜ್ ಮೊದಲ ಮಳೆಗೆ ತುಂಬಿ ಹರಿದಿರುವುದು ವಿಶೇಷವಾಗಿದೆ.
ಸಾಮಾನ್ಯವಾಗಿ ಆಗಸ್ಟ್ ನಂತರದ ಮಳೆಗಳು ಜಿಲ್ಲೆಯಲ್ಲಿ ಹದವಾಗಿ ಸುರಿಯುತ್ತವೆ. ಆದರೆ, ಪೂರ್ವ ಮುಂಗಾರಿನಲ್ಲೇ ಮಳೆ ಆಗುತ್ತಿರುವುದು ಈ ವರ್ಷದ ಕೃಷಿಗೆ ಆಶಾಭಾವನೆ ಮೂಡಿಸಿದಂತಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
