By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಅರ್ಜಿ ಅಹ್ವಾನ
    ವಿಕಲಚೇತನರ ರಾಷ್ಟ್ರ ಪ್ರಶಸ್ತಿ | ಅರ್ಜಿ ಆಹ್ವಾನ
    14 minutes ago
    ವಸತಿ ಯೋಜನೆಗೆ ಅರ್ಜಿ ಆಹ್ವಾನ
    26 minutes ago
    ಮುಖ್ಯಮಂತ್ರಿ ಸಿದ್ದರಾಮಯ್ಯ
    ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ | ಬಳಿಕ PRESS MEET | ಸಂವಿಧಾನವೇ ಧರ್ಮ | ಮತದಾರರೇ ದೇವರು ಎಂದು ಭಾವುಕ
    2 hours ago
    ಕಾರಾಗೃಹ ಇಲಾಖೆಯಲ್ಲಿ ಸೈನಿಕರ ನೇಮಕಾತಿ | ಮೇ.29 ರಿಂದ ನೇರ ಸಂದರ್ಶನ
    3 hours ago
    ಎಂ.ಆರ್.ಪಿಗಳಿಗೆ TRANSITION ಮಾಡ್ಯೂಲ್ ತರಬೇತಿ ಕಾರ್ಯಾಗಾರ
    ಡಯಟ್ ನಲ್ಲಿ ತಾಲೂಕು ಹಂತದ ಎಂ.ಆರ್.ಪಿಗಳಿಗೆ TRANSITION ಮಾಡ್ಯೂಲ್ ತರಬೇತಿ ಕಾರ್ಯಾಗಾರ  
    5 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ | 5 ಜನರ ದುರ್ಮರಣ
    20 hours ago
    Accident between bike and car
    ಬೈಕ್‌ – ಕಾರು ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರು ಮೃತ
    4 days ago
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    1 month ago
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    1 month ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    2 months ago
  • ತಾಲೂಕು
    ತಾಲೂಕುShow More
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    3 days ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    6 days ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    2 weeks ago
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    3 weeks ago
    ಕೆರೆ ಹುಳೆತ್ತುವ ಕಾಮಗಾರಿಯನ್ನು ಸಾಣೆಹಳ್ಳಿ ಶ್ರೀ ವೀಕ್ಷಣೆ
    ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಶೇ.75 ರಷ್ಟು ಕೆಲಸ ಪೂರ್ಣ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 20 ಮೇ | ಚನ್ನಗಿರಿ ಸೇರಿ ರಾಜ್ಯದ ಅಡಿಕೆ ರೇಟ್‌
    1 week ago
    arecanut price list
    ಅಡಿಕೆ ಧಾರಣೆ | 19 ಮೇ | ಭೀಮಸಮುದ್ರ ಸೇರಿ ವಿವಿಧ ಮಾರುಕಟ್ಟೆಗಳ ರೇಟ್‌
    1 week ago
    arecanut price list
    ಅಡಿಕೆ ಧಾರಣೆ | 16 ಮೇ | ರಾಜ್ಯದ ಅಡಿಕೆ ಮಾರುಕಟ್ಟೆಗಳ ನೋಟ
    2 weeks ago
    arecanut price list
    ಅಡಿಕೆ ಧಾರಣೆ | 6 ಮೇ | ರಾಶಿ ಅಡಿಕೆ ಬೆಲೆ ಏರಿಕೆ
    3 weeks ago
    arecanut price list
    ಅಡಿಕೆ ಧಾರಣೆ | 30 ಏಪ್ರಿಲ್‌ | ಇಂದಿನ ಅಡಿಕೆ ರೇಟ್‌
    4 weeks ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಮೇ.28 | ಕೈಗೊಂಡ ಕೆಲಸಗಳು ನಿಧಾನ, ಆಧ್ಯಾತ್ಮಿಕ ಚಿಂತನೆ ಹೆಚ್ಚು
    10 hours ago
    today bhavishya
    ದಿನ ಭವಿಷ್ಯ | ಮೇ. 27 | ದೂರ ಪ್ರಯಾಣದ ಸೂಚನೆ, ಆರೋಗ್ಯದಲ್ಲಿ ಎಚ್ಚರ
    1 day ago
    today bhavishya
    ದಿನ ಭವಿಷ್ಯ | ಮೇ. 26 | ಹಠಾತ್ ಆರ್ಥಿಕ ಲಾಭ, ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ
    2 days ago
    today bhavishya
    ದಿನ ಭವಿಷ್ಯ | ಮೇ. 25 | ಉದ್ಯೋಗಗಳಿಗೆ ಅನುಕೂಲಕರ ವಾತಾವರಣ, ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು
    3 days ago
    today bhavishya
    ದಿನ ಭವಿಷ್ಯ | ಮೇ. 24 | ಹಠಾತ್ ಪ್ರಯಾಣದ ಸೂಚನೆ, ಅರೋಗ್ಯದಲ್ಲಿ ಎಚ್ಚರ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.27 | ರಾಗಿ, ಶೇಂಗಾ ರೇಟ್..
    1 day ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.25 | ಮೆಕ್ಕೆಜೋಳ, ರಾಗಿ ರೇಟ್..
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.23 | ಹತ್ತಿ ರೇಟ್….
    5 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಮೇ.22| ಮೆಕ್ಕೆಜೋಳ, ಶೇಂಗಾ ರೇಟ್..
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಪೂರ್ವಭಾವಿ ಸಭೆ
    ಹೊಳಲ್ಕೆರೆ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ | ಶಾಸಕ ಎಂ.ಚಂದ್ರಪ್ಪ 
    3 weeks ago
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    2 months ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 months ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    2 months ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    2 months ago
  • ಹಿರಿಯೂರು
    ಹಿರಿಯೂರುShow More
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 days ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    1 month ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    3 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    4 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    4 months ago
  • ಹೊಸದುರ್ಗ
    ಹೊಸದುರ್ಗShow More
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    3 days ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    6 days ago
    ಕುಂಚಿಟಿಗ ಮಠದಲ್ಲಿ ವಿಶ್ವ ತಾಯಂದಿರ ದಿನಾಚರಣೆ
    ತಾಯಂದಿರ ದಿನಾಚರಣೆ ವಿಶೇಷ | ಕುಂಚಿಟಿಗ ಮಠದಲ್ಲಿ ಮಾತೃ ಸಂಗಮ
    2 weeks ago
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    ಸಾಣೇಹಳ್ಳಿ ಮಠಕ್ಕೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮಸ್ಥರಿಂದ ದವಸ-ಧಾನ್ಯ ಸಮರ್ಪಣೆ
    3 weeks ago
    ಕೆರೆ ಹುಳೆತ್ತುವ ಕಾಮಗಾರಿಯನ್ನು ಸಾಣೆಹಳ್ಳಿ ಶ್ರೀ ವೀಕ್ಷಣೆ
    ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಶೇ.75 ರಷ್ಟು ಕೆಲಸ ಪೂರ್ಣ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 
    3 weeks ago
  • Life Style
    Life StyleShow More
    Indoor plants
    ಒಳಾಂಗಣ ಸಸ್ಯಗಳು ಸೊಳ್ಳೆಗಳ ಹಾವಳಿಗೆ ಕಾರಣವಾಗಬಹುದು ಎಚ್ಚರ
    9 hours ago
    microwave
    ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮೈಕ್ರೊವೇವ್‌ನಲ್ಲಿ ಬಿಸಿ ಮಾಡಬೇಡಿ
    10 hours ago
    fruit and drinking coffee
    ಹಣ್ಣು ತಿನ್ನುವುದು ಮತ್ತು ಕಾಫಿ ಕುಡಿಯುವುದರಿಂದ ವಯಸ್ಸಾಗುವುದು ನಿಧಾನವಾಗುತ್ತದೆಯಂತೆ; ಅಧ್ಯಯನದಲ್ಲಿ ಸಾಬೀತು
    1 day ago
    oily skin
    ಎಣ್ಣೆಯುಕ್ತ ಚರ್ಮ ಹೊಂದಿರುವವರು ಬೇಸಿಗೆಯಲ್ಲಿ ಈ ಆಹಾರಗಳನ್ನು ತಪ್ಪಿಸಿ
    1 day ago
    sweating good or bad
    ಬೆವರು ಸುರಿಯುವುದು ನಿಮ್ಮ ಚರ್ಮಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ? ತಿಳಿಯಿರಿ
    2 days ago
Reading: ಚಿತ್ರದುರ್ಗ ಜಿಲ್ಲೆಯ ಅಚ್ಚರಿ ಬಾಂಡ್ರಾವಿ ಕಮರದ ಕಾಡು | ಕಾಯಕಕ್ಕೆ ಸಂದ ಅತೀ ದೊಡ್ಡ ಗೌರವ ಕಾಡಿಗೆ ವನಪಾಲಕನ ಹೆಸರೇ ನಾಮಕರಣ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಸಂಡೆ ಸ್ಪಷಲ್

ಚಿತ್ರದುರ್ಗ ಜಿಲ್ಲೆಯ ಅಚ್ಚರಿ ಬಾಂಡ್ರಾವಿ ಕಮರದ ಕಾಡು | ಕಾಯಕಕ್ಕೆ ಸಂದ ಅತೀ ದೊಡ್ಡ ಗೌರವ ಕಾಡಿಗೆ ವನಪಾಲಕನ ಹೆಸರೇ ನಾಮಕರಣ

chitradurganews.com
Last updated: 27 August 2023 04:45
chitradurganews.com
3 years ago
Share
Molakalmuru Bandravi Forest Chitradurga News
SHARE

ಬಹಳ ಅಪರೂಪದ ರಾಶಿ ರಾಶಿ ಜಮರದ ಮರಗಳಿಂದಲೇ ತುಂಬಿರುವ ಕಮರದ ಅರಣ್ಯ ಬಾಂಡ್ರಾವಿ (ಮೊಳಕಾಲ್ಮೂರು ತಾಲೂಕಿನ ಬಾಂಡ್ರಾವಿ ಕಾಡು) ಕುರಿತು ಇಂದಿನ ಸಂಡೆ ಸ್ಪಷಲ್ ವಿಶೇಷ ಲೇಖನ.

Contents
ಕಮರದ ಅರಣ್ಯ ಪ್ರದೇಶದ ಬಾಂಡ್ರಾವಿವನಪಾಲಕ ಶ್ರೀ ನಾಗಪ್ಪ ಜೆ. ಮೇಟಿ ಬಾಂಡ್ರಾವಿ ಅರಣ್ಯ

ಚಿತ್ರದುರ್ಗ ನ್ಯೂಸ್: ಕಲಾಕೃತಿಗಳಂತೆ ಕಾಣುವ ರಾಶಿ ರಾಶಿ ಹೆಬ್ಬಂಡೆಗಳು. ಮೈಲು ದೂರದವರೆಗೂ ದೃಷ್ಟಿ ಹಾಯಿಸುವಷ್ಟು ಬಟಾ ಬಯಲು. ಅಪರೂಪದ ಮಳೆ. ಇಲ್ಲಿನ ಜನಜೀವನವೇ ಸವಾಲು ಅನ್ನಿಸುವಂತಹ ವಾತಾವರಣ ಹೊಂದಿರುವ ಚಿತ್ರದುರ್ಗ ಜಿಲ್ಲೆಯ ಈಶಾನ್ಯ ಮೂಲೆಯ ಮೊಳಕಾಲ್ಮೂರು ತಾಲೂಕು ಹಲವು ವಿಸ್ಮಯಗಳ ಆಗರ.

chitradurga News Sunday Special Storyಬರದ ನೈಜ ಚಿತ್ರಣ ಕಾಣಬೇಕಾದರೆ ಮೊಳಕಾಲ್ಮೂರು ತಾಲೂಕಿನಲ್ಲಿ ಪ್ರವಾಸ ಮಾಡಬೇಕು. ಇಲ್ಲಿನ ಜನರ ಬದುಕೇ ಒಂದು ಸವಾಲು. ಮಳೆಯ ನೆರಳಿನ ಪ್ರದೇಶ ಎಂದು ಈ ನಾಡನ್ನು ಗುರುತಿಸಲಾಗಿದೆ. ಇಲ್ಲಿನ ಜನತೆ ಯಾವ ಆಸರೆ ನಂಬಿ ಬದುಕಿನಲ್ಲಿ ಭರವಸೆ ಇಟ್ಟುಕೊಂಡಿದ್ದಾರೆ ಎಂದು ಒಂದು ಕ್ಷಣಕ್ಕೆ ಅನ್ನಿಸಿ ಬಿಡುತ್ತದೆ.

ಇಷ್ಟೆಲ್ಲಾ ಸಮಸ್ಯೆಗಳ ಕಾರ್ಮೋಡದ ನಡುವೆ, ಅಲ್ಲೊಂದು ಹಸಿರಿನ ಪಸೆ ಕಾಣಿಸುತ್ತದೆ. ಮೊಳಕಾಲ್ಮೂರೆಂಬ ತಾಯಿಯ ಸೀರೆಯ ಸೆಗಿನಂತೆ ಈ ಹಸಿರು ಪ್ರದೇಶ ಥಟ್ಟನೆ ನಮ್ಮ ಸ್ಮøತಿ ಪಟಲದಲ್ಲಿ ಹಾದು ಹೋಗುತ್ತದೆ.

ಹೌದು, ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಳಕಾಲ್ಮೂರಿನಿಂದ ಬಳ್ಳಾರಿ ಕಡೆಗೆ ಸಂಚರಿಸಿದಾಗ ಸಿಗುವ ರಾಂಪುರದಲ್ಲಿಳಿದು, ಪಶ್ಚಿಮಕ್ಕೆ ಸಾಗಿದರೆ ಈ ಹಸಿರು ಪ್ರದೇಶ ಸಿಗುತ್ತದೆ.

Molakalmuru Bandravi Forest Chitradurga News 1

ಕಮರದ ಅರಣ್ಯ ಪ್ರದೇಶದ ಬಾಂಡ್ರಾವಿ

ಬಹಳ ಅಪರೂಪದ ರಾಶಿ ರಾಶಿ ಜಮರದ ಮರಗಳಿಂದಲೇ ತುಂಬಿರುವ ಕಮರದ ಅರಣ್ಯ ಬಾಂಡ್ರಾವಿಯ ವಿಶೇಷ. ಪಕ್ಕದ ಸಂಡೂರು ಅರಣ್ಯಕ್ಕೆ ಹೊಂದಿಕೊಂಡಂತೆ ಬಾಂಡ್ರಾವಿ ಭಾಗದಲ್ಲಿ ಕಮರದ ಅರಣ್ಯ ಮುಗಿಲಿಗೆ ಮೈಯೊಡ್ಡಿ ನಿಂತಿದೆ.

1904ರಲ್ಲೇ ಸರ್ಕಾರ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಅಧಿಸೂಚನೆ ಹೊರಡಿಸಿರುವ ‘ಸುಂದರ ಕಮರ ಅರಣ್ಯ’ 1306.87 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ.

ಈ ಕಾಡಿನುದ್ದಕ್ಕೂ ಎತ್ತ ಕಣ್ಣು ಹಾಯಿಸಿದರೂ ಕಮರದ ಮರಗಳೇ ಕಾಣಸಿಗುವ ಕಾರಣ ಇದನ್ನು ಕಮರದ ಅರಣ್ಯವೆಂದೇ ಗುರುತಿಸಲಾಗಿದೆ. ಇದು ಬಹಳ ವಿಶೇಷವಾಗಿದೆ.

Molakalmuru Bandravi Forest Chitradurga News 1

ಅರಣ್ಯ ಇಲಾಖೆ ಅರಣ್ಯದ ನಟ್ಟ ನಡುವೆ ಇರುವ ಬೆಟ್ಟವೊಂದರ ಮೇಲೆ ಸುಂದರ ವೀಕ್ಷಣಾ ತಾಣ (ವೀವ್ ಪಾಯಿಂಟ್) ಕೂಡಾ ನಿರ್ಮಿಸಿದ್ದು, ಪ್ರವಾಸಿಗರು ಇಲ್ಲಿಗೆ ಬಂದರೆ ಅದ್ಬುತವಾದ ನೋಟವೂ ಸಿಗುತ್ತದೆ.

ಕಾಡಿನಲ್ಲಿ ಅಲ್ಲಲ್ಲಿ ಕಾರೇ ಹಣ್ಣುಗಳು, ಕವಳಿ ಹಣ್ಣುಗಳು, ನೇರಳೆ ಹಣ್ಣುಗಳ ರುಚಿಯೂ ಸಿಗುತ್ತದೆ. ಹಣ್ಣಿನ ಮರ, ಗಡಿಗಳ ಬಳಿಗೆ ಹೋದಾಗ ಅಲ್ಲಿ ಕರಡಿಗಳು ಹಣ್ಣು ತಿಂದು ಬೀಜ ಉಗುಳಿರುವ, ಮಲ ವಿಸರ್ಜನೆ ಮಾಡಿರುವ ಸುಳಿವುಗಳು ಗೋಚರವಾಗುತ್ತವೆ.

ರಾಂಪುರದಿಂದ ಬಾಂಡ್ರಾವಿ ಕಡೆಗೆ ಬರುತ್ತಲೇ ಮಲೆನಾಡಿನ ರಸ್ತೆಗಳಂತೆ ತಿರುವುಗಳು, ಅಕ್ಕಪಕ್ಕದಲ್ಲಿ ಮರಗಳು, ಕೆಲವೊಮ್ಮೆ ಸಣ್ಣಗೆ ಬೀಳುವ ಮಳೆಯ ಹನಿಗಳ ಸ್ಪರ್ಷವೂ ಸಿಗುತ್ತದೆ.

ಇದನ್ನು ಓದಿ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲೆ ಹೊಸ ಮೆಡಿಕಲ್ ಕಾಲೇಜು | 24 ಹಳೆಯ ಕಟ್ಟಡ ನೆಲಸಮಕ್ಕೆ ಸಭೆಯಲ್ಲಿ ನಿರ್ಧಾರ

ವನಪಾಲಕ ಶ್ರೀ ನಾಗಪ್ಪ ಜೆ. ಮೇಟಿ ಬಾಂಡ್ರಾವಿ ಅರಣ್ಯ

Molakalmuru Bandravi Forest Chitradurga News 1

ಅರಣ್ಯ ಇಲಾಖೆಯ ಸಾಮಾನ್ಯ ವನಪಾಲಕನಾಗಿ ಸೇರಿ ಅತ್ಯಂತ ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದ ವನಪಾಲಕನಿಗೆ ಸಲ್ಲಬೇಕಾದ ಅತಿ ದೊಡ್ಡ ಗೌರವವನ್ನು ಅರಣ್ಯ ಇಲಾಖೆ ಇಲ್ಲಿ ನೀಡಿದೆ. ತಾನು ಸಂರಕ್ಷಣೆ ಮಾಡಿದ ಬಾಂಡ್ರಾವಿ ಕಮರದ ಅರಣ್ಯ ಪ್ರದೇಶಕ್ಕೆ, ಮುಂದೊಂದು ದಿನ ತನ್ನದೇ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದು ಖುದ್ದು ನಾಗಪ್ಪ ಕೂಡಾ ಅಂದುಕೊಂಡಿರಲಿಲ್ಲ. ಹೌದು ಅಂಥದ್ದೊಂದು ಗೌರವವನ್ನು ಅರಣ್ಯ ಇಲಾಖೆ ನೀಡಿದ್ದು, ಬಾಂಡ್ರಾವಿ ಕಮರದ ಅರಣ್ಯಕ್ಕೆ ‘ವನಪಾಲಕ ಶ್ರೀ ನಾಗಪ್ಪ ಜೆ. ಮೇಟಿ ಬಾಂಡ್ರಾವಿ ಅರಣ್ಯ’ ಎಂದು ಮರು ನಾಮಕರಣ ಮಾಡಲಾಗಿದೆ.

ಬಾಂಡ್ರಾವಿ ಕಮರ ಅರಣ್ಯವನ್ನು ಬೆಳೆಸಿ, ಸಂರಕ್ಷಣೆ ಮಾಡಿ, ಇಂದು ಹಚ್ಚ ಹಸುರಿನ ತಾಣವನ್ನಾಗಿ ರೂಪಿಸುವಲ್ಲಿ 1974ರಲ್ಲಿ ವನಪಾಲಕರಾಗಿ ಬಂದ ನಾಗಪ್ಪ ಜೆ ಮೇಟಿ ಅವರ ಪಾತ್ರ ಪ್ರಮುಖವಾಗಿದೆ. ಅವರ ಜೊತೆಗೆ ನಾಗಪ್ಪ ಮೇಟಿ ಪತ್ನಿ ಸಿದ್ದಮ್ಮ, ಅರಣ್ಯ ಇಲಾಖೆಯ ಇತರೆ ಸಹದ್ಯೋಗಿಗಳು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಗುವಿನಂತೆ ಈ ಕಾಡು ಬೆಳೆಸಿದ್ದಾರೆ.

Molakalmuru Bandravi Forest Chitradurga News 1

ನಾಗಪ್ಪ ಅವರ ಕರ್ತವ್ಯ ನಿಷ್ಠೆ ಪರಿಗಣಿಸಿ 1994ರಲ್ಲಿ ರಾಜ್ಯ ಸರ್ಕಾರ ‘ವನಮಿತ್ರ’ ಪ್ರಶಸ್ತಿ ನೀಡಿ ಗೌರವಿಸಿದೆ. ಆನಂತರ ಕೇಂದ್ರ ಸರ್ಕಾರ 1997ರಲ್ಲಿ ‘ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ’ ಪುರಸ್ಕಾರ ನೀಡಿದೆ.

ಇದಾದ ನಂತರ 2003 ಡಿಸೆಂಬರ್ ತಿಂಗಳಲ್ಲಿ ವನಪಾಲಕ ನಾಗಪ್ಪ ಜೆ ಮೇಟಿ ಕರ್ತವ್ಯದಿಂದ ನಿವೃತ್ತಿ ಹೊಂದುತ್ತಾರೆ. ಈ ವೇಳೆ ಅರಣ್ಯ ಇಲಾಖೆ ಬಾಂಡ್ರಾವಿ ಅರಣ್ಯವನ್ನು ವನಪಾಲಕ ಶ್ರೀ ನಾಗಪ್ಪ ಜೆ.ಮೇಟಿ ಬಾಂಡ್ರಾವಿ ಅರಣ್ಯ ಪ್ರದೇಶವೆಂದು ಮರು ನಾಮಕರಣ ಮಾಡಿ ಅವರ ಕರ್ತವ್ಯ ನಿಷ್ಠೆಗೆ ಗೌರವ ಸೂಚಿಸಿದೆ.

(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)

(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ  https://www.facebook.com/chitradurganews?mibextid=ZbWKwL)

 

English Summary: Bandravi, Bandravi Forest, Molakalmuru, Forest, Sunday Special, Chitradurga News, Chitradurga tourism.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:BandraviBandravi ForestChitradurga newsChitradurga tourismForestMolakalmuruSunday Specialಅರಣ್ಯಚಿತ್ರದುರ್ಗ ಪ್ರೇಕ್ಷಣೀಯ ಸ್ಥಳಗಳುಚಿತ್ರದುರ್ಗ ಸುದ್ದಿಬಾಂಡ್ರಾವಿಬಾಂಡ್ರಾವಿ ಅರಣ್ಯಮೊಳಕಾಲ್ಮೂರುಸಂಡೆ ಸ್ಪಷಲ್
Share This Article
Facebook Email Print
Previous Article ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲೆ ಹೊಸ ಮೆಡಿಕಲ್ ಕಾಲೇಜು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲೆ ಹೊಸ ಮೆಡಿಕಲ್ ಕಾಲೇಜು | 24 ಹಳೆಯ ಕಟ್ಟಡ ನೆಲಸಮಕ್ಕೆ ಸಭೆಯಲ್ಲಿ ನಿರ್ಧಾರ
Next Article ಖಾರದಪುಡಿ, ಬಂಗಾರದ, ಸರ ,ಕಳ್ಳತನ, ಚಳ್ಳಕೆರೆ, ಕಣ್ಣಿಗೆ ಖಾರದಪುಡಿ ಎರಚಿ ಬಂಗಾರದ ಸರ ಕಳ್ಳತನ | ಚಳ್ಳಕೆರೆಯ ಪಾವಗಡ ರಸ್ತೆಯಲ್ಲಿ ಘಟನೆ
Leave a Comment

Leave a Reply Cancel reply

Your email address will not be published. Required fields are marked *

ಅರ್ಜಿ ಅಹ್ವಾನ
ವಿಕಲಚೇತನರ ರಾಷ್ಟ್ರ ಪ್ರಶಸ್ತಿ | ಅರ್ಜಿ ಆಹ್ವಾನ
ಮುಖ್ಯ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ | ಬಳಿಕ PRESS MEET | ಸಂವಿಧಾನವೇ ಧರ್ಮ | ಮತದಾರರೇ ದೇವರು ಎಂದು ಭಾವುಕ
ಮುಖ್ಯ ಸುದ್ದಿ
ಕಾರಾಗೃಹ ಇಲಾಖೆಯಲ್ಲಿ ಸೈನಿಕರ ನೇಮಕಾತಿ | ಮೇ.29 ರಿಂದ ನೇರ ಸಂದರ್ಶನ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com

Loading Comments...

    Welcome Back!

    Sign in to your account

    Username or Email Address
    Password

    Lost your password?

    Not a member? Sign Up