CHITRADURGA NEWS | 06 MAY 2026
ಚಿತ್ರದುರ್ಗ: ನಗರದ ಜಟ್ ಪಟ್ ನಗರದ ಸಮೀಪವಿರುವ ವೀರಶೈವ ಹಿಂದೂ ರುದ್ರಭೂಮಿಗೆ ಬುಧವಾರ ಸಮಾಜದ ಪ್ರಮುಖ ಮುಖಂಡರೊಂದಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಅಭಿವೃದ್ಧಿ ಅಗತ್ಯಗಳ ಕುರಿತು ಸಮಗ್ರ ಪರಿಶೀಲನೆ ನೆಡೆಸಿದರು.
ಇದನ್ನೂ ಓದಿ: ಯಡಿಯೂರಪ್ಪ ಅಭಿಮಾನೋತ್ಸವಕ್ಕೆ 10 ಸಾವಿರ ಬಸ್, 50 ಸಾವಿರ ಕಾರು | 2 ಕೃತಿ ಬಿಡುಗಡೆ
ನಂತರ ಮಾತನಾಡಿದ ಶಾಸಕರು, ಪ್ರತಿ ಊರಿಗೊಂದು ರುದ್ರಭೂಮಿ ಇರ್ಲೇಬೇಕೆಂದು ಎನ್ನುವುದು ರಾಜ್ಯ ಸರ್ಕಾರದ ನಿಯಮವಾಗಿದೆ ಅದರಂತೆ ರುದ್ರ ಭೂಮಿಗೆ ಬೇಕಾಗಿರುವಂತ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಮಾನವ ಕುಲದಲ್ಲಿ ಆಸ್ತಿ ಅಂತಸ್ತು ಮಾಡಿ, ನಾ ಮುಂದು ತಾ ಮುಂದು ಎಂದು ಬದುಕುವ ಸಮಾಜದಲ್ಲಿ ಎಷ್ಟೇ ಅಸ್ತಿ ಹಣಗಳಿಸಿದರೂ ಕೊನೆಗೆ ಮುಕ್ತಿ ಪಡೆಯುವುದು ರುದ್ರಭೂಮಿಯಲ್ಲಿ ಇಂತಹ ರುದ್ರಭೂಮಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಿದ್ಧನಿದ್ದೇನೆ, ಅಗತ್ಯವಾಗಿ ಬೇಕಿರುವಂತಹ ಸೌಕರ್ಯಗಳನ್ನು ಅಧಿಕಾರಿಗಳ ಜೊತೆ ಚರ್ಚೆಯನ್ನ ನಡೆಸಿ ವೀರಶೈವ ಸಮುದಾಯದ ರುದ್ರ ಭೂಮಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.
ರುದ್ರಭೂಮಿ ಪ್ರದೇಶದಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ ವ್ಯವಸ್ಥೆ, ಒಳರಸ್ತೆಗಳ ಅಭಿವೃದ್ಧಿ, ಕಂಪೌ0ಡ್ ವ್ಯವಸ್ಥೆ, ಶೆಡ್ ನಿರ್ಮಾಣಮಾಡಬೇಕಿದೆ ಹಾಗೂ ಸ್ವಚ್ಛತೆಯನ್ನ ಮುಖ್ಯವಾಗಿ ರುದ್ರ ಭೂಮಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ಮೃತರ ಅಂತ್ಯಕ್ರಿಯೆಗಳ ವೇಳೆ ಕುಟುಂಬದವರಿಗೆ ಆಗುತ್ತಿರುವ ತೊಂದರೆಗಳನ್ನು ಹಂತ ಹಂತವಾಗಿ, ಸರಿಪಡಿಸಲು ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ 24 ಗಂಟೆಯೊಳಗೆ ಸಮಸ್ಯೆ ನಿವಾರಿಸಿ
ರುದ್ರಭೂಮಿ ಎಂಬುದು ಸಮಾಜದ ಎಲ್ಲ ವರ್ಗದ ಜನರಿಗೆ ಅತ್ಯಂತ ಸಂವೇದನಾಶೀಲವಾದ ಸ್ಥಳವಾಗಿದ್ದು, ಶವ ಸಾಗಣೆಗೆ ಸುಗಮ ರಸ್ತೆ, ಮಳೆಗಾಲದಲ್ಲಿ ನೀರು ನಿಂತುಕೊಳ್ಳದ ವ್ಯವಸ್ಥೆ, ಬೆಳಕು ಸೌಲಭ್ಯ ಹಾಗೂ ಭದ್ರತಾ ಗೋಡೆ ತ್ವರಿತ ಗತಿಯಲ್ಲಿ ಮಾಡಲಾಗುತ್ತದೆ. ಇದಕ್ಕೆ ಸಮಾಜದ ಮುಖಂಡರು, ಸಾರ್ವಜನಿಕರ ಸಹಕಾರ ನೀಡಿದರೆ ಮಾತ್ರ ರುದ್ರಭೂಮಿಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತೆ ಲಕ್ಷ್ಮಿ, ವೀರಶೈವ ಮುಖಂಡರಾದ ಷಣ್ಮುಖಪ್ಪ, ನಾಗರಾಜ್, ಸಂತೋಷ್, ಮಂಜುನಾಥ್, ತಿಪ್ಪೇಶ್, ದ್ವಾರಕೇಶ್ ರಮೇಶ್ ನಾಗರಾಜ್ ಹಾಗೂ ಇತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

