Connect with us

    ಲೋಕಸಭೆ‌ ಚುನಾವಣೆಗೆ ಬಿಜೆಪಿ ಭರದ ತಯಾರಿ | ದುರ್ಗದಲ್ಲಿ ಚುನಾವಣಾ ಕಚೇರಿ ಉದ್ಘಾಟಿಸಿದ ಸಚಿವ ಎ.ನಾರಾಯಣಸ್ವಾಮಿ

    ಮುಖ್ಯ ಸುದ್ದಿ

    ಲೋಕಸಭೆ‌ ಚುನಾವಣೆಗೆ ಬಿಜೆಪಿ ಭರದ ತಯಾರಿ | ದುರ್ಗದಲ್ಲಿ ಚುನಾವಣಾ ಕಚೇರಿ ಉದ್ಘಾಟಿಸಿದ ಸಚಿವ ಎ.ನಾರಾಯಣಸ್ವಾಮಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 FEBRUARY 2024
    ಚಿತ್ರದುರ್ಗ: ರಾಮಮಂದಿರ ಕೇವಲ ಮಂದಿರ ಅಲ್ಲ. ಅದು ಪ್ರತಿಯೊಬ್ಬ ಹಿಂದೂವಿನ ಆತ್ಮ ಗೌರವ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

    ನಗರದ ಒಕ್ಕಲಿಗರ ಸಮುದಾಯ ಭವನದ ವಾಣಿಜ್ಯ ಸಂಕೀರ್ಣದಲ್ಲಿ ಚಿತ್ರದುರ್ಗ ಲೋಕಸಭಾ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರಾದ ವಿಶ್ವ ನಾಯಕ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ದಾ ಅವರ ಆಶಯದಂತೆ ಪಕ್ಷ 400 ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. ಆದ್ದರಿಂದ ಪ್ರತಿ ಹಂತದಲ್ಲೂ ಅಚ್ಚುಕಟ್ಟಾಗಿ ಕೆಲಸಗಳು ನಡೆಯಬೇಕು ಎಂದರು.

    ಇನ್ನು 10 ದಿನಗಳಲ್ಲಿ ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಾಗಲಿದೆ. ಏಪ್ರಿಲ್‌ 3ನೇ ಅಥವಾ 4ನೇ ವಾರದಲ್ಲಿ ರಾಜ್ಯದಲ್ಲಿ ಮತದಾನ ನಡೆಯುವ ಸಾಧ್ಯತೆಗಳಿವೆ. ಇಂದಿನಿಂದ ಅಧಿಕೃತವಾಗಿ ಚುನಾವಣೆ ಕಾರ್ಯಕ್ಕೆ ಆರಂಭಗೊಂಡಿವೆ. ಇನ್ನು 60 ರಿಂದ 70 ದಿನ ನಾವೆಲ್ಲ ಸಂಘಟನೆಯಲ್ಲಿ ತೊಡಗಬೇಕಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ನಾಯಕನಹಟ್ಟಿ ತಿಪ್ಪೇಶನ ಜಾತ್ರೆಯಲ್ಲಿ ಜಕಾತಿ ವಸೂಲಿಗೆ ಬ್ರೇಕ್‌ | ಮುಕ್ತಿ ಬಾವುಟ ಹರಾಜಿಗೆ ಮಾರ್ಗಸೂಚಿ | ಸಚಿವ ಡಿ.ಸುಧಾಕರ್‌

    ಬೇರೆಯವರ ಬಗ್ಗೆ ಟೀಕೆ ಮಾಡುವುದರ ಬದಲು ನಮ್ಮ ಸಾಧನೆಗಳನ್ನು ತಿಳಿಸುವ ಕೆಲಸ ಮಾಡಬೇಕು. ಕಳೆದ ಚುನಾವಣೆಗಿಂತ ಈ ಬಾರಿ ಶೇ 10 ರಷ್ಟು ಮತಗಳಿಕೆ ಹೆಚ್ಚಾಗಬೇಕು. ಈ ಮೂಲಕ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಬೇಕು. ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಬೇಕು. ಈ ಕೆಲಸವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡುವುದರ ಮೂಲಕ ಜಿಲ್ಲೆಯಿಂದಲೇ ಬಿಜೆಪಿ ಪಕ್ಷ ಗೆಲುವಿನ ನಗೆ ಬಿರುವಂತಾಗಬೇಕು ಎಂದು ಕರೆ ನೀಡಿದರು.

    ಇದನ್ನೂ ಓದಿ: ರಾಜ್ಯಕ್ಕೆ ‘ಬರ’ ತಂದ ಕಾಂಗ್ರೆಸ್‌ | ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ

    ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ,ಇಡೀ ದೇಶದಲ್ಲಿ ಒಂದು ರೀತಿಯ ವಿಶೇಷ ವಾತಾವರಣ ಮೂಡಿದೆ. ಬಡವರು, ರೈತರು, ಯುವಕರು ಹಾಗೂ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಪಕ್ಷಕ್ಕಿದೆ. ಕೇಂದ್ರ ಸರ್ಕಾರದ ಸಾಧನೆ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

    ಇದನ್ನೂ ಓದಿ: ಚಿತ್ರದುರ್ಗ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಮುಹೂರ್ತ ಫಿಕ್ಸ್‌ | ಅಮೃತ್ ಭಾರತ್ ರೈಲ್ವೆ ಯೋಜನೆಯಡಿ ಕಾಮಗಾರಿ

    ನೂರು ದಿನ ಸಂಪೂರ್ಣ ಶ್ರಮ ಹಾಕಿ ಬಿಜೆಪಿ ಪಕ್ಷ ಮಾಡಿರುವಂತ ಎಲ್ಲಾ ಕೆಲಸಗಳನ್ನು ಮನೆ ಮನೆಗೆ ಹೋಗಿ ಸಾಮಾನ್ಯ ಜನರಿಗೆ ತಿಳಿಸುವ ಕಾರ್ಯವಾಗಬೇಕು. ಈ ಮೂಲಕ ಮೂರನೇ ಬಾರಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಕೆ.ಎಸ್‌.ನವೀನ್‌ ಮಾತನಾಡಿ, ಕಾಂಗ್ರೆಸ್‌ ಸೋಲಿಸಲು ಪ್ರತಿ ಕಾರ್ಯಕರ್ತರು ಪಣತೊಡಬೇಕು. ಯಾವುದೇ ಹಂತದಲ್ಲು ನಾವು ನಿರ್ಲಕ್ಷ್ಯ ವಹಿಸದೇ ಕೆಲಸ ಮಾಡಬೇಕು. ಅತಿಯಾದ ಆತ್ಮವಿಶ್ವಾಸದಿಂದ ಸುಮ್ಮ ಕೂರದೇ ಜವಬ್ದಾರಿಯಿಂದ ಶ್ರಮಿಸಬೇಕು. ಲೋಕಸಭಾ ಕ್ಷೇತ್ರದ ಚುನಾವಣೆ ಪೂರ್ಣಗೊಳ್ಳುವವರೆಗೂ ತಮ್ಮ ವೈಯುಕ್ತಿಕ ಕೆಲಸಗಳನ್ನು ಬೇರೆಯವರಿಗೆ ವರ್ಗಾಯಿಸಿ ಚುನಾವಣಾ ಕಾರ್ಯದಲ್ಲಿ ಭಾಗವಹಿಸಿ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ, ಕಮಲದ ಗುರುತನ್ನು ಗೆಲ್ಲಿಸುವುದು ನಮ್ಮ ಗುರಿಯಾಗಬೇಕು’ ಎಂದು ತಿಳಿಸಿದರು.

    ಮಾಜಿ ಶಾಸಕ ತಿಪ್ಪೇಸ್ವಾಮಿ ಮಾತನಾಡಿ,ಬಿ.ವೈ.ವಿಜಯೇಂದ್ರ ಪಕ್ಷದ ಅಧ್ಯಕ್ಷರಾದ ಬಳಿ ಸಂಚಲನ ಮೂಡಿಸಿದ್ದಾರೆ. ರಾಜ್ಯ ಸರ್ಕಾರ ಆಡಳಿತದಲ್ಲಿ ಸೋತಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಮನ ಅಸ್ತಿತ್ವ ಪ್ರಶ್ನಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

    ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ಮಾಜಿ ಶಾಸಕ ರಾಜೇಶ್ ಗೌಡ, ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇ ಗೌಡ, ಮುಖಂಡರಾದ ಲಿಂಗಮೂರ್ತಿ, ಮಾಧುರಿ ಗಿರೀಶ್‌, ಸಂಪತ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top