
CHITRADURGA NEWS | 10 MARCH 2025
ಚಿತ್ರದುರ್ಗ: ಧ್ಯಾನ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ನೆಮ್ಮದಿ ಕಂಡುಕೊಳ್ಳಬಹುದು ಎಂದು ನಿವೃತ್ತ ಡಿ.ಡಿ.ಪಿ.ಐ. ರೇವಣಸಿದ್ದಪ್ಪ ತಿಳಿಸಿದರು.
Also Read: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ರಾಮಚಂದ್ರ ಮಿಷನ್ ಹಾರ್ಟ್‍ಫುಲ್‍ನೆಸ್ ಧ್ಯಾನ ಕೇಂದ್ರದಿಂದ ತ.ರಾ.ಸು.ರಂಗಮಂದಿರದಲ್ಲಿ ನಡೆದ ಧ್ಯಾನೋತ್ಸವ ಉದ್ಘಾಟಿಸಿ ಮಾತನಾಡಿದರು.
ಹೃದಯನ್ನು ಆರೋಗ್ಯವಾಗಿಟ್ಟುಕೊಂಡರೆ ಮನಸ್ಸು ಶಾಂತವಾಗಿರುತ್ತದೆ. ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಜೀವನದಲ್ಲಿ ಬದುಕುವಂತಾಗಿದೆ. ಎಲ್ಲರೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದರು.
ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ ಮಾತನಾಡಿ, ಒತ್ತಡದ ಜೀವನದಿಂದ ಹೊರ ಬರಬೇಕಾದರೆ ಧ್ಯಾನ ಅತ್ಯವಶ್ಯಕ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿನ ಜೀವನ ಶೈಲಿಗೆ ಸಾಕಷ್ಟು ಬದಲಾವಣೆಗಳಿರುತ್ತವೆ. ಒತ್ತಡ ನಿವಾರಿಸಿ ಮನಸ್ಸಿಗೆ ಶಾಂತಿ ನೀಡುವ ಧ್ಯಾನವನ್ನು ಎಲ್ಲರೂ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
Also Read: ಮಾರ್ಚ್ ತಿಂಗಳ ಪಡಿತರ 15 ಕೆ.ಜಿ | ಅಂತ್ಯೋದಯ ಕಾರ್ಡ್‍ಗೆ 35 ಕೆಜಿ
ಹಾರ್ಟ್‍ಫುಲ್‍ನೆಸ್ ರಾಜ್ಯ ಸಂಚಾಲಕ ಮೈಸೂರಿನ ಮಧುಸೂದನ್, ಪ್ರಶಿಕ್ಷಕ ಡಾ.ವಿ.ಬಸವರಾಜ್, ವಿಭಾಗ ಸಂಚಾಲಕ ಡಾ.ವಿ.ಸಿದ್ದೇಶ್ವರನ್ ಮಾತನಾಡಿದರು.
ಇ ಸಂದರ್ಭದಲ್ಲಿ ಹಾರ್ಟ್‍ಫುಲ್‍ನೆಸ್‍ನ ಹಿರಿಯ ಪ್ರಶಿಕ್ಷಕ ಎಸ್.ವೆಂಕಟಾದಿ, ನಿವೃತ್ತ ಡಿ.ಡಿ.ಪಿ.ಐ. ಎನ್.ಎಂ.ರಮೇಶ್ ಇದ್ದರು.
ಹಾರ್ಟ್‍ಫುಲ್‍ನೆಸ್ ಧ್ಯಾನ, ಹಾರ್ಟ್‍ಫುಲ್‍ನೆಸ್ ಶುದ್ದೀಕರಣ, ಹಾರ್ಟ್‍ಫುಲ್‍ನೆಸ್ ಪ್ರಾರ್ಥನೆ ಎಂಬ ವಿಚಾರ ಕುರಿತು ಗೋಷ್ಠಿಗಳು ನಡೆದವು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
