CHITRADURGA NEWS | 10 MARCH 2025
ಚಿತ್ರದುರ್ಗ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ನಗರದಲ್ಲಿ ನಡೆದ ಸೀರೆ ವಾಕಥಾನ್‍ನಲ್ಲಿ ನೂರಾರು ಮಹಿಳೆಯರು ವಿಭಿನ್ನ ರೀತಿಯಲ್ಲಿ ಸೀರೆಗಳನ್ನುಟ್ಟು ಸಂಭ್ರಮಿಸಿದರು.
Also Read: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ವಾಸವಿ ಕ್ಲಬ್ ಇಂಟರ್‍ನ್ಯಾಷನಲ್ ಗೌರ್ವನರ್ ಅಶೋಕ್ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟ ಸೀರೆ ವಾಕಥಾನ್‍ಗೆ ಚಾಲನೆ ನೀಡಿದರು.
ಉಡುಪಿಯಿಂದ ಆಗಮಿಸಿದ್ದ ಮಹಿಳೆಯರ ಚಂಡೆ ಮೃದಂಗ ಸೀರೆ ವಾಕಥಾನ್‍ಗೆ ಮೆರಗು ತುಂಬಿತು. ಹಸಿರು, ನೀಲಿ, ಕೇಸರಿ, ಕಂದು ಬಣ್ಣದ ಸೀರೆಗಳನ್ನುಟ್ಟ ಮಹಿಳೆಯರು ಸೀರೆ ವಾಕಥಾನ್‍ನಲ್ಲಿ ಹೆಜ್ಜೆ ಹಾಕಿದರು.
ಬಿಸಿಲ ಝಳಕ್ಕೆ ಮಹಿಳೆಯರು ತಲೆಗೆ ಟೋಪಿ ಹಾಗೂ ಕಣ್ಣಿಗೆ ಕೂಲಿಂಗ್ ಗ್ಲಾಸ್‍ಗಳನ್ನು ಧರಿಸಿದ್ದರು. ಒನಕೆ ಓಬವ್ವ ಪ್ರತಿಮೆ ಬಳಿ ಸೀರೆ ವಾಕಥಾನ್ ಮುಕ್ತಾಯಗೊಂಡಿತು.
Also Read: ಹಕ್ಕಿ ಜ್ವರ ಭೀತಿ | ಮುನ್ನೆಚ್ಚರಿಕೆ ಕ್ರಮಕ್ಕೆ ADC ಸೂಚನೆ
ವಾಕಥಾನ್‍ನಲ್ಲಿ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರಾಜೇಶ್ವರಿ ಸೇರಿದಂತೆ ಇತರರು ಸೀರೆ ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
