Connect with us

    ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ | 10 ಜೋಡಿ ದಾಂಪತ್ಯಕ್ಕೆ ಪದಾರ್ಪಣೆ 

    ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ

    ಮುಖ್ಯ ಸುದ್ದಿ

    ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ | 10 ಜೋಡಿ ದಾಂಪತ್ಯಕ್ಕೆ ಪದಾರ್ಪಣೆ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 05 JUNE 2024

    ಚಿತ್ರದುರ್ಗ: ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ 34ನೇ ವರ್ಷದ 6ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ಸಸಿ ನೆಡುವ ಸಂಪ್ತಾಹ’ ಸಮಾರೋಪ ಸಮಾರಂಭದಲ್ಲಿ 10 ಜೋಡಿಗಳ ವಿವಾಹ ಜರುಗಿತು.

    ಇದನ್ನೂ ಓದಿ: 60 ಸಾವಿರ ಗಿಡ ನೆಡಲು ಯೋಜನೆ | ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ವಿಜಯ್‌

    ಈ ವೇಳೆ ಶ್ರೀ ಜಗದ್ಗುರು ಮುರುಘಾ ರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ,

    ಗಂಡ-ಹೆಂಡತಿ ಚಿಕ್ಕಪುಟ್ಟ ವಿಷಯಗಳಿಗೆ ಜಗಳವಾಡಬಾರದು, ಅದು ಸಂಸಾರದ ಕಲಹಕ್ಕೆ ಹಾದಿ ಮಾಡಿಕೊಡುತ್ತದೆ, ಒಬ್ಬರಿಗೊಬ್ಬರು ಸರಿಯಾಗಿ ಅರ್ಥೈಸಿಕೊಂಡು ಬಾಳಬೇಕು, ವಿವಾಹವೆನ್ನುವುದು ಜೀವನದ ಅತಿಮುಖ್ಯ ಘಟ್ಟ, ಅನ್ಯೋನ್ಯತೆ ಇಲ್ಲಿ ಮುಖ್ಯ. ದುಶ್ಚಟಕ್ಕೆ ಬಲಿಯಾಗಬಾರದು, ನಮ್ಮಲ್ಲಿರುವ ದುರ್ಗುಣಗಳನ್ನು ಬಿಡಬೇಕು, ನಮ್ಮಲ್ಲಿರುವ ಗುಣಗಳನ್ನು ಗುರುತಿಸುವವರು ಇರುತ್ತಾರೆ, ನಮ್ಮಲ್ಲಿರುವ ಒಳ್ಳೆಯತನಗಳನ್ನು ಉಳಿಸಿಕೊಂಡು ಬೆಳೆಸಬೇಕು ಎಂದು ತಿಳಿಸಿದರು.

    ಇದನ್ನೂ ಓದಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಿದ ಮಠಾಧೀಶರು

    ಶ್ರೀಮಠ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಒಂದು ವಾರಗಳ ಕಾಲ ಸಸಿಗಳನ್ನು ನೆಡಲಾಯಿತು. ಇಂದು ಅದರ ಸಮಾರೋಪ. ಕಳೆದ 20 ವರ್ಷಗಳ ಹಿಂದೆ ಇದೇ ದಿನ ಅಮಾವಾಸ್ಯೆ ದಿನ 101 ಜೋಡಿಗಳ ವಿವಾಹವಾಗಿರುವುದು ದಾಖಲೆ ಸರಿ. ಸಾಮೂಹಿಕ ಮದುವೆಯಲ್ಲಿ ಆದರ್ಶ ಇರುತ್ತದೆ. ಸಾಮೂಹಿಕ ಬದ್ಧತೆ, ನಾಯಕತ್ವದಲ್ಲಿ ಮೌಲ್ಯಗಳು ಇರುತ್ತವೆ. ಇದನ್ನು ಸಂಕುಚಿತ ಮನೋಭಾವದಿಂದ ನೋಡಬಾರದು.

    ಸಾಲದ ಸುಳಿಯಿಂದ ಹೊರಬರಬೇಕೆಂದರೆ ಇಂತಹ ಆದರ್ಶ ಮದುವೆಗೆ ಒಳಗಾಗಬೇಕು. ಅನೇಕ ಶ್ರೀಮಂತರು ದುಬಾರಿ ಆಮಂತ್ರಣ ಪತ್ರಿಕೆ, ಇನ್ನಿತರೇ ಅದ್ಧೂರಿ ವಿವಾಹಗಳನ್ನು ಮಾಡುತ್ತಾರೆ. ಇದು ದುಂದುವೆಚ್ಚವೇ ಸರಿ. ಬಸವಾದಿ ಶರಣರ ತತ್ವಾದರ್ಶಗಳ ಮೇಲೆ ಶ್ರೀಮಠದಲ್ಲಿ ವಿವಾಹಗಳು ನೆರವೇರುತ್ತವೆ ಎಂದರು.

    ಇದನ್ನೂ ಓದಿ: ಗಿಡಮೂಲಿಕೆ ಔಷಧಿ‌ ಸೇವಿಸುವಾಗ ಎಚ್ಚರ | ಆಯುರ್ವೇದ ವೈದ್ಯರನ್ನೇ ಸಂಪರ್ಕಿಸಿ | ಡಾ.ಚಂದ್ರಕಾಂತ್

    ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಬದುಕು ಸ್ವರ್ಗ ಆಗಬೇಕಾದರೆ ಸತಿಪತಿಗಳು ಪ್ರೀತಿಯಿಂದ ಅನ್ಯೋನ್ಯತೆಯಿಂದ ಬದುಕನ್ನು ಕಟ್ಟಿಕೊಳ್ಳುವ ಮೂಲಕ ನೆಮ್ಮದಿಯನ್ನು ಹೊಂದಬೇಕು. ಶಾಂತ ಮನಸ್ಥಿತಿಗೆ ಒಳಗಾಗಬೇಕು. ಅಸೂಯೆ, ದುರಾಸೆಯ ಮನಸ್ಸು ಇರಬಾರದು. ಇಡೀ ಮಾನವಕುಲಕ್ಕೆ ತಂದೆ-ತಾಯಿ ಯಾರು ಎಂದರೆ ಅದು ಪರಿಸರ. ಅಂಥ ಪ್ರಕೃತಿಯು ನಮ್ಮನ್ನು ಕಾಪಾಡಿದರೆ ನಾವು ಸಹ ಮುಂದಿನ ಪೀಳಿಗೆಗಾಗಿ ಪ್ರಕೃತಿಯನ್ನು ಕಾಪಾಡಿಕೊಳ್ಳಬೇಕು ಎಂದರು.

    ಶ್ರೀ ಬಸವನಾಗಿದೇವ ಸ್ವಾಮಿಗಳು ಮಾತನಾಡಿ, ನೋವು ತೊಂದರೆಗಳು ಯಾರನ್ನೂ ಬಿಟ್ಟಿಲ್ಲ. ನಮ್ಮ ಜೀವನ ಕ್ರಮ ಸರಿಯಾಗಿ ಇಟ್ಟುಕೊಳ್ಳಬೇಕಿತ್ತು. ಇದಕ್ಕೆ ಪೂರಕವಾಗಿ ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು. ಬಸವ ತತ್ವದ ಆಧಾರದ ಮೇಲೆ ಇಲ್ಲಿ ಕಲ್ಯಾಣ ಮಹೋತ್ಸವ ನಡೆಯುತ್ತಿದೆ. ಬಸವಾದಿ ಶರಣರ ಜಯಂತಿಗಳು ಆಗಿರುವ ಈ ಜಾಗದಲ್ಲಿ ಕಲ್ಯಾಣ ಮಹೋತ್ಸವ ನಡೆಯುತ್ತಿರುವುದು ಸಂತೋಷದ ಸಂಗತಿ. ನವ ವಧುವರರು ಈ ಸಂದರ್ಭಕ್ಕೆ ಕಾರಣರಾಗಿದ್ದೀರಿ. ನೀವು ಪುಣ್ಯವಂತರು ಎಂದರು.

    ಇದನ್ನೂ ಓದಿ: ಟೋಲ್‌ ಶುಲ್ಕ ಕಡಿತಕ್ಕೆ ವಾರದ ಗಡುವು | ವಾಹನ ನಿಲ್ಲಿಸಿ ಪ್ರತಿಭಟನೆ ಎಚ್ಚರಿಕೆ

    ಕಾರ್ಯಕ್ರಮದಲ್ಲಿ 10 ಜೋಡಿಗಳ ವಿವಾಹ ನೆರವೇರಿತು. ನೂತನ ವಧು-ವರರು ಪರಿಸರ ದಿನದ ಅಂಗವಾಗಿ ಸಸಿಗಳನ್ನು ನೆಟ್ಟರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top