CHITRADURGA NEWS | 03 APRIL 2026
ಹೊಳಲ್ಕೆರೆ: ತಾಲೂಕಿನ ಮಾಳೇನಹಳ್ಳಿ ಶ್ರೀಲಕ್ಷ್ಮೀ ರಂಗನಾಥಸ್ವಾಮಿ ರಥೋತ್ಸವ ಗುರುವಾರ ಸಂಭ್ರಮ, ಸಡಗರದಿಂದ ನಡೆಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | 2 ಏಪ್ರಿಲ್ | ಭೀಮಸಮುದ್ರ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ಮಾರುಕಟ್ಟೆ ವಿವರ
ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಚಮ್ಮಾಳ, ಡೊಳ್ಳು, ಕರಡಿ ಮಜಲು ಸೇರಿದಂತೆ ವಿವಿಧ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಬಳಿಕ ರಥೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥ ಎಳೆದು ಸಂಭ್ರಮಿಸಿದರು.
ಇದೇ ವೇಳೆ ದೇವರಿಗೆ ಹಾಕಿದ್ದ ಹೂವಿನ ಹಾರಗಳನ್ನು ಹರಾಜು ಮಾಡಲಾಯಿತು. ರಥೊತ್ಸವದಲ್ಲಿ ನೆರೆದಿದ್ದ ಭಕ್ತರು ತಮ್ಮ ಶಕ್ತ್ಯಾನುಸಾರ ಹೂವಿನ ಹಾರಗಳನ್ನು ಹರಾಜಿನಲ್ಲಿ ಪಡೆದುಕೊಂಡರು.
ರಥೋತ್ಸವದ ಅಂಗವಾಗಿ ಬಗೆ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಮಲ್ಲಿಗೆ, ಗುಲಾಬಿ, ಸೇವಂತಿ, ಸಿಗಂದರಾಜ ಸೇರಿದಂತೆ ವಿವಿಧ ಹೂಗಳಿಂದ ಬೃಹತ್ ಗಾತ್ರದ ಹಾರಗಳನ್ನು ಮಾಡಿ ರಥಕ್ಕೆ ಹಾಕಲಾಗಿತ್ತು. ರಥದಲ್ಲಿ ಉತ್ಸವಮೂರ್ತಿ ಶ್ರೀಲಕ್ಷ್ಮೀ ರಂಗನಾಥಸ್ವಾಮಿ ವಿರಾಜಮಾನರಾಗಿದ್ದರು. ಅಕ್ಕಪಕ್ಕದಲ್ಲಿ ಗ್ರಾಮ ದೇವತೆಗಳಾದ ಶ್ರೀಗಾಮಜ್ಜಿ ಹಾಗೂ ಶ್ರೀಕರಿಯಮ್ಮ ದೇವಿಯರನ್ನು ಕೂರಿಸಲಾಗಿತ್ತು.
ಒಂದು ವಾರದ ಹಿಂದೆ ಆರಂಭವಾಗಿದ್ದ ರಥೋತ್ಸವ ಪ್ರಕ್ರಿಯೆಯಲ್ಲಿ ಪ್ರತಿದಿನ ಸಂಜೆ ವಿವಿಧ ಉತ್ಸವಗಳು ನಡೆದವು. ಅಶ್ವ ಉತ್ಸವ, ಗಜ ಉತ್ಸವ, ಶೇಷೋತ್ಸವ, ಗರುಡೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ: ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
ಬುಧವಾರ ಬೆಳಿಗ್ಗೆ ಚಿಕ್ಕರಥೋತ್ಸವ ನಡೆಯಿತು. ಸಂಜೆ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು. ಬಳಿಕ ಗುರುವಾರ ದೊಡ್ಡ ರಥೋತ್ಸವ ನಡೆಯಿತು. ಬಳಿಕ ಮಧ್ಯಾಹ್ನ ದೊಡ್ಡೆಡೆ ಸೇವೆ ಮೂಲಕ ರಥೋತ್ಸವ ಸಮಾರಂಭ ಸಂಪನ್ನವಾಯಿತು.
ಮಾಳೇನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿ ದೇವರಿಗೆ ಭಕ್ತಿ ಸಮರ್ಪಿಸಿದರು. ರಥೋತ್ಸವದ ನಂತರ ಬಂದಿದ್ದ ಎಲ್ಲ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವಕ್ಕೆ ಆಗಮಿಸಿದ್ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
