ಮುಖ್ಯ ಸುದ್ದಿ
ಬೆಳ್ಳಂ ಬೆಳಗ್ಗೆ ಬಿಸಿಎಂ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ

Published on
CHITRADURGA NEWS | 31 JANUARY 2025
ಚಿತ್ರದುರ್ಗ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಬಿಸಿಎಂ ಇಲಾಖೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ
ಹೊಸದುರ್ಗ ತಾಲೂಕು ಬಿಸಿಎಂ ಇಲಾಖೆ ವ್ಯವಸ್ಥಾಪಕ ಕೆ.ಸಿ.ಶಶಿಧರ ಎಂಬುವವರ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಗಳಿಗೆ ಐಜಿಪಿ ರವಿಕಾಂತೇಗೌಡ ಎಚ್ಚರಿಕೆ | ಸಾಲ ವಸೂಲಿಗೆ ಬಲವಂತ ಮಾಡಿದ್ರೆ ಕ್ರಮ
ಹೊಸದುರ್ಗ ಪಟ್ಟಣದ ವಿದ್ಯಾ ನಗರದ ನಿವಾಸ, ಹೊಳಲ್ಕೆರೆ ತಾಲ್ಲೂಕಿನ ಕಡ್ಲಪ್ಪನಹಟ್ಟಿ ತೋಟದ ಮನೆ, ಚಿತ್ರದುರ್ಗ BCM ಕಚೇರಿ, ಸೇರಿ ಹಲವು ಕಡೆಗಳಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು.
ಲೋಕಾಯುಕ್ತ SP ವಾಸುದೇವ್ ರಾವ್, DYSP ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ.
Continue Reading
Related Topics:bcm officer, Chitradurga Latest, Chitradurga news, featured, Hosadurga, Kannada News, Lokayukta Raid, ಕನ್ನಡಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಬಿಸಿಎಂ ಅಧಿಕಾರಿ, ಭ್ರಷ್ಟಾಚಾರ, ಲೋಕಾಯುಕ್ತ ದಾಳಿ, ಹೊಸದುರ್ಗ

Click to comment