
CHITRADURGA NEWS | 10 SEPTEMBER 2025
ಹೊಳಲ್ಕೆರೆ: ಮನೆ ನಿರ್ಮಾಣ ಮಾಡಲು ಲೈಸೆನ್ಸ್ ಪಡೆಯುವ ಸಲುವಾಗಿ ಪಿ.ಡಿ.ಓ ಹಣ ಬೇಡಿಕೆ ಇಟ್ಟಿದ್ದು, 5000 ರೂ ಲಂಚದ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಣದೊಂದಿಗೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯ್ತಿ ಪಿ.ಡಿ.ಓ ಕೃಷ್ಣಮೂರ್ತಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾಧಿಕಾರಿ ನೂತನ ಕಟ್ಟಡ ವೈದ್ಯಕೀಯ ಕಾಲೇಜಿಗೆ ಹಸ್ತಾಂತರ | ಬೆಂಗಳೂರಿನಲ್ಲಿ ಸಭೆ
ಮಂಜಮ್ಮ ಹೆಸರಿನಲ್ಲಿ ಹೊಳಲ್ಕೆರೆ ಪಟ್ಟಣದ ಶಿವಮೊಗ್ಗ ರಸ್ತೆಯ ಕುಕುವಾಡೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿ ಜೈಪುರ ಗ್ರಾಮಕ್ಕೆ ಒಳಪಡುವ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ 30+30 ಅಳತೆಯ ಸಂ:98/120ರ ಖಾಲಿ ನಿವೇಶನ ಇರುತ್ತದೆ.
ಖಾಲಿ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಲು ತೀರ್ಮಾನಿಸಿ ಫೆಬ್ರವರಿ-2025ರಲ್ಲಿ ಲೈಸೆನ್ಸ್ ಪಡೆಯುವ ಸಲುವಾಗಿ ಅರೇಹಳ್ಳಿ ಗ್ರಾಮ ಪಂಚಾಯ್ತಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಲೈಸೆನ್ಸ್ ಪಡೆಯುವ ಸಂಬಂಧ ಹಲವಾರು ಬಾರಿ ಅರೇಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿಗೆ ಹೋಗಿ ಅಲ್ಲಿನ ಪಿ.ಡಿ.ಓ. ಕೃಷ್ಣಮೂರ್ತಿ ಇವರಿಗೆ ವಿಚಾರಿಸಿದಾಗ ಅವರು ಮತ್ತು ಅಲ್ಲಿನ ಅಪರೇಟರ್, ನಾಳೆ ಬನ್ನಿ, ಮುಂದಿನ ವಾರ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದರು. ನಂತರ ಅರೇಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಪಾಲೇನಗೌಡ್ರು ಇವರಿಂದ ಹೇಳಿಸಿದರೂ ಸಹಾ ಯಾವುದೇ ಪ್ರಯೋಜನವಾಗಿರುವುದಿಲ್ಲ.
ಇದನ್ನೂ ಓದಿ: ಬಸವಸಂಸ್ಕೃತಿ ಅಭಿಯಾನ | ಹೊಸದುರ್ಗ ತಾಲ್ಲೂಕಿನಿಂದ ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುದಾಗಿ ಭರವಸೆ
ನಂತರ ದಿ: 28-08-2025ರಂದು ಅರೇಹಳ್ಳಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಪಿ.ಡಿ.ಓ. ಕೃಷ್ಣಮೂರ್ತಿ ಇವರನ್ನು ಮತ್ತೊಮ್ಮೆ ವಿಚಾರಿಸಿದಾಗ, ಅವರು ಲೈಸೆನ್ಸ್ ನೀಡಲು ರೂ. 15,000/-ಗಳ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿರುತ್ತಾರೆ. ರೂ.15,000/-ಗಳನ್ನು ನೀಡಲು ಆಗುವುದಿಲ್ಲವೆಂದು ಕೇಳಿಕೊಂಡಾಗ ಪಿ.ಡಿ.ಓ. ಕೃಷ್ಣಮೂರ್ತಿ ಇವರು ರೂ.10,000/-ಗಳಿಗೆ ಒಪ್ಪಿಕೊಂಡಿರುತ್ತಾರೆ.
ನಂತರ ದಿ:29-08-2025ರಂದು ಪಿ.ಡಿ.ಓ. ಕೃಷ್ಣಮೂರ್ತಿ ಇವರನ್ನು ಮತ್ತೊಮ್ಮೆ ಭೇಟಿಯಾದಾಗ ಅವರು ಈಗ ಎಷ್ಟಿದೆ ಎಂದು ಕೇಳಿ ರೂ. 5,000/-ಗಳನ್ನು ತಮ್ಮ ಕಛೇರಿಯ ಅಪರೇಟರ್ ಕೈಗೆ ಕೊಡಿಸಿದ್ದು, ಇನ್ನುಳಿದ ಹಣವನ್ನು ಕೊಟ್ಟು ಲೈಸೆನ್ಸ್ ಪಡೆದುಕೊಂಡು ಹೋಗುವಂತೆ ಹೇಳಿರುತ್ತಾರೆ.
ದಿ:29-08-2025ರಂದು ಮತ್ತು ಪಿ.ಡಿ.ಓ. ಕೃಷ್ಣಮೂರ್ತಿ ಇವರ ನಡುವೆ ನಡೆದ ಲಂಚದ ಹಣದ ಬಗೆಗಿನ ದೃಶ್ಯಾವಳಿಗಳನ್ನು (ಆಡಿಯೋ & ವೀಡಿಯೋ) ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿರುತ್ತಾರೆ.
ಲಂಚದ ಹಣವನ್ನು ಕೊಟ್ಟು ಮನೆ ನಿರ್ಮಾಣಕ್ಕೆ ಲೈಸೆನ್ಸ್ ಪಡೆದುಕೊಳ್ಳಲು ಇಷ್ಟವಿರದ ಎನ್. ಮನೋಜ್ ಇವರು ಕೃಷ್ಣಮೂರ್ತಿ, ಪಿ.ಡಿ.ಓ. ಅರೇಹಳ್ಳಿ ಗ್ರಾಮ ಪಂಚಾಯ್ತಿ, ಹೊಳಲ್ಕೆರೆ, ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿ ದಿನಾಂಕ:08-09-2025ರಂದು ಪ್ರಕರಣ ದಾಖಲಿಸಲಾಗಿರುತ್ತದೆ.
ಇದನ್ನೂ ಓದಿ: ಯುವ ವಕೀಲರು ನ್ಯಾಯಾಧೀಶರ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ | ನ್ಯಾ.ರೋಣ ವಾಸುದೇವ್
ನಂತರ ದಿನಾಂಕ: 10-09.2025ರಂದು ಪಿ.ಡಿ.ಓ ಜಿ. ಕೃಷ್ಣಮೂರ್ತಿ ಇವರು ತಾನು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಯಲ್ಲಿಯೇ ಎನ್. ಮನೋಜ್ ಇವರಿಂದ ರೂ.5,000/- ರೂಗಳ ಲಂಚದ ಹಣವನ್ನು ಪಡೆದುಕೊಂಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.
ಸದರಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ. ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
