
CHITRADURGA NEWS | 04 JULY 2025
ಹೊಸದುರ್ಗ: ತಾಲೂಕಿನ ಬಾಗೂರು ಗ್ರಾಮದ ವಿದ್ಯಾ ವಾಹಿನಿ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಪಾದಪೂಜೆ ಹಾಗೂ ಅಕ್ಷರಾಭ್ಯಾಸ ಸಮಾರಂಭದಲ್ಲಿ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಭಾಗವಹಿಸಿದ್ದರು.
Also Read: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ | ಪೋಕ್ಸೊ ಕೇಸ್ | ಆರೋಪಿಗೆ 20 ವರ್ಷ ಜೈಲು

ನಂತರ ಶ್ರೀಗಳು ಆಶೀರ್ವಚನ ನೀಡಿ, ಮಕ್ಕಳಿಗೆ ವಿದ್ಯೆ ಜೊತೆಗೆ ವಿವೇಕ ವಿನಯ, ಉತ್ತಮ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ವಿದ್ಯೆ ಗಳಿಸುವುದು ಸಾಧನೆಯಲ್ಲ ಉತ್ತಮ ಸಂಸ್ಕಾರ, ಸನ್ಮಾರ್ಗದಲ್ಲಿ ಜೀವನ ಸಾಗಿಸುವುದು ನಾಡಿನ ಸತ್ಪ್ರಜೆಯಾದಾಗ ಮಾತ್ರ ಶಿಕ್ಷಣ ಪಡೆದಿದ್ದು ಸಾರ್ಥಕವಾಗುತ್ತದೆ ಎಂದರು.
ಈಗಿನ ತಾಂತ್ರಿಕ ಯುಗದಲ್ಲಿ ಮಕ್ಕಳನ್ನು ಮೊಬೈಲ್ ಗಳಿಂದ ಗೀಳಿನಿಂದ ದೂರವಿರಿಸಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಪೋಷಕರ ಪಾತ್ರ ಬಹಳಷ್ಟು ಇದೆ.
ಒಳ್ಳೆಯ ಶಿಕ್ಷಣ ಪಡೆದು ದುಡಿಮೆಯ ಸಲುವಾಗಿ ವಿದೇಶಕ್ಕೆ ತೆರಳುವ ಮಕ್ಕಳು ತಮ್ಮ ಹೆತ್ತವರನ್ನು ಮರೆಯಬಾರದು, ಹಣದ ವ್ಯಾಮೋಹ ಅಹಂಕಾರ ಬೆಳೆಸಿದರೆ, ಆಧ್ಯಾತ್ಮಿಕ ಭಾವನೆ ಒಳ್ಳೆಯ ಗುಣ ಕಲಿಸುತ್ತದೆ ಎಂದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ಮನೆಯೇ ಮೊದಲ ಪಾಠಶಾಲೆಯಾಗಿದ್ದು ತಾಯಿ ಮೊದಲ ಗುರು, ಮಕ್ಕಳು ಒಳ್ಳೆಯ ಸಂಸ್ಕಾರ ಸಂಸ್ಕೃತಿಯ ಕಲಿಕೆ ಮನೆಯಲ್ಲಿ ಆರಂಭವಾಗುತ್ತದೆ. ಪಠ್ಯ ಕಲಿಕೆ ಶಾಲೆಗಳಲ್ಲಿ ಆರಂಭವಾಗುತ್ತದೆ. ಬಾಗೂರಿನ ವಿದ್ಯಾ ವಾಹಿನಿ ಶಾಲೆಯವರು ಅಕ್ಷರಾಭ್ಯಾಸ, ಹೆತ್ತವರ ಪಾದ ಪೂಜಾ ಕಾರ್ಯಕ್ರಮ ಆಯೋಜಿಸುವ ಮೂಲಕ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ನಮ್ಮ ಮಕ್ಕಳ ಹೃದಯದಲ್ಲಿ ಏನನ್ನು ಪೋಷಕರು ಬಿತ್ತುತ್ತಾರೋ ಮನೆಯಲ್ಲಿ ಯಾವ ವಾತಾವರಣವಿರುತ್ತದೆಯೋ ಅವರ ಮುಂದಿನ ಭವಿಷ್ಯವು ಅದೇ ದಿಕ್ಕಿನಲ್ಲಿ ನಡೆಯಲು ಸಾಧ್ಯ.
ಮಕ್ಕಳಿಗಿಂತ ಹೆಚ್ಚು ಜಾಗೃತಿಯನ್ನು ಪೋಷಕರು ವಹಿಸಿ ಮಕ್ಕಳ ಎದುರಿಗೆ ಜಗಳವಾಡದೆ, ದುರಭ್ಯಾಸವು ಮಾಡದೆ, ತಂದೆ ತಾಯಿಗಳು ಅವರಿಗೆ ಆದರ್ಶರಾಗಬೇಕು. ನೀವು ಟಿವಿ ನೋಡಿಕೊಂಡು ಕೂತರೆ ಮಕ್ಕಳು ಟಿವಿ ನೋಡುತ್ತಾರೆ. ನೀವು ಗುರುಹಿರಿಯರನ್ನು ಗೌರವಿಸಿದರೆ ಮಕ್ಕಳು ಗೌರವಿಸುತ್ತಾರೆ ಇದರ ಅರಿವು ನಿಮ್ಮಲ್ಲಿದ್ದಾರೆ ಮಕ್ಕಳು ದಾರಿ ತಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಪಾದಪೂಜೆ ಹಾಗೂ ಅಕ್ಷರಭ್ಯಾಸ ಕಾರ್ಯಕ್ರಮ ವನ್ನು ಅರ್ಚಕರಾದ ಶ್ರೀವತ್ಸ ಭಟ್ ನೆರವೇರಿಸಿದರು.
Also Read: ಕರುಳಿನ ಸಮಸ್ಯೆ ಇರುವವರು ಈ ಹಿಟ್ಟುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ
ಈ ವೇಳೆ ಕಾರ್ಯದರ್ಶಿ ಬಿ.ಜೆ.ರಂಗನಾಥ್, ಸಂಸ್ಥೆಯ ನಿರ್ದೇಶಕರಾದ ಪಾಂಡುರಂಗ, ಕುಮಾರ್, ರಂಗನಾಥ್, ಮಂಜುನಾಥ್, ರಮೇಶ್, ಮುಖ್ಯ ಶಿಕ್ಷಕ ಮಂಜುನಾಥ್, ಕೇಶವ ಮೂರ್ತಿ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
