CHITRADURGA NEWS | 16 NOVEMBER 2025
ಚಿತ್ರದುರ್ಗ: ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ಎನ್‍ಇಇಟಿ ಅತಿ ಮುಖ್ಯವಾದ ಘಟ್ಟಗಳಾಗಿವೆ. ಇವು ನಿಮ್ಮ ಮುಂದಿನ ಜೀವನವನ್ನು ನಿರ್ಧಾರ ಮಾಡುವಂತ ತಿರುವುಗಳಾಗಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಟಿ.ತಿಮ್ಮಯ್ಯ ತಿಳಿಸಿದರು.
ಇದನ್ನೂ ಓದಿ: ವಿದ್ಯಾನಗರ ಏಳುಕೋಟಿ ಬಡಾವಣೆ ನಿವಾಸಿ ರತ್ನಮ್ಮ ನಿಧನ
ನಗರದ ಗಾರೆಹಟ್ಟಿಯಲ್ಲಿನ ಎಸ್.ಜೆ.ಎಂ ವಿದ್ಯಾಪೀಠ, ಶಾಲಾ ಶಿಕ್ಷಣ ಇಲಾಖೆ, ಶ್ರೀ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಲೇಜಿನ ಪ್ರಥಮ ಮತ್ತು ದ್ವೀತೀಯ ಪಿಯು ವಿದ್ಯಾರ್ಥಿಗಳಿಗಾಗಿ ಸಿಇಟಿ ಹಾಗೂ ಎನ್.ಇ.ಇ.ಟಿ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಎರಡು ವರ್ಷ ನೀವುಗಳು ಕಷ್ಟ ಪಟ್ಟರೆ ಮುಂದಿನ ಜೀವನ ಪೂರ್ತಿಯಾಗಿ ಆರಾಮಾಗಿ ಇರಬಹುದಾಗಿದೆ. ಆದರೆ ಈ ಎರಡು ವರ್ಷ ಮೋಜಿನಲ್ಲಿ ಕಳೆದರೆ ಮುಂದಿನ ನಿಮ್ಮ ಜೀವನ ಕಷ್ಟ ಪಡಬೇಕಾಗುತ್ತದೆ.
ಕಲಿಯುವ ಶ್ರದ್ದೆಯಿಂದ ಕಲಿಯವುದನ್ನು ಮಾತ್ರ ಮಾಡಿ ಬೇರೆದಕ್ಕೆ ಅವಕಾಶವನ್ನು ನೀಡಬೇಡಿ, ಕಠಿಣವಾದ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ. ಪರಿಶ್ರಮ ಇರದಿದ್ದರೆ ಏನನ್ನು ಸಹಾ ಸಾಧನೆ ಮಾಡಲು ಆಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಪ್ರತಿಷ್ಠಿತ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ ಪ್ರಶಸ್ತಿಗೆ ಎಸ್.ವರಲಕ್ಷ್ಮಿ ಆಯ್ಕೆ
ನಾವುಗಳು ಕೆಲವೊಂದು ಸಮಯದಲ್ಲಿ ಕಿವುಡರಾಗಬೇಕಿದೆ, ಬೇರೆಯವರ ಮಾತುಗಳಿಗೆ ಬೆಲೆ ನೀಡದೆ ನಮ್ಮ ಗುರಿ ಮುಟ್ಟುವಂತ ಧಾವಿಸಬೇಕಿದೆ. ಕಷ್ಟ, ಬಡತನ ನಿಮ್ಮ ಸಾಧನೆಗೆ ದಾರಿ ದೀಪಗಳಾಗಬೇಕಿದೆ. ನಮ್ಮಲ್ಲಿ ಸಾಧನೆ ಮಾಡಿರುವವರು ಬಹುತೇಕ ಬಡತನದಿಂದ ಬಂದವರೆ ಆಗಿದ್ದಾರೆ. ಬಡತನದಲ್ಲಿ ಹಸಿವಿನಲ್ಲಿ ಸಾಧನೆ ಮಾಡುವ ಮನಸ್ಸು ಇರುತ್ತದೆ, ಅದರ ಸದುಪಯೋಗ ಆಗಬೇಕಿದೆ. ಶಿಕ್ಷಣದಿಂದ ಮಾತ್ರ ಏನನ್ನಾದರೂ ಸಾಧನೆ ಮಾಡಲು ಸಾಧ್ಯ. ಅಕ್ಷರ ಕಲಿತವನಿಗೆ ಸಮಾಜದಲ್ಲಿ ಗೌರವ ಇರುತ್ತದೆ.
ಸಮಯವನ್ನು ವ್ಯರ್ಥ ಮಾಡಬೇಡಿ ಸದುಯೋಗವನ್ನು ಪಡಿಸಿಕೊಳ್ಳಿ, ಸಾಧ್ಯವಾದಷ್ಟು ನಿಮ್ಮ ಮೊಬೈಲ್‍ಗಳಿಂದ ದೂರ ಇರಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಿ ಮಿಕ್ಕ ಸಮಯವನ್ನು ಅಭ್ಯಾಸದಲ್ಲಿ ತಲ್ಲಿನರಾಗಿ, ಪುಸ್ತಕ ಓದುವುದರಿಂದ ನಮ್ಮ ಜ್ಞಾನ ಹೆಚ್ಚಾಗುತ್ತದೆ ಮೊಬೈಲ್ ನೋಡುವುದರಿಂದ ನಮಗೆ ಏನು ಸಹಾ ಉಪಯೋಗವಾಗುವುದಿಲ್ಲ ಎಂದು ತಿಳಿಸಿದರು.
ಎಸ್.ಜೆ.ಎಂ.ಐ.ಟಿಯ ಉಪ ಪ್ರಾಂಶುಪಾಲರಾದ ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಬಿಇ ಮತ್ತು ಎಂಬಿಬಿಎಸ್ ಮಾಡಲು ಸಿಇಟಿ ಮತ್ತು ಎನ್.ಇ.ಇ.ಟಿ ಉಪಯೋಗವಾಗುತ್ತದೆ. ನಿಮ್ಮ ಶಾಲೆಯಲ್ಲಿ ಇದರ ಬಗ್ಗೆ ತರಬೇತಿ ನೀಡಲಾಗುತ್ತದೆ, ಇದರ ಸದುಪಯೋಗವನ್ನು ಪಡಿಸಿಕೊಳ್ಳಿ. ಇಲ್ಲಿ ವಿದ್ಯಾರ್ಥಿಗಳಿಗೆ ಹೊರೆಯಾಗದ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ. ಸಿಇಟಿ ಮತ್ತು ಎನ್.ಇ.ಇ.ಟಿ ಪರೀಕ್ಷೆಯ ರ್ಯಾಂಕಿಂಗ್‍ನಲ್ಲಿ 1 ಲಕ್ಷದೊಳಗೆ ಬಂದರೆ ರಾಜ್ಯದಲ್ಲಿ ಉತ್ತಮವಾದ ಕಾಲೇಜುಗಳು ಸಿಗಲು ಸಾಧ್ಯವಿದೆ. ಇದನ್ನು ಮನದಲ್ಲಿ ಇಟ್ಟುಕೊಂಡು ಅಭ್ಯಾಸವನ್ನು ಮಾಡಿ ಎಂದರು.
ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಬಿಸಿಯೂಟ ಯೋಜನೆ ಸ್ವಾಗತರ್ಹ | ಬಿ.ಪಿ.ತಿಪ್ಪೇಸ್ವಾಮಿ
ಶ್ರೀ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ಜಿ.ರಾಜೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಮೋಹನ್, ಇಂಡಿಪೆಂಡೆಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ, ಪೋಷಕರಾದ ರವಿ, ಸಂಪನ್ಮೂಲ ವ್ಯಕ್ತಿಗಳಾದ ನಯನರಾಣಿ, ಅನೂಪ್ ಗೌಡ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

