Connect with us

    LIC ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆ | ಎಸ್.ಹನುಮಂತ ನಾಯ್ಕ್

    ಜೀವ ವಿಮಾ ನಿಗಮ ಶಾಖೆ ವತಿಯಿಂದ 68ನೇ ವರ್ಷದ ವಿಮಾ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ

    ಮುಖ್ಯ ಸುದ್ದಿ

    LIC ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆ | ಎಸ್.ಹನುಮಂತ ನಾಯ್ಕ್

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 SEPTEMBER 2024

    ಚಿತ್ರದುರ್ಗ: ಭಾರತೀಯ ಜೀವ ವಿಮಾ ಸಂಸ್ಥೆ(LIC) ದೇಶದಲ್ಲಿಯೇ ಏಕೈಕ ಅತ್ಯುತ್ತಮ ವಿಶ್ವಾಸವುಳ್ಳ ವಿಮಾ ಸಂಸ್ಥೆಯಾಗಿದೆ ಎಂದು ಹಿರಿಯ ಶಾಖಾ ವ್ಯವಸ್ಥಾಪಕ ಎಸ್.ಹನುಮಂತ ನಾಯ್ಕ್ ಹೇಳಿದರು.

    ಕ್ಲಿಕ್ ಮಾಡಿ ಓದಿ: Vanivilasa: ವಾಣಿವಿಲಾಸ ಜಲಾಶಯದಲ್ಲಿ ಜಲ ವೈಭೋಗ | ಸನಿಹವಾಗಿದೆ ಮೂರನೇ ಬಾರಿಗೆ ಕೋಡಿ ಬೀಳುವ ಕ್ಷಣ

    ನಗರದ ಭಾರತೀಯ ಜೀವ ವಿಮಾ ನಿಗಮ ಶಾಖೆ ವತಿಯಿಂದ ಏರ್ಪಡಿಸಿದ 68ನೇ ವರ್ಷದ ವಿಮಾ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ,

    ದೇಶದ ಬಹುತೇಕ ಜನರು ಈ ವಿಮಾ ಸಂಸ್ಥೆಯ ಬಗ್ಗೆ ಅತ್ಯಂತ ವಿಶ್ವಾಸವನ್ನು ಇಟ್ಟುಕೊಂಡಿದ್ದು ವಿಮಾ ಪಾಲಸಿದ್ಧಾರರಾಗಿದ್ದಾರೆ. ಹಾಗಾಗಿ ನಾವುಗಳೆಲ್ಲಾರು ಸಹಕಾರ ಸಹಬಾಳ್ವೆಯಿಂದ ವಿಮಾ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸೋಣಾ ಎಂದರು.

    ನಾನು ಈ ಶಾಖೆಗೆ ಹೊಸದಾಗಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ, ನಿಮ್ಮಗಳ ಸಹಕಾರ ಬಹಳ ಮುಖ್ಯವಾಗಿದೆ, ವ್ಯವಸ್ಥಾಪಕ ಮತ್ತು ಸಿಬ್ಬಂದಿ ವರ್ಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

    ನಿಮ್ಮ ಸಹಕಾರದಿಂದ ನನ್ನ ಸೇವಾ ಅವಧಿಯಲ್ಲಿ ನಮ್ಮ ಶಾಖೆ ವಿಭಾಗ ಮಟ್ಟದಲ್ಲಿ ಅತ್ಯುನ್ನತ ಗುರಿ ಮತ್ತು ಶ್ರೇಣಿ ತಲುಪುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: Hindu Mahaganapati: ಗರುಡ ವಾಹನದಲ್ಲಿ ಕೋಟೆನಾಡು ಪ್ರವೇಶಿಸಲಿದೆ ಹಿಂದೂ ಮಹಾಗಣಪತಿ | ಆಕರ್ಷಿಸುತ್ತಿದೆ ರಾಜವೀರ ಮದಕರಿ ನಾಯಕ ಮಹಾದ್ವಾರ

    ಈ ಸಂದರ್ಭದಲ್ಲಿ ಸಹಾಯಕ ಶಾಖಾ ವ್ಯವಸ್ಥಾಪಕ ಲಕ್ಷ್ಮಿಕಾಂತ್, ಹಿರಿಯ ಆಡಳಿತ ಅಧಿಕಾರಿ ಸೀತಾ ಲಕ್ಷ್ಮಿ, ಅಭಿವೃದ್ಧಿ ಅಧಿಕಾರಿ ಮಹೇಶ್ ಎ.ಓ. ಶ್ಯಾಮಣ್ಣ, ಎ.ಎ.ಓ. ಯತೀಶ್, ಸಾಂಸ್ಕøತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಚಂದ್ರು, ಎಚ್.ಜಿ.ಎ.ಗಳಾದ ರೇಣುಕಾ, ಇಂದಿರಾ, ಮಮತಾ, ನಿರ್ಮಲಾ, ಸುಮಾ, ಗೀತಾ ಸೇರಿದಂತೆ ವಿವಿಧ ಶ್ರೇಣಿಯ ವಿಮಾ ಪ್ರತಿನಿಧಿಗಳು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top