
CHITRADURGA NEWS | 22 MARCH 2024
ಚಿತ್ರದುರ್ಗ: ಐತಿಹಾಸಿಕ ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವಕ್ಕೆ ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರ ಸಜ್ಜಾಗಿದೆ. ಮಾರ್ಚ್ 23ರಂದು ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ.
ಜಾತ್ರೆಯ ಅಂಗವಾಗಿ ಅನ್ನ ಸಂತರ್ಪಣೆ, ಪಾನಕ ಪೂಜೆ, ಹೂವಿನಪಲ್ಲಕ್ಕಿ ಉತ್ಸವ, ಶಯನೋತ್ಸವ, ಧೂಳೋತ್ಸವ, ಪೀಠೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಚೌಕಿ ಉತ್ಸವ ನಡೆಯಲಿವೆ. ರಜತ ಪೀಠೋತ್ಸವ, ಉಯ್ಯಾಲೋತ್ಸವ, ಅಶ್ವ ವಾಹನೋತ್ಸವ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಕ್ಲಿಕ್ ಮಾಡಿ ಓದಿ: ರಾಮನಗರದಲ್ಲಿ ಅಧಿಕಾರಿಗಳ ವಶಕ್ಕೆ ಮಂಕಿ ಮ್ಯಾನ್ ಜ್ಯೋತಿರಾಜ್

ಶನಿವಾರ ಎರಡು ಬಾರಿ ರಥೋತ್ಸವ ನಡೆಯುವುದು ವಿಶೇಷ. ಮೊದಲ ರಥೋತ್ಸವ ಬೆಳಿಗ್ಗೆ 4.30ಕ್ಕೆ ನಡೆಯಲಿದೆ, ಮಧ್ಯಾಹ್ನ 3.30ಕ್ಕೆ ಮತ್ತೊಂದು ಬಾರಿ ರಥೋತ್ಸವ ಜರುಗಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ರಂಗಪ್ಪನ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕ್ಲಿಕ್ ಮಾಡಿ ಓದಿ: ಚಳ್ಳಕೆರೆ ATR ನಲ್ಲಿ ಇಸ್ರೋ ಮಹತ್ವದ ಸಾಧನೆ | ಮರುಬಳಕೆಯ ರಾಕೇಟ್ ಪುಷ್ಪಕ್ ಯಶಸ್ವಿ ಲ್ಯಾಂಡಿಂಗ್
ಭಕ್ತರಿಗೆ ಕುಡಿಯುವ ನೀರು, ಊಟ, ವಸತಿ, ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ವಿಶಿಷ್ಟ ವಾಸ್ತುಶೈಲಿ, ಆಕರ್ಷಕ ವಿನ್ಯಾಸಗಳಿಂದ ಎಲ್ಲರನ್ನು ಆಕರ್ಷಿಸುತ್ತದೆ. ಅಂದಾಜು 850 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾದ ಈ ದೇವಾಲಯ ಮೇಲುಕೋಟೆಯ ಚೆಲುವ ನಾರಾಯಣ ದೇಗುಲದ ಶೈಲಿಯನ್ನು ಹೋಲುತ್ತದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
