Connect with us

    ಸೀಬಾರದ ವಿಶ್ವಮಾನವ ಶಾಲೆಯಲ್ಲಿ ಕುವೆಂಪು 121ನೇ ಜನ್ಮದಿನಾಚರಣೆ

    Vishwa Manava School

    ಮುಖ್ಯ ಸುದ್ದಿ

    ಸೀಬಾರದ ವಿಶ್ವಮಾನವ ಶಾಲೆಯಲ್ಲಿ ಕುವೆಂಪು 121ನೇ ಜನ್ಮದಿನಾಚರಣೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 30 DECEMBER 2024

    ಚಿತ್ರದುರ್ಗ: ನಗರದ ಹೊರವಲಯದಲ್ಲಿರುವ ಸೀಬಾರ-ಗುತ್ತಿನಾಡು ಗ್ರಾಮದಲ್ಲಿರುವ ವಿಶ್ವಮಾನವ ವಿದಾಸಂಸ್ಥೆಯಲ್ಲಿ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು, ಚಿತ್ರದುರ್ಗ ಸೈನ್ಸ್ ಫೌಂಡೇಷನ್ ವತಿಯಿಂದ ಕುವೆಂಪು ಅವರ 121ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

    Also Read: ದಿನ ಭವಿಷ್ಯ | ಡಿಸೆಂಬರ್ 30 | ನಿರುದ್ಯೋಗಿಗಳಿಗೆ ಹೊಸ ಅವಕಾಶ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

    ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕುವೆಂಪು ಅವರು ಸರಳ ಜೀವನ ಮತ್ತು ಉದಾತ್ತವಾದ ಚಿಂತನೆಯ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

    ತಮ್ಮ ಸಾಹಿತ್ಯದ ಮೂಲಕ ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಹದಗೆಟ್ಟ ವ್ಯವಸ್ಥೆಯನ್ನು  ಎಚ್ಚರಿಸುವ ಕಾರ್ಯ ಮಾಡಿದರು. 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಇಂದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಬೇಕಿದೆ.

    ಕನ್ನಡವನ್ನು ತಂತ್ರಜ್ಞಾನದ ಭಾಷೆಯಾಗಿ ರೂಪಿಸಬೇಕಿದೆ. ಇಂದು ಕನ್ನಡದ ಜತೆಗೆ ಇನ್ನಿತರೆ ಎಲ್ಲ ಭಾಷೆಗಳನ್ನು ಅರಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಎಲ್ಲ ಭಾಷೆಗಳಲ್ಲಿನ ಜ್ಞಾನವನ್ನು ಪಡೆದು ಕನ್ನಡದಲ್ಲಿ ಅಭಿವ್ಯಕ್ತಿಸುವ ಪರಿಪಾಠ ನಮ್ಮದಾಗಬೇಕು ಎಂದು ಹೇಳಿದರು.

    Also Read: ಡಿ.31 ರಿಂದ KSRTC ನೌಕರರ ಅನಿರ್ಧಿಷ್ಟಾವಧಿ ಮುಷ್ಕರ

    ಕಾರ್ಯಕ್ರಮದಲ್ಲಿ ಚಿಂತಕ ದಾದಾಪೀರ್ ನವಿಲೇಹಾಳ್ ವಿಶೇಷ ಉಪನ್ಯಾಸ ನೀಡಿ, ಆಧುನಿಕ ಕನ್ನಡ ಸಾಹಿತ್ಯದ ಕಾಲಘಟ್ಟದಲ್ಲಿ ಕುವೆಂಪುರವರು ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿ ವೈಚಾರಿಕ, ವೈಜ್ಞಾನಿಕ ಚಿಂತನೆ ಮತ್ತು ಆದರ್ಶಗಳನ್ನು ಬಿತ್ತಿದವರು ಎಂದರು.

    ವಿಶ್ವಮಾನವ ವಿದ್ಯಾಸಂಸ್ಥೆಯ  ಕಾರ್ಯದರ್ಶಿ ಎಂ.ನೀಲಕಂಠದೇವ, ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಜಿ.ಎನ್.ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ಕೋಶಾಧ್ಯಕ್ಷ ಕೆ.ವಿ.ನಾಗಲಿಂಗಾರೆಡ್ಡಿ ಇವರುಗಳು ಮಾತನಾಡಿದರು.

    ಕಾರ್ಯಕ್ರದಮಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಹೆಚ್. ಬುಡೇನ್ ಸಾಬ್, ಪ್ರಾಚಾರ್ಯ ಎಚ್.ಆರ್.ಸುಧಾ, ಜಿ.ಆರ್.ಚನ್ನಬಸಪ್ಪ, ಜಿಲ್ಲಾ ಕಸಾಪ ಕಾರ್ಯದರ್ಶಿ ಶ್ರೀನಿವಾಸ್‌ಮಳಲಿ, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ, ಕೋಶಾಧ್ಯಕ್ಷ ಸಿ.ಲೋಕೇಶ್  ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top