ಮುಖ್ಯ ಸುದ್ದಿ
Gaurasandra Maramma; ಸೆ.19ವರೆಗೆ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ

CHITRADURGA NEWS | 15 SEPTEMBER 2024
ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ಗೌರಸಂದ್ರ ಮಾರಮ್ಮ(Gaurasandra Maramma) ದೇವಿಯ ಜಾತ್ರಾ ಮಹೋತ್ಸವ(Jatra Mahotsava)ದ ಅಂಗವಾಗಿ ಶುಕ್ರವಾರ ಸಂಜೆ ಅಮ್ಮನವರಿಗೆ ಮದಲಿಂಗಿತ್ತಿ ಶಾಸ್ತ್ರ ನೆರವೇರಿಸಲಾಯಿತು.
ಕ್ಲಿಕ್ ಮಾಡಿ ಓದಿ: Karaway protest; ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ಕರವೇ ಪ್ರತಿಭಟನೆ
ಸೆ.13 ರಿಂದ 19 ರವರೆಗೆ ಜಾತ್ರಾ ಮಹೋತ್ಸವ ಆಯೋಜಿಸಿದ್ದು, ಶುಕ್ರವಾರ ಮದಲಿಂಗಿತ್ತಿ ಶಾಸ್ತ್ರ ಕಂಕಣಧಾರಣೆ ಸೇರಿದಂತೆ ಮತ್ತಿತರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಪ್ರಯುಕ್ತ ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗಳಿಗೆ ಆಭರಣಗಳು ಸೇರಿದಂತೆ ಬಗೆ ಬಗೆಯ ಪುಷ್ಪಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿತ್ತು. ಪೂಜೆಯ ನಂತರ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸೆ.16 ರಂದು ರಾತ್ರಿ 11 ಕ್ಕೆ ಹೊಳೆಪೂಜೆ, ಸೆ.17 ರಂದು ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಹಿಟ್ಟಿನ ಆರತಿ ಮತ್ತು ಬೇವಿನ ಸೀರೆ ಹರಕೆ ಕಾರ್ಯಕ್ರಮ.
ಕ್ಲಿಕ್ ಮಾಡಿ ಓದಿ: Hindi; ಹಿಂದಿ ದಿವಸ್ ಆಚರಣೆಗೆ ಕರುನಾಡ ವಿಜಯಸೇನೆ ವಿರೋಧ
ಸೆ.18 ರಂದು ರಾತ್ರಿ 8 ಕ್ಕೆ ಅಗ್ನಿಕುಂಡ ಕಾರ್ಯಕ್ರಮ, ಸೆ.19 ರಂದು ಬೆಳಗ್ಗೆ 11 ಕ್ಕೆ ಓಕಳಿ ಸೇವೆ ಮತ್ತು ಮುರುಘರಾಜೇಂದ್ರ ಮಠಕ್ಕೆ ತೆರಳಿ ರಾಜ ಬೀದಿಗಳಲ್ಲಿ ಮೆರೆವಣಿಗೆ ಮುಖಾಂತರ ರಾತ್ರಿ 11 ಕ್ಕೆ ದೇವಿಯ ಗರ್ಭಗುಡಿ ಪ್ರವೇಶ ಕಾರ್ಯಕ್ರಮಗಳು ಜರುಗಲಿವೆ ಎಂದು ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನದ ಕಾರ್ಯಕಾರಿ ಸಮಿತಿ ತಿಳಿಸಿದೆ.
