ಕ್ರೈಂ ಸುದ್ದಿ
Accident: ಬೈಕ್ ಡಿಕ್ಕಿ | ಪಾದಚಾರಿ ಸ್ಥಳದಲ್ಲೇ ಸಾವು

Published on
CHITRADURGA NEWS | 15 SEPTEMBER 2024
ಚಿತ್ರದುರ್ಗ: ಬೈಕ್ ಡಿಕ್ಕಿಯಾದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಲೇಬೆನ್ನೂರು ಸಮೀಪದ ನಂದಿತಾವರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ನಂದಿತಾವರೆ ಗ್ರಾಮದ ಶಿವನಗೌಡ ಗುರುವಾರ ರಾತ್ರಿ ಬೈಕ್ ಚಲಾಯಿಸಿಕೊಂಡು ಬರುವಾಗ ಮೊಳಕಾಲ್ಮುರು ತಾಲ್ಲೂಕು ಹಾನಗಲ್ ಮೂಲದ ವೆಂಕಟೇಶ್ ಮೂರ್ತಿ ಅವರಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ವೆಂಕಟೇಶ್ ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕ್ಲಿಕ್ ಮಾಡಿ ಓದಿ: ಹಿಂದೂ ಮಹಾ ಗಣಪತಿ ಶೋಭಾಯಾತ್ರೆ | ಸಿಂಗಾರಗೊಂಡ ಮುಖ್ಯರಸ್ತೆ | ಪೊಲೀಸ್ ಬಿಗಿ ಭದ್ರತೆ

ಬೈಕ್ ಸವಾರ ನಂದಿತಾವರೆ ಗ್ರಾಮದ ಶಿವನಗೌಡ ವಿರುದ್ಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Reading
Related Topics:bike collision, death, Hanagal, location, pedestrian, Police, ಪಾದಚಾರಿ, ಪೊಲೀಸ್, ಬೈಕ್ ಡಿಕ್ಕಿ, ಸಾವು, ಸ್ಥಳ, ಹಾನಗಲ್

Click to comment