CHITRADURGA NEWS | 12 MARCH 2024
ಚಿತ್ರದುರ್ಗ: ವ್ಯಕ್ತಿಯ ಬದುಕು ಸಾರ್ಥಕವಾಗಲು ಭಕ್ತಿಯು ಸತ್ಪಥವನ್ನು ತೋರಿಸುತ್ತದೆ. ಸಂಕಷ್ಟಗಳನ್ನು ಸಹಿಸಿಕೊಂಡು ಸಾಧನೆ ಮಾಡಲು ಪ್ರೇರಕ ಶಕ್ತಿಯಾಗಿರುವ ಭಕ್ತಿಯು ವ್ಯಕ್ತಿಯಲ್ಲಿ ಶಕ್ತಿ ಮತ್ತು ಶ್ರದ್ಧೆ ವೃದ್ಧಿಸುವ ಸಾಧನವೆಂದು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಏರಿಕೆಯ ಹಾದಿ ಹಿಡಿದ ರಾಶಿ ಅಡಿಕೆ ಬೆಲೆ
ಬೆಳಗಟ್ಟದಲ್ಲಿ ಶ್ರೀ ಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿಯ 23ನೇ ಮಹಾರಥೋತ್ಸವದ ನಿಮಿತ್ತ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಖ್ಯಾತಕವಿ ಯುಗಧರ್ಮ ರಾಮಣ್ಣ ಅವರು ಮಾತನಾಡಿ, ಮಹದೇವಮ್ಮ ಅವರು ಮಹಾತಾಯಿ, ಸಾವಿರಾರು ಭಕ್ತರ ಸಂಕಷ್ಟಗಳನ್ನು ಪರಿಹರಿಸುವ, ನಡೆದಾಡುವ, ಮಾತನಾಡುವ ದೇವರು, ಬ್ರಹ್ಮಜ್ಞಾನಿ ಮಹದೇವಮ್ಮ ಅವರ ಆಧ್ಯಾತ್ಮಿಕ ಸಾಧನೆ ಅಪೂರ್ವವಾದದ್ದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ | ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ
ಈ ವೇಳೆ ಶ್ರೀ ಗುರು ಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷರಾದ ಅಮ್ಮ ಮಹದೇವಮ್ಮ, ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನೆಲ್ಲಿಕಟ್ಟೆ ಡಾ.ಎಸ್.ಸಿದ್ದೇಶ್, ಅನಿತಾ ಗಿರೀಶ್, ಬಿ.ಟಿ.ಸೋಮೇಂದ್ರ, ಪಾಪೇಶ್ ನಾಯಕ, ಲಿಂಗಂ ಶ್ರೀನಿವಾಸ್, ಪ್ರಾಣೇಶ್, ತಿಮ್ಮಪ್ಪ, ರುದ್ರಮುನಿ, ಅಶ್ವತ್ಥ ನಾರಾಯಣ, ಎರ್ರಿಸ್ವಾಮಿ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
