
CHITRADURGA NEWS | 05 JULY 2024
ಚಿತ್ರದುರ್ಗ: ನಗರದ ಕಿವಿ, ಮೂಗು, ಗಂಟಲು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಎನ್. ಬಿ.ಪ್ರಹ್ಲಾದ್ ಅವರು 56 ವಯಸ್ಸಿನಲ್ಲಿ 14100 ಅಡಿ ಎತ್ತರದ ಹಿಮಾಲಯದ ಪರ್ವತ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: Renukaswamy; ಟೆಕ್ನಾಲಜಿಯಿಂದಾಗಿ ಅಪರಾಧ ಹೆಚ್ಚಳ | ಬಿ.ಸಿ.ಪಾಟೀಲ್
ಕಳೆದ ವಾರ ಹಿಮಾಚಲ ಪ್ರದೇಶದ “ಹಮಟಾ ಪಾಸ್” ಎನ್ನುವ 14100 ಅಡಿ ಎತ್ತರದ ಹಿಮಾಲಯದ ಪರ್ವತ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ.
ಡಾ.ಎನ್.ಬಿ.ಪ್ರಹ್ಲಾದ್ ಇವರು 5 ಜನ ವೈದ್ಯರ ತಂಡವನ್ನು ಮುನ್ನಡೆಸಿ ಹೆಚ್ಚಿನ ಎತ್ತರ, ಹವಾಮಾನ ವೈಪರಿತ್ಯ ಮತ್ತು ಕಷ್ಟಕರ ವಿಭಿನ್ನ ಭೂಪ್ರದೇಶಗಳಿಂದ ಕೂಡಿದ ಪರ್ವತ ಶ್ರೇಣಿಗಳಲ್ಲಿ ಸ್ಟ್ಂಟ್ ಅಳವಡಿಸಿದ ವಯಸ್ಸಾದ ಹೃದಯದ ಮೇಲೆ ಆಗುವ ದುಷ್ಫರಿಣಾಮಗಳ ಬಗ್ಗೆ ನಡೆದ ವೈದ್ಯಕೀಯ ಸಂಶೋಧನೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಐತಿಹಾಸಿಕ ಕೋಟೆಗೆ ಧ್ವನಿ ಬೆಳಕಿನ ವೈಭವ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
ದುರ್ಗಮವಾದ ಪರ್ವತ ಶಿಖರಗಳಲ್ಲಿ ಮಳೆ ಮತ್ತು ಹಿಮಪಾತಗಳ ನಡುವೆ ಯಾವುದೇ ಅವಘಡಗಳಿಲ್ಲದೆ ಯಶಸ್ವಿಯಾಗಿ ಪರ್ವತಾರೋಹಣವನ್ನು ಮಾಡಿ ಸಾಧನೆ ಮಾಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
