CHITRADURGA NEWS | 19 MAY 2025
ಚಿತ್ರದುರ್ಗ: ಜಿಲ್ಲೆಯಾದ್ಯಂತ 3 ದಿನ ಉತ್ತಮ ಮಳೆಯಾಗಿದ್ದು, ಹಲವೆಡೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.
Also Read: 1 ಕಿ.ಮೀ ತಿರಂಗಾ ಯಾತ್ರೆ | ದುರ್ಗದ ಬೀದಿಗಳಲ್ಲಿ ದೇಶಭಕ್ತಿಯ ಹೆದ್ದರೆ | ಭಾರತೀಯ ಸೇನೆಗೆ ನಾಗರೀಕರ ಬೆಂಬಲ
ಮುಂಗಾರು ಪೂರ್ವದಲ್ಲೇ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಹದವಾದ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿದೆ.
ಶನಿವಾರ ಮಧ್ಯಾಹ್ನದಿಂದಲೇ ಹೊಳಲ್ಕೆರೆ ಭಾಗದಲ್ಲಿ ಮಳೆಯ ಆರ್ಭಟ ಪ್ರಾರಂಭವಾಗಿದ್ದು, ತಾಳ್ಯ ಕೆರೆಗೆ ಭರ್ಜರಿ ನೀರು ಹರಿದು ಬರುತ್ತಿದೆ.
ತಾಳ್ಯ ಜಾನಕಲ್ ಮಾರ್ಗವಾಗಿ ಹೊಸದುರ್ಗಕ್ಕೆ ಹೋಗುವ ರಸ್ತೆಯ ಮೇಲೆ ಹಳ್ಳ ಹರಿದ ಪರಿಣಾಮ ವಾಹನಗಳು ಕೆಲ ಗಂಟೆಗಳ ಕಾಲ ನಿಂತಲ್ಲಿಯೇ ನಿಂತಿದ್ದವು.
Also Read: ಒಂದು ವಾರದೊಳಗೆ ಚಿತ್ರದುರ್ಗ-ದಾವಣಗೆರೆ ರಸ್ತೆಯ ರೈಲ್ವೆ ಗೇಟ್‍ಗೆ ಟೆಂಡರ್ | ಸಚಿವ ವಿ.ಸೋಮಣ್ಣ ಸೂಚನೆ
ರಾತ್ರಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ಮುಂಗಾರು ಕೃಷಿಗೆ ಮಾಗಿ ಮಾಡಿದ್ದ ರೈತರ ಜಮೀನುಗಳು ಚೆನ್ನಾಗಿ ನೀರು ಕುಡಿದ ಸಂತಸವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ದೇವಮೂಲೆಯಿಂದ ಜಿಲ್ಲೆಗೆ ಮಳೆ:
ಮಳೆಯ ನೆರಳಿನ ಪ್ರದೇಶ ಎನ್ನುತ್ತಿದ್ದ ಜಿಲ್ಲೆಯ ದೇವಮೂಲೆ ಮೊಳಕಾಲ್ಮೂರು ತಾಲೂಕಿನಿಂದಲೇ ಈ ವರ್ಷದ ಮಳೆ ಆರಂಭವಾಗಿದ್ದು, ಶುಭ ಸಂಕೇತ ಎಂದು ಬಣ್ಣಿಸಲಾಗುತ್ತಿದೆ.
ನಾಯಕನಹಟ್ಟಿ, ತಳುಕು ಹೋಬಳಿಗಳ ಹಲವು ಗ್ರಾಮಗಳಲ್ಲಿ ಮಳೆಯಾಗಿದ್ದು, ಹಳ್ಳಗಳಲ್ಲಿ ವಾರದ ಹಿಂದೆಯೇ ನೀರು ಹರಿದಿದೆ.
Also Read: ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೂಮಿ ಪೂಜೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಇನ್ನೂ ಮೊಳಕಾಲ್ಮೂರು ತಾಲೂಕಿನ ಗಡಿ ಭಾಗ ಬಾಂಡ್ರಾವಿ ಭಾಗದಲ್ಲಿ ಸುರಿದ ಮಳೆಗೆ ಚೆಕ್ ಡ್ಯಾಂಗಳು ಭರ್ತಿಯಾಗಿ ಹಳ್ಳದಲ್ಲಿ ನೀರು ಹರಿದಿದೆ. ಈ ವೇಳೆ ರೈತರ ಎಮ್ಮೆಗಳು ನೀರಿನಲ್ಲಿ ಕೊಚ್ಚಿ ಹೋದ ಘಟನೆಯೂ ನಡೆದಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
