By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ | ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
    ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ | ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ 
    4 hours ago
    ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಮಾತನಾಡಿದರು
    KDP ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಿ | ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
    5 hours ago
    AICC ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಹುಟ್ಟುಹಬ್ಬ ಆಚರಣೆ
    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬ ಆಚರಣೆ 
    5 hours ago
    ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘಕ್ಕೆ ಜಿಲ್ಲಾಧ್ಯಕ್ಷರಾಗಿ ಡಾ.ಕೃಷ್ಣಪ್ಪ ಆಯ್ಕೆ
    ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘಕ್ಕೆ ಜಿಲ್ಲಾಧ್ಯಕ್ಷರಾಗಿ ಡಾ.ಕೃಷ್ಣಪ್ಪ ಆಯ್ಕೆ
    5 hours ago
    ಅರ್ಜಿ ಅಹ್ವಾನ
    ಕ್ರೀಡಾಪಟುಗಳಿಗೆ ವಿವಿಧ ಪ್ರಶಸ್ತಿ, ಪ್ರೋತ್ಸಾಹಧನಕ್ಕೆ ಅರ್ಜಿ ಅಹ್ವಾನ 
    16 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    1 week ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    3 weeks ago
    Hosadurga police work
    INSTAGRAM, FECEBOOK ಪರಿಚಯ | ಲೈಂಗಿಕ ದುರ್ಬಳಕೆ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ | ಚಿನ್ನಾಭರಣ ವಶಕ್ಕೆ
    1 month ago
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    2 months ago
    Accident near molakalmuru
    ಮೊಳಕಾಲ್ಮೂರು ಬಳಿ ಮತ್ತೊಂದು ಅಪಘಾತ | ಚಳ್ಳಕೆರೆಯ 5 ಜನ ಸಾವು | ಒಂದೇ ದಿನದ ಅಂತರದಲ್ಲಿ ಜಿಲ್ಲೆಯಲ್ಲಿ ಹತ್ತು ಸಾವು
    2 months ago
  • ತಾಲೂಕು
    ತಾಲೂಕುShow More
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    1 week ago
    Bus crashes into divider
    ಡಿವೈಡರ್‌ಗೆ ಅಪ್ಪಳಿಸಿದ ಬಸ್‌ | 28 ಪ್ರಯಾಣಿಕರಿಗೆ ಗಾಯ | ಇಬ್ಬರು ಮೃತ
    1 week ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    3 weeks ago
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ
    ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ | ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಭಾಗೀ 
    1 month ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 weeks ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    1 month ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    2 months ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    2 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಜುಲೈ 21 | ಆರ್ಥಿಕ ಪರಿಸ್ಥಿತಿ ಅನುಕೂಲಕರ, ಉದ್ಯೋಗದಲ್ಲಿ ಕೆಲಸದ ಒತ್ತಡ
    18 hours ago
    today bhavishya
    ದಿನ ಭವಿಷ್ಯ | ಜುಲೈ 20 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು, ದೂರದ ಪ್ರಯಾಣ ಬೇಡ
    2 days ago
    today bhavishya
    ದಿನ ಭವಿಷ್ಯ | ಜುಲೈ 19 | ಆಕಸ್ಮಿಕ ಧನಲಾಭದ ಸೂಚನೆ, ಅರೋಗ್ಯದಲ್ಲಿ ಜಾಗೃತಿ ವಹಿಸಿ
    3 days ago
    today bhavishya
    ದಿನ ಭವಿಷ್ಯ | ಜುಲೈ 18 | ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು, ದೂರದ ಪ್ರಯಾಣ, ಶುಭ ಸುದ್ದಿ
    4 days ago
    today bhavishya
    ದಿನ ಭವಿಷ್ಯ | ಜುಲೈ 17 | ಕೆಲಸದ ಒತ್ತಡ ಹೆಚ್ಚು, ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಜುಲೈ 21 | ಹತ್ತಿ ರೇಟ್ ಎಷ್ಟಿದೆ?
    10 hours ago
    ಮಾರುಕಟ್ಟೆ ಧಾರಣೆ | ಜುಲೈ 20 | ಮೆಕ್ಕೆಜೋಳ, ರಾಗಿ ರೇಟ್…
    1 day ago
    12 ಸಾವಿರ ದಾಟಿದ ಹತ್ತಿ | ಇಂದಿನ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಜುಲೈ 17 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
    4 days ago
    ಮಾರುಕಟ್ಟೆ ಧಾರಣೆ | ಜುಲೈ 15 | ಶೇಂಗಾ, ರಾಗಿ ರೇಟ್ ಎಷ್ಟಿದೆ?
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ ವಿಷಯ ಕುರಿತು ಉಪನ್ಯಾಸಕ ಎಸ್.ಬಸವರಾಜು ಮಾತನಾಡಿದರು
    ಮಾದಕ ವಸ್ತುಗಳ ದುಶ್ಚಟಮುಕ್ತ ಜೀವನದಿಂದ ಉತ್ತಮ ಆರೋಗ್ಯ | ಎಸ್.ಬಸವರಾಜು
    3 days ago
    ಶಾಸಕ ಡಾ.ಎಂ.ಚಂದ್ರಪ್ಪ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
    ಸಬೂಬು ಹೇಳಿಕೊಂಡು ಕಾಲಹರಣ ಮಾಡಿದರೆ ಸಹಿಸಲ್ಲ | KDP ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ 
    3 days ago
    ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    ಹೊಳಲ್ಕೆರೆ : ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಸಿಸಿಇ ತರಬೇತಿ ಕಾರ್ಯಾಗಾರ
    4 days ago
    ಪುರಾತನ ದೇವಾಲಯದ ಜೀರ್ಣೋದ್ಧಾರ, ವಿಶೇಷ ಪೂಜಾ ಕಾರ್ಯಕ್ರಮ
    ಈಗೀಗ ಮನುಷ್ಯ- ಮನುಷ್ಯರ ನಡುವೆ ಹೊಂದಾಣಿಕೆ, ಸಹಬಾಳ್ವೆ ಇಲ್ಲ | ಡಾ.ಕೇದಾರಲಿಂಗ ಶ್ರೀಗಳು
    1 week ago
    ಶಾಸಕ ಡಾ.ಎಂ.ಚಂದ್ರಪ್ಪ ಭೋವಿ ಸಮಾಜದ ಮುಖಂಡರುಗಳೊಂದಿಗೆ ಸಭೆ
    ಜುಲೈ 19 ರಂದು ಭೋವಿ ಜನೋತ್ಸವ | ಹೊಳಲ್ಕೆರೆಯಲ್ಲಿ ಶಾಸಕ ಎಂ.ಚಂದ್ರಪ್ಪ ನೇತೃತ್ವದಲ್ಲಿ ಸಭೆ 
    1 week ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    4 weeks ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    1 month ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    2 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    3 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    5 months ago
  • ಹೊಸದುರ್ಗ
    ಹೊಸದುರ್ಗShow More
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    3 weeks ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    1 month ago
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    1 month ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 months ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 months ago
  • Life Style
    Life StyleShow More
    Obesity
    ಅತಿಯಾಗಿ ತಿನ್ನುವುದರಿಂದ ಮಾತ್ರವಲ್ಲ ಈ ಹಾರ್ಮೋನುಗಳ ಸಮಸ್ಯೆಯಿಂದ ಬೊಜ್ಜು ಹೆಚ್ಚಾಗುತ್ತದೆಯಂತೆ
    17 hours ago
    Gas stove
    ಮಹಿಳೆಯರಿಗೆ ಎಚ್ಚರ; ನಿಮ್ಮ ಅಡುಗೆ ಮನೆಯಲ್ಲಿರುವ ಗ್ಯಾಸ್ ಸ್ಟೌವ್ ಶ್ವಾಸಕೋಶವನ್ನು ಹಾನಿಗೊಳಿಸುತ್ತದೆಯಂತೆ
    18 hours ago
    Swollen foot
    ಊದಿಕೊಂಡ ಪಾದಗಳನ್ನು ತೊಡೆದುಹಾಕಲು ಪ್ರತಿದಿನ ಈ 5 ಕ್ರಮಗಳನ್ನು ಅನುಸರಿಸಿ
    2 days ago
    Skin stickiness and acne during the monsoon
    ಮಳೆಗಾಲದಲ್ಲಿ ಚರ್ಮದ ಜಿಗುಟುತನ ಮತ್ತು ಮೊಡವೆಗಳಿಂದ ತೊಂದರೆಗೊಳಗಾಗಿದ್ದೀರಾ? ಹಾಗಾದ್ರೆ ಅದನ್ನು ನಿವಾರಿಸಲು ಈ ಸರಳ ವಿಧಾನವನ್ನು ಪ್ರಯತ್ನಿಸಿ
    2 days ago
    Sandalwood
    ತಲೆಹೊಟ್ಟು ಸಮಸ್ಯೆಗೆ ಶ್ರೀಗಂಧ ಎಷ್ಟು ಪ್ರಯೋಜನಕಾರಿ ತಿಳಿಯಿರಿ
    3 days ago
Reading: 1 ಕಿ.ಮೀ ತಿರಂಗಾ ಯಾತ್ರೆ | ದುರ್ಗದ ಬೀದಿಗಳಲ್ಲಿ ದೇಶಭಕ್ತಿಯ ಹೆದ್ದರೆ | ಭಾರತೀಯ ಸೇನೆಗೆ ನಾಗರೀಕರ ಬೆಂಬಲ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

1 ಕಿ.ಮೀ ತಿರಂಗಾ ಯಾತ್ರೆ | ದುರ್ಗದ ಬೀದಿಗಳಲ್ಲಿ ದೇಶಭಕ್ತಿಯ ಹೆದ್ದರೆ | ಭಾರತೀಯ ಸೇನೆಗೆ ನಾಗರೀಕರ ಬೆಂಬಲ

chitradurganews.com
Last updated: 17 May 2025 21:03
chitradurganews.com
1 year ago
Share
Chitradurga Tiranga yatre
ಚಿತ್ರದುರ್ಗದಲ್ಲಿ ನಡೆದ ತಿರಂಗಾ ಯಾತ್ರೆಯಲ್ಲಿ 1 ಕಿ.ಮೀ ಉದ್ದದ ತ್ರಿವರ್ಣ
SHARE

CHITRADURGA NEWS | 17 MAY 2025

ಚಿತ್ರದುರ್ಗ: ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ ಎಂಬ ಕವಿ ವಾಣಿಯಂತೆ ಕೋಟೆನಾಡು ಚಿತ್ರದುರ್ಗದಲ್ಲಿ ಸಾವಿರಾರು ಹೆಜ್ಜೆಗಳು ಶನಿವಾರ ಒಂದೇ ದಿಕ್ಕಿನತ್ತ ಹೆಜ್ಜೆ ಹಾಕುತ್ತಿದ್ದವು.

ತಿರಂಗಾ ಯಾತ್ರೆಯ ಹೈಲೈಟ್ಸ್‌:

  • ತಲೆಯ ಮೇಲೆ ಕಿಲೋ ಮೀಟರ್‌ ಉದ್ದದ ತ್ರಿವರ್ಣದ ತಿರಂಗ, ನೂರಾರು ತ್ರಿವರ್ಣ ಧ್ವಜ, ಕೆನ್ನೆಯ ಮೇಲೆಯೂ ತ್ರಿವರ್ಣ.
  • ಭಾರತೀಯ ಸೇನೆ ನಡೆಸಿದ ಆಪರೇಷನ್‌ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ನಾಗರೀಕರ ವೇದಿಕೆಯಿಂದ ಆಯೋಜಿಸಿದ್ದ ಯೋಧ ನಮನ ಕಾರ್ಯಕ್ರಮದ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಲಾಯಿತು.

ಇದನ್ನೂ ಓದಿ: ಒಂದು ವಾರದೊಳಗೆ ಚಿತ್ರದುರ್ಗ-ದಾವಣಗೆರೆ ರಸ್ತೆಯ ರೈಲ್ವೆ ಗೇಟ್‍ಗೆ ಟೆಂಡರ್ | ಸಚಿವ ವಿ.ಸೋಮಣ್ಣ ಸೂಚನೆ

  • ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೆ ಒಂದು ಕಿ.ಮೀ ಉದ್ದದ ಬೃಹತ್‌ ತಿರಂಗ ಹಿಡಿದ ವಿದ್ಯಾರ್ಥಿಗಳು, ಸಾರ್ವಜನಿಕರು ಭಾರತ ಮಾತೆಗೆ, ಭಾರತೀಯ ಸೇನೆಗೆ, ಪ್ರಧಾನಿ ನರೇಂದ್ರ ಮೋದಿಗೆ ಜಯಕಾರ ಹಾಕುತ್ತಾ ಸಾಗಿದರು.
  • ಮೊಳಕಾಲ್ಮೂರಿನ ಹರೀಶ್‌ ಅವರ ತಂಡ 8 ಅಡಿ ಅಗಲ, 1 ಕಿ.ಮೀ ಉದ್ದದ ತಿರಂಗಾ ತಯಾರಿಸಿ ಟ್ರ್ಯಾಕ್ಟರ್‌ ಮೂಲಕ ತಂದಿತ್ತು.

ಇದನ್ನೂ ಓದಿ: ಭೀಕರ ಅಪಘಾತ | ಸ್ಥಳದಲ್ಲೇ ನಾಲ್ಕು‌ ಜನ ಸಾವು | ಕಾರು ಟ್ರ್ಯಾಕ್ಟರ್ ನಡುವೆ ಡಿಕ್ಕಿ

  • ಎಲ್ಲರ ಕೆನ್ನೆಯ ಮೇಲೆ ತಿರಂಗಾ ಚಿಹ್ನೆ, ಕೈಯಲ್ಲಿ ತ್ರಿವರ್ಣ ಧ್ವಗಳು ರಾರಾಜಸಿದವು. ಬ್ರಹ್ಮೋಸ್‌ ಕ್ಷಿಪಣಿ ಸೇರಿದಂತೆ ಹಲವು ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿದ್ದವು. ಚಿತ್ರದುರ್ಗದ ಮುಖ್ಯ ರಸ್ತೆಯಲ್ಲಿ ಇಂದು ದೇಶಭಕ್ತಿಯ ಹೊಳೆಯೇ ಹರಿದಂತಾಯ್ತು.

ಯಾತ್ರೆ ನಂತರ ರೋಟರಿ ಕ್ಲಬ್‌ ಮುಂಭಾಗದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ನಡೆಯಿತು.

ಅವಕಾಶ ಕೊಟ್ಟರೆ ನಾನು ಬಂದೂಕು ಹಿಡಿದು ನಿಲ್ಲುತ್ತೇನೆ:

ಈ ವೇಳೆ ಲಾಂಬಾಣಿ ಗುರುಪೀಠದ ಶ್ರೀ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ಮಾತನಾಡುತ್ತಾ, ಭಾರತ ವಿಶ್ವದ ಆಧ್ಯಾತ್ಮದ ತಾಯಿ ಬೇರು. ಈ ದೇಶ ಎಂದೂ ಯಾರ ಮೇಲೆಯೂ ದೌರ್ಜನ್ಯ, ದಬ್ಬಾಳಿಕೆ ಮಾಡಿಲ್ಲ. ಶರಣರು, ಸಂತರು, ವೀರರು ಜನಿಸಿದ‌ ನೆಲ. ಯಾವ ದೇಶಕ್ಕೂ ಕಿರುಕುಳ ಕೊಟ್ಟಿಲ್ಲ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: 1001 ಆಶ್ರಯ ಮನೆ ನಿರ್ಮಾಣ | ಕಾಮಗಾರಿ ಪರಿಶೀಲಿಸಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) | ತ್ವರಿತ ನಿರ್ಮಾಣಕ್ಕೆ ತಾಕೀತು

ಭಾರತ ಶಾಂತಿಯ ದೇಶ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಬುದ್ಧ, ಬಸವಣ್ಣ, ವಿವೇಕಾನಂದರು ಹುಟ್ಟಿದ ನೆಲ. ಇಂತಹ ದೇಶದಲ್ಲೂ ಇಂದು ಜನರ ರಕ್ತ ಕುದಿಯುತ್ತಿದೆ. ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ಇಡೀ ದೇಶ ಒಟ್ಟಾಗಿದೆ. ಧರ್ಮ, ದೇಶ ದ್ರೋಹಿಗಳು ಯಾರೇ ಇದ್ದರು ಅವರಿಗೆ ಶಿಕ್ಷೆ ಆಗುತ್ತದೆ. ಭಾರತವನ್ನು ಮುಟ್ಟಿದವರು ಸರ್ವನಾಶವಾಗುತ್ತಾರೆ. ಇಂದು ದೇಶ ಉಳಿದರೆ ನಾವು ಉಳಿಯುತ್ತೇವೆ ಎನ್ನುವುದು ಅರ್ಥವಾಗಿದೆ ಎಂದರು.

ಮಠಾಧೀಶರು, ಸ್ವಾಮೀಜಿಗಳು ಬರೀ ಪೂಜೆ ಮಾಡಿಕೊಂಡು ಕುಳಿತುಕೊಳ್ಳುವವರಲ್ಲ. ಅವಕಾಶ ಕೊಟ್ಟರೆ ನಾನು ಕೂಡಾ ಬಂದೂಕು ಹಿಡಿದು ಗಡಿಯಲ್ಲಿ ನಿಲ್ಲುತ್ತೇನೆ ಎಂದು ಶ್ರೀಗಳು ಘೋಷಿಸಿದರು.

ಇದನ್ನೂ ಓದಿ: ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೂಮಿ ಪೂಜೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ಪ್ರತಿ ಮನೆಯಿಂದಲೂ ಒಬ್ಬ ಮಗ ದೇಶದ ಸೇನೆಗೆ ಸೇರುವಂತೆ ಸರ್ಕಾರ ಆದೇಶ ಮಾಡಬೇಕು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

Tiranga yatre chitradurga
ಚಿತ್ರದುರ್ಗದಲ್ಲಿ ಒಂದು ಕಿ.ಮೀ ಉದ್ದದ ತಿರಂಗಾ. ಡ್ರೋನ್‌ ಕ್ಯಾಮರಾ ದೃಶ್ಯ.

ಭಾರತ ಮಾತೆಯ ಸಿಂಧೂರ ಪಾಕ್‌ ಆಕ್ರಮಿತ ಕಾಶ್ಮೀರ:

ಆರೆಸ್ಸೆಸ್ಸ್‌ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಪರ್ಕ ಪ್ರಮುಖ್‌ ಯಾದವ ಕೃಷ್ಣ ಮಾತನಾಡಿ, ಭಾರತ ಮಾತೆಯ ಸಿಂಧೂರ ಆಕ್ರಮಿತ ಕಾಶ್ಮೀರ. ಈ ಗುರಿ ನಿಗಧಿಯಾಗಿದೆ. ಅದನ್ನು ಪಡೆಯುತ್ತೇವೆ ಎಂದರು.

ಜಗತ್ತಿನಲ್ಲಿ ಹಲವು ಯುದ್ಧ ನಡೆಸಿದರೂ, ಆಪರೇಷನ್ ಸಿಂಧೂರಕ್ಕೆ ಸಮವಲ್ಲ. ಯಾವುದೂ ಗುರಿ ಮುಟ್ಟಿಲ್ಲ. ಆದರೆ, ನಾಲ್ಕು ದಿನದಲ್ಲಿ ಭಾರತ ಹೊಡೆಯಬೇಕಾದ ಜಾಗಕ್ಕೆ ಹೊಡೆದು ತಾರ್ಕಿಕ ಅಂತ್ಯ ಕೊಟ್ಟಿದೆ. ಭಾರತದ ಸೈನ್ಯ ದೊಡ್ಡ ಮಾದರಿಯನ್ನು ಹಾಕಿಕೊಟ್ಟಿದೆ ಎಂದರು.

ಇದನ್ನೂ ಓದಿ: ತುರುವನೂರು ರಸ್ತೆಯ ನೂತನ ಬೆಸ್ಕಾಂ ಕಚೇರಿ | ಸಚಿವ ಡಿ.ಸುಧಾಕರ್ ಉದ್ಘಾಟನೆ

ಕಾರ್ಗಿಲ್ ಯುದ್ಧ ನಡೆದಾಗ ಎಲ್ಓಸಿ ದಾಟದೆ ಯುದ್ದ ಗೆಲ್ಲಲಾಗಿತ್ತು. ಆದರೆ, ಪಠಾಣ್ ಕೋಟ್ ಉರಿ ದಾಳಿ ನಂತರ ಎಲ್ಓಸಿ ದಾಟಿ ಉಗ್ರರ ಮೇಲೆ ದಾಳಿ ನಡೆಸಲಾಗಿತ್ತು. ಪಾಕಿಸ್ಥಾನ ಜೀವಂತ ಇರುವುದೇ ಭಾರತ ದ್ವೇಷ ಮಾಡಲು, ಪಾಕಿಸ್ಥಾನದ ಸೇನಾಧಿಕಾರಿ ಜಗತ್ತಿನ ಮುಸ್ಲೀಮರು ಭಾರತದ ವಿರುದ್ಧ ಇರಬೇಕು ಎನ್ನುತ್ತಾರೆ, ಆದರೆ, ಭಾರತೀಯ ಮುಸಲ್ಮಾನರು ಭಾರತದ ಜೊತೆಗೆ ಇದ್ದೇವೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದು ತಿಳಿಸಿದರು.

ಭಾರತ ಯಾರಿಗೂ ಹೆದರಿ ಯುದ್ಧ ನಿಲ್ಲಿಸಿಲ್ಲ. ಪಾಕಿಸ್ಥಾನದ ಡಿಜಿಎಂಓ ಭಾರತದ ಡಿಜಿಎಂಓ ಜೊತೆ ಮಾತುಕತೆ ಮಾಡಿ ತಮ್ಮ ಪರಿಸ್ಥಿತಿ ಹೇಳಿಕೊಂಡ ನಂತರ ಪೈರಿಂಗ್ ನಿಂತಿದೆ. ಯಾರ ಒತ್ತಡಕ್ಕೂ ಅಲ್ಲ. ಅಮೇರಿಕಾದ ಅಧ್ಯಕ್ಷರು ಸುಮ್ಮನೆ ಪೋನ್ ಮಾಡಿ ಮನವಿ ಮಾಡಿಲ್ಲ, ಭಾರತದ ಸೇನೆಯ ಸಾಮರ್ಥ್ಯ ಹಾಗೂ ಯುದ್ಧದ ಹೊಸ ಮಾದರಿ ಹಾಕಿದ ಕಾರಣಕ್ಕೆ ಮಾತುಕತೆ ನಡೆಸಿದ್ದಾರೆ ಎಂದರು.

ಇದನ್ನೂ ಓದಿ: ಅಡಿಕೆ ಧಾರಣೆ | ಮೇ.16 | ಯಾವ ಅಡಿಕೆಗೆ ಎಷ್ಟು ರೇಟ್

ಭಾರತ ಸೇನೆಯ ಸಾಮರ್ಥ್ಯ ಈಗ ಜಗತ್ತಿನೆದುರು ಅನಾವರಣ ಆಗಿದೆ. ಆ ಸೇನೆಯ ಜೊತೆಗೆ ಇಡೀ ದೇಶ ಇದೆ ಎನ್ನುವುದನ್ನು ಪ್ರತಿಬಿಂಬಿಸುವ ಕಾರಣಕ್ಕೆ ಈ ತಿರಂಗಾ ಯಾತ್ರೆ. ಈಗ ದೇಶದ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದು ಹೇಳಿದರು.

ನಿವೃತ್ತ ಯೋಧ, ಹವಾಲ್ದಾರ್‌ ಸೂರಯ್ಯ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ನಾನು ಭಾಗಿಯಾಗಿ ಗೆಲುವಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ. ಉಗ್ರರು ಪದೇ ಪದೇ ದಾಳಿ ನಡೆಸಿದಾಗ ಭಾರತ ತಿರುಗೇಟು‌ಕೊಟ್ಟಿದೆ. ಎರಡು ಬಾರಿ ನಡೆದ ಯುದ್ಧ, ಸರ್ಜಿಕಲ್ ಸ್ಟ್ರೈಕ್, ಪುಲ್ವಾಮ ದಾಳಿ ಪ್ರತಿಕಾರ, ಈಗ ನಡೆದ ಆಪರೇಷನ್ ಸಿಂಧೂರ ಯಶಸ್ಬಿಯಾಗಿ ನಡೆಸುವ ಮೂಲಕ ಭಾರತದ ಸೇನೆ ಶೌರ್ಯ ಪ್ರದರ್ಶಿಸಿದೆ ಎಂದರು.

ಇದನ್ನೂ ಓದಿ: ಚಿತ್ರದುರ್ಗಕ್ಕೆ ಮತ್ತೊಂದು ರೈಲು ಮಾರ್ಗ | ಮಲೆನಾಡಿನಿಂದ ಅರೆ ಮಲೆನಾಡು ಸಂಪರ್ಕ | 1825 ಕೋಟಿ ವೆಚ್ಚ

ಇನ್ನರ್‌ ವೀಲ್‌ ಕ್ಲಬ್‌ ಮಾಜಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮಣ್‌ ಮಾತನಾಡಿ, ಹಿಂದೂ ಸಂಸ್ಕೃತಿಯ ಪ್ರತೀಕ ಸಿಂಧೂರ. ಭಾರತೀಯ ಮಹಿಳೆಯರು ಇದಕ್ಕೆ ಮಹತ್ವ ಕೊಡುತ್ತಾರೆ. ಸಿಂಧೂರ ಅಳಿಸಿದವರಿಗೆ ಸರಿಯಾದ ಉತ್ತರ ಕೊಟ್ಟ ಭಾರತ ಕರ್ನಲ್ ಸೋಫಿಯಾ ಖುರೇಶಿ ಹಾಗೂ ಯೋಮಿಕಾ ಸಿಂಗ್ ಮೂಲಕ ಆಪರೇಷನ್ ಸಿಂಧೂರದ ಮಾಹಿತಿಯನ್ನು ಜಗತ್ತಿಗೆ ತಿಳಿಸುವ ಕೆಲಸ ಮಾಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಎಂ.ಚಂದ್ರಪ್ಪ, ಎಂಎಲ್ಸಿ ಕೆ.ಎಸ್‌.ನವೀನ್‌, ಮಾಜಿ ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಎಸ್‌.ಕೆ.ಬಸವರಾಜನ್‌, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್‌. ಆರೆಸ್ಸೆಸ್ಸ್‌ ಜಿಲ್ಲಾ ಕಾರ್ಯವಾಹ ರಾಮ್‌ಕಿರಣ್‌, ಬಿಜೆಪಿ ಮುಖಂಡರಾದ ಹನುಮಂತೇಗೌಡ, ಕುಮಾರಸ್ವಾಮಿ, ಸಂಪತ್, ಸುರೇಶ್, ರಾಮದಾಸ್, ಜಿ.ಎಚ್‌.ಮೋಹನ್‌ ಮತ್ತಿತರರಿದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:BJPChitradurgaChitradurga newsfeaturedIndian ArmyKannada Newskashmiroperation sindooraRSStiranga yatreyodha namanaಆರೆಸ್ಸೆಸ್ಸ್ಕನ್ನಡ ಸುದ್ದಿಕಾಶ್ಮೀರಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಲೇಟೆಸ್ಟ್ತಿರಂಗಾ ಯಾತ್ರೆಬಿಜೆಪಿಭಾರತೀಯ ಸೇನೆಯೋಧ ನಮನ
Share This Article
Facebook Email Print
Previous Article ಒಂದು ವಾರದೊಳಗೆ ಚಿತ್ರದುರ್ಗ-ದಾವಣಗೆರೆ ರಸ್ತೆಯ ರೈಲ್ವೆ ಗೇಟ್‍ಗೆ ಟೆಂಡರ್ | ಸಚಿವ ವಿ.ಸೋಮಣ್ಣ ಸೂಚನೆ
Next Article today bhavishya Astrolog: ದಿನ ಭವಿಷ್ಯ | ಮೇ 18 | ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು, ಆರೋಗ್ಯದಲ್ಲಿ ಜಾಗೃತಿ ವಹಿಸಿ
Leave a Comment

Leave a Reply Cancel reply

Your email address will not be published. Required fields are marked *

ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ | ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ | ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ 
ಮುಖ್ಯ ಸುದ್ದಿ
ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಮಾತನಾಡಿದರು
KDP ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಿ | ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ಮುಖ್ಯ ಸುದ್ದಿ
AICC ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಹುಟ್ಟುಹಬ್ಬ ಆಚರಣೆ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬ ಆಚರಣೆ 
ಮುಖ್ಯ ಸುದ್ದಿ
ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘಕ್ಕೆ ಜಿಲ್ಲಾಧ್ಯಕ್ಷರಾಗಿ ಡಾ.ಕೃಷ್ಣಪ್ಪ ಆಯ್ಕೆ
ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘಕ್ಕೆ ಜಿಲ್ಲಾಧ್ಯಕ್ಷರಾಗಿ ಡಾ.ಕೃಷ್ಣಪ್ಪ ಆಯ್ಕೆ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com

Loading Comments...

    Welcome Back!

    Sign in to your account

    Username or Email Address
    Password

    Lost your password?

    Not a member? Sign Up