
CHITRADURGA NEWS | 06 December 2025
ಹೊಳಲ್ಕೆರೆ: ರೈತರು ಅಡಿಕೆ ಬೆಳೆದು ಆರ್ಥಿಕವಾಗಿ ಬಲಶಾಲಿಗಳಾಗಬೇಕೆಂಬುದು ನನ್ನ ಆಸೆ, ಅದಕ್ಕಾಗಿ ಇನ್ನೂ ಎರಡು, ಮೂರು ತಿಂಗಳಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಭದ್ರಾ ಯೋಜನೆಯಿಂದ ನೀರು ತುಂಬಿಸುತ್ತೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.
ಇದನ್ನೂ ಓದಿ: ಸೈಬರ್ ವಂಚನೆ ದೂರುಗಳಿಗೆ 198 ಸಂಖ್ಯೆಗೆ ಕರೆ ಮಾಡಿ | ಬ್ರಜೇಂದ್ರ ಕುಮಾರ್
ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಹೊಸಕೆರೆ ಅಭಿವೃದ್ದಿ ಕಾಮಗಾರಿಗೆ ಶನಿವಾರ ಭೂಮಿ ಸಲ್ಲಿಸಿ ಮಾತನಾಡಿದರು.ಪಕ್ಕದ ಹಳ್ಳಿಯಲ್ಲಿ 24 ಕೋಟಿ ರೂ.ಗಳನ್ನು ಖರ್ಚು ಮಾಡಿ ವಿದ್ಯುತ್ ಪವರ್‍ಸ್ಟೇಷನ್ ಕಟ್ಟಿಸುತ್ತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆಯೆಂದು ನಾನು ಸುಮ್ಮನೆ ಕೂತಿಲ್ಲ. ಹೋರಾಟ ಮಾಡಿ ಅನುದಾನ ಮಂಜೂರು ಮಾಡಿಸಿಕೊಂಡು ಪ್ರತಿನಿತ್ಯವೂ ತಾಲ್ಲೂಕಿನಾದ್ಯಂತ ಒಂದಲ್ಲ ಒಂದು ಅಭಿವೃದ್ದಿ ಕಾಮಗಾರಿಗಳನ್ನು ಮಾಡಿಸುತ್ತಿದ್ದೇನೆ. ಅದಕ್ಕಾಗಿ ಇಚ್ಚಾಶಕ್ತಿ, ಬದ್ದತೆಯಿರಬೇಕೆಂದು ಹೇಳಿದರು.
ತಾಲ್ಲೂಕಿನಾದ್ಯಂತ 493 ಹಳ್ಳಿಗಳಲ್ಲಿ ಕೆರೆ ಕಟ್ಟೆ, ಚೆಕ್ ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಒಂದೆರಡು ವರ್ಷ ಮಳೆ ಬಾರದಿದ್ದರೆ, ಬೋರ್‍ವೆಲ್‍ಗಳು ಕೆಟ್ಟರೂ ರೈತರಿಗೆ ನೀರಿನ ಸಮಸ್ಯೆಯಿರುವುದಿಲ್ಲ. ಗಂಗಸಮುದ್ರ ಬಳಿ ದೊಡ್ಡ ಡ್ಯಾಂ ನಿರ್ಮಿಸಿದ್ದೇನೆ. ಅಲ್ಲಿಗೆ ನೀರು ತುಂಬಿಸಿ ಅಲ್ಲಿಂದ 37 ಕೆರೆಗಳಿಗೂ ನೀರು ಹರಿಸಲಾಗುವುದು.
ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡುತ್ತ ತಾಳಿಕಟ್ಟೆ ಗ್ರಾಮಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿರುವ ಶಾಸಕ ಡಾ.ಎಂ.ಚಂದ್ರಪ್ಪನವರ ಮೇಲೆ ಗ್ರಾಮಸ್ಥರು ಅಪಾರದಾದ ಪ್ರೀತಿ ಗೌರವವಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರ ಸಂಘ | ಕಾರ್ಯಕಾರಿ ಸಮಿತಿಯ ನಾಮನಿರ್ದೇಶಕ ಸ್ಥಾನಕ್ಕೆ ಡಿ.ಮಹೇಶ್ ಆಯ್ಕೆ
ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಹತ್ತು ಹಲವಾರು ಕೆಲಸಗಳನ್ನು ಮಾಡುತ್ತಿರುವ ಡಾ.ಎಂ.ಚಂದ್ರಪ್ಪನವರು ಮುಂದಿನ ಸಾರಿ ನಮ್ಮ ಗ್ರಾಮಕ್ಕೆ ಬಂದರೆ ಒಂದು ಸಾವಿರ ಮಹಿಳೆಯರು ಪೂರ್ಣಕುಂಭ ಹೊತ್ತು ಸ್ವಾಗತಿಸಬೇಕೆಂದು ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಗಂಗಾಧರ್, ಹೊಳಲ್ಕೆರೆ ಬಿಜೆಪಿ.ಮಂಡಲ ಅಧ್ಯಕ್ಷ ಕುಮಾರಣ್ಣ, ರೇವಣಯ್ಯ ಒಡೆಯರ್, ಗುರಯ್ಯ ಒಡೆಯರ್, ನುಲೇನೂರು ಶೇಖರ್, ಡಿ.ಚಂದ್ರಪ್ಪ, ನಾಗರಾಜಪ್ಪ, ಚಂದ್ರಮೌಳಿ, ಚಿಕ್ಕಪ್ಪ, ರುದ್ರಸ್ವಾಮಿ, ಕುಮಾರ್, ಆರ್.ಹಳ್ಳಪ್ಪ, ನಾಗಪ್ಪಗೋವಿಂದಪ್ಪ, ಚಂದ್ರಪ್ಪ, ರಾಮಮೂರ್ತಿ, ಮರಿಗೆಂಚಪ್ಪ, ಜಗದೀಶ್, ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡರುಗಳು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
