
CHITRADURGA NEWS | 26 SEPTEMBER 2024
ಚಿತ್ರದುರ್ಗ: ಇದೇ ಸೆ.28 ರಂದು ವಿಶ್ವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ನಡೆಯಲಿದ್ದು ಅದರ ಪ್ರಯುಕ್ತ ಇಂದು ಹಿಂದೂ ಪರಿಷತ್ ಭಜರಂಗದಳದಿಂದ ನಗರದಲ್ಲಿ ಬೈಕ್ ರ್ಯಾಲಿ(Bike Rally) ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: VA protest: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಆರಂಭ | ಕೆಲಸದ ಒತ್ತಡ ತಗ್ಗಿಸಲು ಆಗ್ರಹ | ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ
ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಲ್ಲಿ ಬೈಕ್ ರ್ಯಾಲಿಗೆ ಶಾಸಕ ಕೆ.ಸಿ.ವಿರೇಂದ್ರ, ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಉದ್ಘಾಟಿಸಿದರು.
ದಾರಿಯುದ್ದಕ್ಕು ಬೈಕ್ ರ್ಯಾಲಿಯಲ್ಲಿ ಕುಳಿತ್ತಿದ್ದ ಭಕ್ತಾಧಿಗಳು ಜೈ ಶ್ರೀರಾಮ್, ಜೈ ಜೈ ಶ್ರೀರಾಮ ಹಿಂದೂ ಮಹಾ ಗಣಪತಿಕ್ಕಿ ಜೈ ಎಂದು ಕೂಗುತ್ತಾ, ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದು ತೆಲೆಗೆ ಕೇಸರಿ ಪಟ್ಟಿಯನ್ನು ಕಟ್ಟಿಕೊಂಡು ಕೂರಳಿಗೆ ಕೇಸರಿ ಶಾಲನ್ನು ಹಾಕಿಕೊಂಡು ದಾರಿಯಲ್ಲಿ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.
ಬೈಕ್ ರ್ಯಾಲಿಯೂ ನಗರದ ಕನಕ ವೃತ್ತದಿಂದ ಪ್ರಾರಂಭವಾಗಿ ಸಂಗೋಳ್ಳಿರಾಯಣ್ಣ ವೃತ್ತ, ಬುರುಜನಹಟ್ಟಿ ವೃತ್ತ, ಆನೆ ಬಾಗಿಲು, ಚಿಕ್ಕಪೇಟೆ, ಏಕನಾಥೇಶ್ವರಿ ಪಾದಗುಡಿ, ಕರುವಿನ ಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ, ಜಟ್ ಪಟ್ ನಗರ, ಸ್ಟೇಡಿಯಂ ರಸ್ತೆ, ಬಿ.ಡಿ ರಸ್ತೆ, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂತ್ಯ ಗೊಳಿಸಲಾಯಿತು.
ಕ್ಲಿಕ್ ಮಾಡಿ ಓದಿ: Crime: ಪೊಲೀಸರ ಸೋಗಿನಲ್ಲಿ ಕಳ್ಳರು | ಚಿನ್ನದ ಸರ ಕದ್ದು ಎಸ್ಕೇಪ್
ಬೈಕ್ ರ್ಯಾಲಿ ಸಾಗಿದ ದಾರಿಯುದ್ದಕ್ಕೂ ಜನತೆ ಅಕ್ಕ-ಪಕ್ಕದಲ್ಲಿ ನಿಂತು ಬೈಕ್ ರ್ಯಾಲಿ ಹೋಗುತ್ತಿದ್ದ ದೃಶ್ಯವನ್ನು ಕಣ್ಣು ತುಂಬಿಕೊಂಡರು. ಮಹಿಳೆಯರು ಮಕ್ಕಳು ಎನ್ನದೆ ಆಬಾಲವೃದ್ದರಾಗಿ ದಾರಿಯ ಪಕ್ಕದಲ್ಲಿ ನಿಂತು ಇದನ್ನು ವಿಕ್ಷಣೆ ಮಾಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
