
CHITRADURGA NEWS | 26 SEPTEMBER 2024
ಚಿತ್ರದುರ್ಗ: ಪೊಲೀಸರ ಸೋಗಿನಲ್ಲಿ ಬಂದ ಕಳ್ಳರು ಚಿನ್ನದ ಸರ ಕದ್ದು ಎಸ್ಕೇಪ್ ಆಗಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುದಲ್ಲಿ ನಡೆದಿದೆ.
ಹೆಗ್ಗೆರೆ ಗ್ರಾಮದ ಸುವರ್ಣಮ್ಮ ಅವರು ಸರ ಕಳೆದುಕೊಂಡವರು. ಗ್ರಾಮದಲ್ಲಿ ಪ್ರತಿ ಬುಧವಾರ ನಡೆಯುವ ವಾರದ ಸಂತೆಯಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಈ ವೇಳೆ ಇಬ್ಬರು ಕಳ್ಳರು ಹೊಂಚುಹಾಕಿ ಗ್ರಾಮದ ವೆಂಗಳಾಪುರ ರಸ್ತೆಯ ಖಾಸಗಿ ಕ್ಲಿನಿಕ್ ಬಳಿ ನಡೆದು ಹೋಗುತ್ತಿದ್ದ ಮಹಿಳೆಯನ್ನು ಮಾತನಾಡಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್‌ಷಿಪ್ | ಸಂದೇಶ ಸುಳ್ಳು ಎಚ್ಚರ ವಹಿಸಿ
ಈ ವೇಳೆ ನಾವು ಪೊಲೀಸರು. ನೀವು ಸರವನ್ನು ಕಾಣುವ ಹಾಗೆ ಹಾಕಿಕೊಳ್ಳಬಾರದು. ತೆಗೆದು ಪರ್ಸ್‌ನಲ್ಲಿ ಹಾಕಿಕೊಳ್ಳಿ ಎಂದು ಸೂಚಿಸಿದರು. ಮಹಿಳೆಯು ತನ್ನ ಕೊರಳಲ್ಲಿದ್ದ ಸರವನ್ನು ತೆಗೆದು ಪರ್ಸ್‌ನಲ್ಲಿ ಹಾಕುತ್ತಿರುವಾಗ, ಮಧ್ಯಪ್ರವೇಶಿಸಿದ ಕಳ್ಳರು, ಅದನ್ನು ಕಾಗದದಲ್ಲಿ ಸುತ್ತಿ ಕೊಡುತ್ತೇವೆ ಎಂದು ಸಬೂಬು ಹೇಳುತ್ತಾ ಸರವನ್ನು ಪಡೆದಿದ್ದಾರೆ. ಮಹಿಳೆಯ ಗಮನ ಬೇರೆಡೆ ಸೆಳೆದು ಪೇಪರ್‌ನಲ್ಲಿ ಸಣ್ಣ ಕಲ್ಲುಗಳನ್ನು ಸುತ್ತಿ ಪರ್ಸ್‌ನಲ್ಲಿ ಇಟ್ಟು, ಪರಾರಿಯಾಗಿದ್ದಾರೆ.
ಮಹಿಳೆ ತನ್ನ ಪರ್ಸ್ ತೆಗೆದು ನೋಡಿದಾಗ ಚಿನ್ನದ ಸರದ ಬದಲಿಗೆ ಕಲ್ಲುಗಳಿರುವುದು ಗೊತ್ತಾಗಿದೆ. ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
