
CHITRADURGA NEWS | 03 AUGUST 2025
ಹಿರಿಯೂರು: ಹಳೆಯ ವಿದ್ಯಾರ್ಥಿಗಳ ಆಸಕ್ತಿಯಿಂದ ಹಿರಿಯೂರು ತಾಲೂಕಿನ ತಾಳವಟ್ಟಿ ಗ್ರಾಮದ ಶಾಲೆಗೆ ಹೊಸ ಕಟ್ಟಡದೊಂದಿಗೆ ಅನೇಕ ಹೊಸ ವ್ಯವಸ್ಥೆಗಳಿಗೆ ನಾಂದಿಯಾಗಿದೆ.
ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ

ಅಲ್ಲಲ್ಲಿ ನೆಲಕಚ್ಚಿದ್ದ ಗೋಡೆ, ಒಡೆದು ಹೋಗಿದ್ದ ಹಂಚುಗಳು, ಶೌಚಾಲಯ, ಕುಡಿಯುವ ನೀರಿನಂತಹ ಕನಿಷ್ಠ ಸೌಲಭ್ಯಗಳಿಲ್ಲದ, ಸುಣ್ಣ ಬಣ್ಣವನ್ನು ಕಾಣದೇ ಪ್ರಾಚೀನ ಪಳೆಯುಳಿಕೆಯಂತಿದ್ದ ಶಾಲಾ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ಎದ್ದುನಿಂತು ಮಕ್ಕಳನ್ನು ತನ್ನತ್ತ ಬಾ ಎಂದು ಕೈ ಬೀಸಿ ಕರೆಯುತ್ತಿದೆ.
ರೂ.1 ಕೊಟಿ ವೆಚ್ಚದಲ್ಲಿ ನಿರ್ಮಾಣಗೊಂಡು ವಿದ್ಯಾರ್ಥಿಗಳ ಜ್ಞಾನದಾಹ ನೀಗಿಸಲು ಸನ್ನದ್ದವಾಗಿರುವ ಈ ಸರ್ಕಾರಿ ಶಾಲೆ 1925ರಲ್ಲಿ ಆರಂಭವಾಗಿದ್ದು, ಶಾಲೆಯ ಶತಮನೋತ್ಸವ ಆಚರಿಸಲು ಮುಂದಾದ ಹಳೆಯ ವಿದ್ಯಾರ್ಥಿಗಳಿಗೆ ಶಾಲೆಯ ದುಸ್ಥಿತಿ ಕಂಡು ಮರುಕ ಉಂಟಾದ ಫಲವಾಗಿ ಹೊಸ ಕಟ್ಟಡ ತಲೆ ಎತ್ತಿದೆ.
ಶಾಲೆಯ ಶತಮಾನೋತ್ಸವ ಆಚರಿಸಬೇಕೆಂದರೆ ಶಾಲೆಗೆ ಹೊಸರೂಪ ನೀಡಲೇಬೇಕು ಎಂಬ ಆಲೋಚನೆ ಬಂದ ಪರಿಣಾಮ ಶಾಲೆಗೆ ಕಾಯಕಲ್ಪ ದೊರಕಿದೆ.
ಇದನ್ನೂ ಓದಿ: ವಯೋನಿವೃತ್ತಿ ಹೊಂದಿದ ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ್‍ಗೆ ಸನ್ಮಾನ
ಈ ಶಾಲೆಯಲ್ಲಿಯೇ ಕಲಿತು ಬದುಕಿನಲ್ಲಿ ನೆಲೆ ನಿಂತಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳಿಂದ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಶಾಸಕರ ಅನುದಾನದ ಅಡಿಯಲ್ಲಿ ನೀಡುವ ರೂ.25 ಲಕ್ಷಗಳ ನೆರವಿನಿಂದ 12 ಕೊಠಡಿ ನಿರ್ಮಿಸಲಾಗಿದೆ. ಆಧುನಿಕ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಉಪಕರಣಗಳನ್ನೂ ಖರೀದಿಸಿ ಒದಗಿಸಲಾಗಿದೆ ಎಂದು ಹಲೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಶಾಲೆಯಲ್ಲಿ ಇರುವ ಸೌಲಭ್ಯ :
ರೂ.25ಲಕ್ಷ ವೆಚ್ಚದಲ್ಲಿ ಆಧುನಿಕ ಅಡುಗೆ ಕೋಣೆ, ಹೈಟೆಕ್ ಶೌಚಾಲಯ, ಶುದ್ದ ಕುಡಿಯುವ ನೀರು ಪೂರೈಸಲು 40,000 ಲೀಟರ್ ಮಳೆ ನೀರು ಸಂಗ್ರಹಣಾ ಸಾಮರ್ಥ್ಯದ ತೊಟ್ಟಿ ನಿರ್ಮಾಣ, ನಿರಂತರ ವಿದ್ಯುತ್ ಪೂರೈಕೆಗೆ ಎರಡು ಯುಪಿಎಸ್ ಅಳವಡಿಕೆ, ಪ್ರತಿ ಕೊಠಡಿಗೆ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್ ವ್ಯವಸ್ಥೆ, ಶಾಲಾ ಆವರಣದಲ್ಲಿ ಹೈಮಾಸ್ಟ್ ದೀಪ, ಶಾಲಾ ಕಾಂಪೌ0ಡ್, ಸುತ್ತ ಸೌರ ವಿದ್ಯುತ್ ದೀಪಗಳ ಅಳವಡಿಕೆ, ಗುನಮಟ್ಟದ 40 ಕಬ್ಬಿನದ ಡೆಸ್ಕ್ ಗಳು, ಸ್ಮಾರ್ಟ್ ತರಗತಿ, 10 ಕಂಪ್ಯೂಟರ್ ಗಳಿರುವ ಲ್ಯಾಬ್, ಶಾಲೆಯ ಸುತ್ತು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, 5000 ಗ್ರಾಮ ಮತಗಳುಳ್ಳ ವಾಚನಾಲಯ ಸೇರಿ ಹಲವು ಸೌಲಭ್ಯ ಕಲ್ಪಿಸಲಾಗಿದೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ನಡೆಯುವುದರಿಂದಾಗುವ ಪ್ರಯೋಜನಗಳೇನು?
ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಸಲು ಸರ್ಕಾರ ಅನುಮತಿ ನೀಡಿದ್ದು ಖಾಸಗಿ ಶಾಲೆಗಳ ರೀತಿ ಉನ್ನತ ಶಿಕ್ಷಣ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಇದೇ ತಿಂಗಳ ಆಗಸ್ಟ್ 16ರಂದು ಶತಮನೋತ್ಸವ ಅಚರಣೆ ಉತ್ಸವಕ್ಕೆ ಸಿದ್ದವಾಗಿದ್ದು ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಶಿಕ್ಷಣ ಮಂತ್ರಿಗಳು ಹಾಗೂ ಇನ್ನಿತರ ಗಣ್ಯರು ಆಗಮಿಸುವರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
