
CHITRADURGA NEWS | 07 SEPTEMBER 2025
ಚಿತ್ರದುರ್ಗ: ನಗರದ ಆನೆ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಸೇವಾ ಗಣಪತಿಯ 68ನೇ ವರ್ಷಾಚಾರಣೆಯ ಕಾರ್ಯ ಕ್ರಮದಲ್ಲಿ ಗಣಪತಿಯ ಮೆರವಣಿಗೆ, ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ನಾರಾಯಣ ಗುರುಗಳ ಸಿದ್ದಾಂತಗಳು ಸರ್ವಕಾಲಿಕ ಮೌಲ್ಯ ಹೊಂದಿವೆ

ಕಳೆದ ಆ.27 ರಿಂದ ಪ್ರಾರಂಭವಾದ ವಿನಾಯಕ ಪ್ರತಿಷ್ಠಾಪನಾ ಕಾರ್ಯಕ್ರಮ 11 ದಿನಗಳ ಕಾಲ ಪ್ರತಿ ದಿನ ನಿರಂತರವಾಗಿ ಪೂಜೆ, ಅಭೀಷೇಕ ನಡೆದಿದ್ದು, ಇದರೊಂದಿಗೆ ಗಣಹೋಮ, ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮ, ಪ್ರತಿ ದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಸೆ.6ರ ಸಂಜೆ ಶ್ರೀ ಪ್ರಸನ್ನ ಸೇವಾ ಗಣಪತಿಯ ಮೆರವಣಿಗೆಯನ್ನು ಕೀರ್ತಿ ಆಸ್ಪತ್ರೆಯ ವೈದ್ಯರಾದ ಮಲ್ಲಿಕಾರ್ಜನ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರದ ಹೆಸರಾಂತ ಬ್ರಾಸ್ ಬ್ಯಾಂಡ್ ಆದ ಶಾರದ ಬ್ರಾಸ್ ಬ್ಯಾಂಡ್, ನ್ಯಾಸಿಕ್‍ನ ಡೋಲು, ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ವಿನಾಯಕ ಮೆರವಣಿಗೆಯನ್ನು ನಡೆಸಲಾಯಿತು.
ರಾತ್ರಿ 10.30ಕ್ಕೆ ಚಂದ್ರವಳ್ಳಿಯಲ್ಲಿ ನಿರ್ಮಾಣ ಮಾಡಳಾದ ನೀರಿನ ತೊಟ್ಟಿಯಲ್ಲಿ ಕ್ರೇನ್ ಮೂಲಕ ಶ್ರೀ ಪ್ರಸನ್ನ ಸೇವಾ ಗಣಪತಿಯನ್ನೂ ವಿಸರ್ಜನೆ ಮಾಡಲಾಯಿತು.
ಇದನ್ನೂ ಓದಿ: ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರಿಗೆ ಸೇರಿದ ಕಾರು ಅಪಘಾತ
ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಸೇವಾ ಗಣಪತಿಯ ಕಾರ್ಯಧ್ಯಕ್ಷರಾದ ಗೋಪಾಲರಾವ್ ಜಾಧವ್, ಉಪಾಧ್ಯಕ್ಷರಾದ ಎಲ್.ಎನ್.ರಾಜಕುಮಾರ, ಜಿ.ಎಂ. ನಾಗರಾಜ್ ಬೇದ್ರೇ, ಪ್ರಧಾನ ಕಾರ್ಯದರ್ಶಿ ಪಿ.ಎಲ್.ಶಿವಕುಮಾರ್, ಖಂಜಾಚಿ ಆನಂದ್, ಸಹ
ಕಾರ್ಯದರ್ಶಿ ಶ್ಯಾಂ ಪ್ರಸಾದ್, ನಾರಾಯಣರಾವ್, ಯಶವಂತ, ವಿದ್ಯಾಧರ್, ರಮೇಶ್, ಕಾರ್ತಿಕ ಕಠಾರೆ ಸೇರಿದಂತೆ ಇತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
