
CHITRADURGA NEWS | 28 APRIL 2026
ಚಿತ್ರದುರ್ಗ: ಅಕ್ಕ ಮಹಾದೇವಿ ಅಂದು ಪ್ರಸ್ತುತ ಪಡಿಸಿದ ವಚನಗಳು ಇಂದಿಗೂ ಸಮಾಜಕ್ಕೆ ಅಗತ್ಯವಾಗಿವೆ. ಅದರ ಸಾರವನ್ನು ತಿಳಿದುಕೊಂಡವರು ಬದುಕಿನಲ್ಲಿ ಯಶಸು ಕಾಣಲು ಸಾಧ್ಯ ಎಂದು ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ ಮಾತಾಜಿ ತಿಳಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 27 ಏಪ್ರಿಲ್ | ಇಂದಿನ ಮಾರುಕಟ್ಟೆ ವಿವರ
ನಗರದ ಶ್ರೀ ಗಾನಯೋಗಿ ಸಂಗೀತ ಬಳಗದಿಂದ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತ್ಯೋತ್ಸವ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಶಿವ ಪಥವನ್ನು ಅರಿಯಲು ಗುರುವು ಮುಖ್ಯವಾಗಿದ್ದಾನೆ. ಶ್ರದ್ದಾ, ಭಕ್ತಿ, ನಿಷ್ಠೆ, ಆರಿವು, ಅನುಭವ ಸಂಗಮವನ್ನು ಹೊಂದಿದೆ. ಗುರುವಿನ ಮಹತ್ವವನ್ನು ಶರಣರು ವಚನದಲ್ಲಿ ತಿಳಿಸಿದ್ದಾರೆ. ಮಾಯೆ ಅಜ್ಞಾನದಿಂದ ಗುರು ಎಲ್ಲರನ್ನು ಕಾಪಾಡಿದ್ದಾನೆ. ಜ್ಞಾನದಿಂದ ಶಿವ ಪಥವನ್ನು ಅರಿಯಲು ಸಾಧ್ಯವಿದೆ. ಎಲ್ಲರಿಗೂ ಗುರವಿನ ಕರುಣೆ ಅಗತ್ಯವಾಗಿದೆ ಎಂದರು.
ಅಕ್ಕಮಹಾದೇವಿಯ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ವಚನಗಳನ್ನು ಕಲಿಯುವುದರಿಂದ ಮನಃ ಪರಿವರ್ತನೆಯಾಗುತ್ತದೆ. ಅಕ್ಕನ ಜ್ಞಾನ, ಅರಿವು, ಆಚಾರ ಇಂದಿಗೂ ಅಗತ್ಯವಾಗಿವೆ. ಎಲ್ಲರ ಮನೆಗಳಲ್ಲಿ ಪ್ರತಿ ದಿನ ವಚನಗಳ ಗಾಯನ ಮಾಡುವಂತ ಕಾರ್ಯವಾಗಬೇಕು. ಮಕ್ಕಳಿಗೆ ವಚನಗಳ ಮಹತ್ವ ತಿಳಿಸಿಕೊಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಬೀಜ, ಗೊಬ್ಬರ, ಔಷಧ ಮಾರಾಟಗಾರರಿಂದ ಪ್ರತಿಭಟನೆ
ನಿವೃತ್ತ ಉಪನ್ಯಾಸಕಿ ನೀಲಮ್ಮ ಬಸಯ್ಯ ಅವರು ಅಕ್ಕಮಹಾದೇವಿ ಜೀವನ ದರ್ಶನದ ಬಗ್ಗೆ ಉಪನ್ಯಾಸದಲ್ಲಿ, ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜನನ್ನು ತನ್ನ ಗಂಡನನ್ನಾಗಿ ಮಾಡಿಕೊಂಡು ಆತನನ್ನು ಹುಡುಕುತ್ತಾ ದೇಶ ಸಂಚಾರ ಮಾಡುತ್ತಾ ವಚನ ರಚನೆ ಮಾಡುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ.
12ನೇ ಶತಮಾನದಲ್ಲಿ ಕೇವಲ 30 ವರ್ಷ ಮಾತ್ರ ಬದುಕಿದ ಅಕ್ಕ ಮಹಾದೇವಿ ಜೀವನ ಪೂರ್ಣವಾಗಿ ಮಾಡುವಂತ ಸಮಾಜ ಸುಧಾರಣೆಯ ಕೆಲಸವನ್ನು ಮಾಡಿದ್ದಾರೆ. ಮಹಿಳೆಯ ಬದುಕಿಗೆ ದಾರಿ ದೀಪವಾಗಿದ್ದಾರೆ ಎಂದು ಸ್ಮರಿಸಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಇಂದು ಓದುವ ಸಂಸ್ಕøತಿ ಕಡಿಮೆಯಾಗುತ್ತಿದೆ. ತೊಟಪ್ಪ ಉತ್ತುಂಗಿ ಅವರು ಮಹಿಳೆಯರಿಗೆ ವಚನಗಳನ್ನು ಹೇಳಿ ಕೊಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಇದೇ ವೇಳೆ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಅಂಜನಾ ನೃತ್ಯ ಕಲಾ ಕೇಂದ್ರದ ವಿದ್ವಾನ್ ಸಿ.ಆರ್.ಶಿವಪ್ರಕಾಶ್, ಚಿನ್ಮೂಲಾದ್ರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕಿ ದಯಾ ಪುತ್ತೂರ್ಕರ್, ಡಾ.ಲತಾ ರಮೇಶ್, ಸಂಗೀತ ಶಿಕ್ಷಕಿ ಕೋಕಿಲ ರುದ್ರಮೂರ್ತಿ ಹಾಗೂ ಗಾಯಕಿ ಶಶಿಕಲಾ ಬಸವರಾಜ್‍ರ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 27 | ಮೆಕ್ಕೆಜೋಳ ರೇಟ್…
ಯೋಗಗುರು ಚಿನ್ಮಯಾನಂದ, ಶಾರದಾ ಬ್ರಾಸ್ ಬ್ಯಾಂಡ್‍ನ ಎಸ್.ವಿ. ಗುರುಮೂರ್ತಿ, ಶಿಕ್ಷಕಿ ಶೋಭಾ ಮಲ್ಲಿಕಾರ್ಜುನ್, ಗಾನಯೋಗಿ ಸಂಗೀತ ಬಳಗದ ಖಜಾಂಚಿ, ಸುಮಾ ರಾಜಶೇಖರ್, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಸಂಗೀತ ಬಳಗದ ಗೌರವಾಧ್ಯಕ್ಷ ಬಸವರಾಜ ಕತ್ತಿ, ಅಧ್ಯಕ್ಷ ತೋಟಪ್ಪ ಉತ್ತಂಗಿ, ಕಾರ್ಯದರ್ಶಿ ಎಸ್.ಸಿ.ವರದ ಶಂಕರ್, ಜ್ಞಾನಮೂರ್ತಿ, ನಾಗರಾಜ್ ಸಗಂ, ಶಂಕರಪ್ಪ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

