ಚಿತ್ರದುರ್ಗ ನ್ಯೂಸ್.ಕಾಂ
ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಜ್ಯದ ಎಲ್ಲೆಡೆ ಮಾದಿಗ ಮುನ್ನೆಡೆ ‘ಮಾದಿಗರ ಆತ್ಮ ಗೌರವ ಸಮಾವೇಶ’ದ ಉದ್ಘಾಟನೆಗೆ ಸೋಮವಾರ ಮಾಜಿ ಸಚಿವ ಗೋವಿಂದ ಕಾರಜೋಳ ಆಗಮಿಸಿದ್ದರು. ಸಮಾವೇಶ ಸ್ಥಳಕ್ಕೆ ತೆರಳುವ ಮುನ್ನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿ ವೇಳೆ ಕೆಲವರು ಏಕಾಏಕಿ ಸಭಾಂಗಣಕ್ಕೆ ನುಗ್ಗಿ ಗಲಾಟೆ ನಡೆಸಿದ ಪ್ರಸಂಗ ನಡೆಯಿತು.
ಇದನ್ನೂ ಓದಿ: ಪ್ರವಾಸಿ ಮಂದಿರದಲ್ಲಿ ಇಸ್ಪೀಟ್ ಆಡುತ್ತಿದ್ದ 14 ಮಂದಿ ಬಂಧನ
ನೀವು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ದಲಿತರಿಗೆ ಅನ್ಯಾಯ ಆಗಿದೆ ಎಂದು ಕಿಡಿಕಾರಿ ಆಕ್ರೋಶ ಹೊರ ಹಾಕಿದರು. ದಲಿತರಿಗೆ ಸಾಲ, ಸಬ್ಸಿಡಿ ನೀಡುವ ಯೋಜನೆಯಲ್ಲಿ ಕಡಿತವಾಗಿದೆ ಎಂದು ಗೋವಿಂದ ಕಾರಜೋಳ ಜತೆ ದಲಿತ ಮುಖಂಡ ಹನುಮಂತಪ್ಪ ದುರ್ಗಾ ಮತ್ತಿತರರು ವಾಗ್ವಾದ ನಡೆಸಿದರು.
ಸುದ್ದಿಗೋಷ್ಠಿ ವೇಳೆ ಏಕಾಏಕಿ ನುಗ್ಗಿ ಗುಂಡಾಗಿರಿ ಮಾಡುವುದು ಸರಿಯಲ್ಲ. ನೀವು ಮೊದಲು ಹೊರಗೆ ನಡೆಯಿರಿ. ನಲವತ್ತು ವರ್ಷದ ರಾಜಕೀಯದಲ್ಲಿ ನಾನು ಈ ರೀತಿ ನೋಡಿಲ್ಲ. ಇದು ಗುಂಡಾಗಿರಿ, ಗುಂಡಾರಾಜ್ಯ ಆಗಿದೆ ಎಂದು ಕಾರಜೋಳ ಕಿಡಿಕಾರಿದರು.
ಇದನ್ನೂ ಓದಿ: ಜಂಗಮ ಸಮಾಜ ಆಲದ ಮರ ಇದ್ದಂತೆ ; ಕರಿವೃಷಭದೇಶೀಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಸಲಹೆ
ಕೂಡಲೇ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಗಮನಹರಿಸಬೇಕು. ಗಲಾಟೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಪೂರ್ವವಲಯ ಐಜಿಪಿ ತ್ಯಾಗರಾಜ್‌ಗೆ ಕರೆ ಮಾಡಿ, ಸುದ್ದಿಗೋಷ್ಠಿ ವೇಳೆ ಗುಂಡಾಗಳು ನುಗ್ಗಿ ದಾಂಧಲೆ ಮಾಡಿದ್ದಾರೆ. ಕೂಡಲೇ ಇವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂರುತ್ತೇನೆ ಎಂದು ತಿಳಿಸಿದರು.
ಪ್ರವಾಸಿ ಮಂದಿರಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ನಗರಠಾಣೆ ಸಿಪಿಐ ತಿಪ್ಪೇಸ್ವಾಮಿ ಆಗಮಿಸಿ ಮಾಹಿತಿ ಪಡೆದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
