ಮುಖ್ಯ ಸುದ್ದಿ
ನಾಲ್ಕನೇ ಸುತ್ತಿನಲ್ಲೂ ಬಿಜೆಪಿ ಭರ್ಜರಿ ಓಟ | ಹಿನ್ನಡೆ ಸಾಧಿಸಿದ ಕಾಂಗ್ರೆಸ್

CHITRADURGA NEWS | 04 JUNE 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಮೂರನೇ ಸುತ್ತಿನಲ್ಲಿ ಬಿಜೆಪಿ 9793 ಮತಗಳ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 1,37,830 ಮತಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 1,28.037 ಮತ ಪಡೆದಿದ್ದಾರೆ.
ಬಿಜೆಪಿಯ ಗೋವಿಂದ ಕಾರಜೋಳ, ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ ಸೇರಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯ ನಡುವೆ ನೇರ ಹಣಾಹಣಿ ನಡೆದಿದ್ದು, ವಿಜಯದ ಮಾಲೆ ಯಾರ ಕೊರಳನ್ನು ಅಲಂಕರಿಸಲಿದೆ ಎಂಬ ಕುತೂಹಲ ಮೂಡಿದೆ.
ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಚಂದ್ರಪ್ಪ, ಬಳಿಕ ಎರಡು, ಮೂರು, ನಾಲ್ಲನೇ ಸುತ್ತಿನಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 9793 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
ಅಶೋಕ ಚರ್ಕವರ್ತಿ-ಬಿ.ಎಸ್.ಪಿ-1598, ನರಸಿಂಹರಾಜು.ಸಿ.ಎನ್- ಕೆ.ಆರ್.ಪಿ-1093, ರಮೇಶ್ ನಾಯ್ಕ್.ಟಿ-ಪ್ರಜಾಕೀಯ-469, ಬಿ.ಟಿ.ರಾಮಸುಬ್ಬಯ್ಯಾ- ಐ.ಎಂ.ಪಿ.-156, ಶಬರೀಶ್- ಕೆ.ಎಸ್.ಪಿ.-227, ಸುಜಾತ.ಡಿ- ಎಸ್.ಯು.ಸಿ.ಐ(ಸಿ)-241, ಅಮೃತ್ ರಾಜ-ಪಕ್ಷತೇರ-161, ಗಣೇಶ್-ಪಕ್ಷತೇರ-244, ತುಳಸಿ .ಹೆಚ್-ಪಕ್ಷತೇರ-233, ಡಾ.ಎಂ.ಪಿ.ದಾರಕೇಶ್ವರಯ್ಯ-ಪಕ್ಷತೇರ-221, ಕೆ.ನರಸಿಂಹಮೂರ್ತಿ-ಪಕ್ಷತೇರ-309, ನಾಗರಾಜಪ್ಪ-ಪಕ್ಷತೇರ-365, ಭೂತರಾಜ.ವಿ.ಎಸ್-ಪಕ್ಷತೇರ-493, ಮಂಜುನಾಥ ಸ್ವಾಮಿ.ಟಿ-ಪಕ್ಷತೇರ-615, ರಘುಕುಮಾರ್.ಎಸ್-ಪಕ್ಷತೇರ-538, ಬಿ.ವೆಂಕಟೇಶ ಶಿಲ್ಪಿ-ಪಕ್ಷತೇರ-946, ಶ್ರೀನಿವಾಸಬಾಬು ಪಾವಗಡ-ಪಕ್ಷತೇರ-1082, ಸುಧಾಕರ್.ಆರ್-ಪಕ್ಷತೇರ-257, ನೋಟಾ-554 ಪಡೆದಿದ್ದಾರೆ.

ಮಧ್ಯಾಹ್ನ 12.30ರ ಹೊತ್ತಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಏ.26ರಂದು ಮತದಾನ ನಡೆದಿದ್ದು, 39 ದಿನಗಳ ಸುದೀರ್ಘ ಕುತೂಹಲಕ್ಕೆ ತೆರೆಬೀಳಲಿದೆ.
