Connect with us

    ಬಿತ್ತನೆ ಬೀಜ ವಿತರಣೆಗೆ 13 ಹೊಸ ಕೇಂದ್ರಗಳ ಸ್ಥಾಪನೆ | ಜಿಲ್ಲೆಯಲ್ಲಿದೆ 38 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ

    ಮುಖ್ಯ ಸುದ್ದಿ

    ಬಿತ್ತನೆ ಬೀಜ ವಿತರಣೆಗೆ 13 ಹೊಸ ಕೇಂದ್ರಗಳ ಸ್ಥಾಪನೆ | ಜಿಲ್ಲೆಯಲ್ಲಿದೆ 38 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 25 MAY 2024

    ಚಿತ್ರದುರ್ಗ: 2024-25 ನೇ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಜಿಲ್ಲೆಯಲ್ಲಿ ಒಟ್ಟು 31810 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಸೂಕ್ತ ವಿತರಣೆಗಾಗಿ ಹೋಬಳಿ ಮಟ್ಟದ 22 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

    ಇದನ್ನೂ ಓದಿ: ಉಚ್ಚಂಗಿ ಯಲ್ಲಮ್ಮ ದೇವಿಯ ವೈಭವದ ಮೆರವಣಿಗೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ

    ಇದರೊಂದಿಗೆ ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆ, ಪರಶುರಾಂಪುರ, ನಾಯಕನಹಟ್ಟಿ, ದೊಡ್ಡಉಳ್ಳಾರ್ತಿ, ದೇವರಡ್ಡಿಹಳ್ಳಿ, ತಳಕು ಹಾಗೂ ರೇಣುಕಾಪುರದ ಎಫ್‌ಪಿಓ, ಹಿರಿಯೂರು ತಾಲ್ಲೂಕಿನ ಯರಬಳ್ಳಿ, ಅಬ್ಬಿನಹೊಳೆ ಮತ್ತು ಧರ್ಮಪುರ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಮತ್ತು ತಾಲ್ಲೂಕಿನ ಒಂದು ಎಫ್‌ಪಿಓ ಮತ್ತು ಒಂದು ಕೆಓಎಫ್‌ನ ವಿತರಣಾ ಕೇಂದ್ರ ಸೇರಿದಂತೆ ಒಟ್ಟು 13 ಹೆಚ್ಚುವರಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.

    ಇದನ್ನೂ ಓದಿ: ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ

    ಜಿಲ್ಲೆಯಲ್ಲಿ 32526 ಮೆ.ಟನ್‌ನಷ್ಟು ವಿವಿಧ ಗ್ರೇಡ್‌ನ ರಸಗೊಬ್ಬರ ದಾಸ್ತಾನಿದೆ. ರೀತಿಯ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇಲ್ಲ ರೈತರು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರು ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top