
CHITRADURGA NEWS | 03 SEPTEMBER 2025
ಚಿತ್ರದುರ್ಗ: ಯಾರಾದರೂ ಮರಣ ಹೊಂದಿದಾಗ ಕಣ್ಣುಗಳನ್ನ ದಾನ ಮಾಡಿದರೆ ಅಂದರ ಬಾಳಿಗೆ ಬೆಳಕಾಗಬಹುದೆಂದು ಬಸವೇಶ್ವರ ಮೆಡಿಕಲ್ ಕಾಲೇಜಿನ ಡಾ.ಅಶ್ವಿನಿ ತಿಳಿಸಿದರು.
ಇದನ್ನೂ ಓದಿ: SEP, TSP ಅನುದಾನದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಿ | ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಒತ್ತಾಯ

ಎಸ್.ಜೆ.ಎಂ.ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ನಲವತ್ತನೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಸಪ್ತಾಹ ಉದ್ಗಾಟಿಸಿ ಮಾತನಾಡಿದರು.
ಮೃತ ವ್ಯಕ್ತಿಯನ್ನು ಹೂಳುವ ಇಲ್ಲವೇ ಸುಡುವ ಮುನ್ನ ಕಣ್ಣುಗಳನ್ನು ದಾನ ಮಾಡಿದರೆ ಅಂಧರ ಬಾಳಿಗೆ ದೃಷ್ಠಿ ನೀಡಿದಂತಾಗುತ್ತದೆ. ಇದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಉದ್ದೇಶ ಎಂದರು.
ಬಸವೇಶ್ವರ ಪುನರ್ ಜ್ಯೋತಿ ಐ.ಬ್ಯಾಂಕ್ ಅಧ್ಯಕ್ಷರಾದ ಎಸ್.ವೀರೇಶ್ ಮಾತನಾಡಿ, ಕಣ್ಣು ಕಸಿ ಮಾಡುವ ಶಸ್ತ್ರ ಚಿಕಿತ್ಸೆ ಈಗ ಆರಂಭವಾಗಿದೆ. ಇದರ ಪ್ರಯೋಜನ ಪಡೆದುಕೊಂಡು ದೃಷ್ಠಿಹೀನರಿಗೆ ಬೆಳಕು ನೀಡುವಂತೆ ಮನವಿ ಮಾಡಿದರು.
ರೊಟೇರಿಯನ್ ಕನಕರಾಜ್ ಮಾತನಾಡಿ, ರೋಟರಿ ಕ್ಲಬ್ ಚಿತ್ರದುರ್ಗದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಿದ್ದು, ಕಡಿಮೆ ದರದಲ್ಲಿ ಹಾಗೂ ಬಡವರಿಗೆ ಉಚಿತವಾಗಿ ಕಲ್ಪಿಸಲಾಗುವುದು ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 03 | ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ರೋಟರಿ ಕ್ಲಬ್ ಸದಸ್ಯ ಎಸ್.ವಿ.ಗುರುಮೂರ್ತಿ ಮಾತನಾಡಿ, ರೋಟರಿ ಕ್ಲಬ್ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಮೊದಲಿನಿಂದಲೂ ಜನಸಾಮಾನ್ಯರಿಗೆ ನೀಡುತ್ತ ಬರುತ್ತಿದೆ. ಮೃತ ವ್ಯಕ್ತಿಯ ಕಣ್ಣನ್ನು ಅಂಧರಿಗೆ ದಾನ ಮಾಡಿದರೆ ಅದಕ್ಕಿಂತಲೂ ಪುಣ್ಯದ ಕೆಲಸ ಬೇರೊಂದಿಲ್ಲ ಎಂದು ನುಡಿದರು.
ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ದಿನೇಶ್ ಮಾತನಾಡಿದರು.
ರೋಟರಿ ಕ್ಲಬ್‍ನ ಟಿ.ವೀರಭದ್ರಸ್ವಾಮಿ, ಎಸ್.ಜೆ.ಎಂ.ಕಾನೂನು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಸುಮನ ಎಸ್.ಅಂಗಡಿ, ಡಾ.ಮಧುಸೂಧನರೆಡ್ಡಿ, ಗಾಯತ್ರಿ ಶಿವರಾಂ ಇವರುಗಳು ವೇದಿಕೆಯಲ್ಲಿದ್ದರು. ಉಮಾದೇವಿ ಪ್ರಾರ್ಥಿಸಿದರು. ಹರೀಶ್ ಸ್ವಾಗತಿಸಿದರು. ರೊ.ದಿಲ್‍ಶಾದ್ ಉನ್ನೀಸ ವಂದಿಸಿದರು. ಮಾಳಗಿ ಪ್ರಮೋದ್ ನಿರೂಪಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
