ಲೋಕಸಮರ 2024
ಲೋಕಸಭೆ ಚುನಾವಣೆ | ಮತ ಚಲಾಯಿಸಿದ ಡಿಸಿ, ಜಿಪಂ ಸಿಇಓ

CHITRADURGA NEWS | 21 APRIL 2024
ಚಿತ್ರದುರ್ಗ: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಮೊದಲೇ ಅಂಚೆ ಮತದಾನ ಮಾಡುವ ಅವಕಾಶ ಕಲ್ಪಿಸಿದ್ದು, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ಭಾನುವಾರ ಮತದಾನ ಮಾಡಿದರು.
ಇದನ್ನೂ ಓದಿ: ಕಾಂಗ್ರೆಸ್ ನಾಯಕಿ ಆಗಮನಕ್ಕೆ ಭರ್ಜರಿ ತಯಾರಿ | ಸ್ಥಳ ಪರಿಶೀಲಿಸಿದ ಮಾಜಿ ಸಚಿವ ಹೆಚ್. ಆಂಜನೇಯ

ಚುನಾವಣೆ ಕರ್ತವ್ಯದ ಕಾರಣಕ್ಕೆ ಮತದಾನಕ್ಕೆ ಗೈರು ಹಾಜರಾಗಿ ಮತದಾನ ಮಾಡದಂತೆ ಆಗಬಾರದು ಎನ್ನುವ ಕಾರಣಕ್ಕೆ ವಿವಿಧ ಕರ್ತವ್ಯದಲ್ಲಿ, ಅಗತ್ಯ ಸೇವೆ ಸಲ್ಲಿಸುವ ಸಿಬ್ಬಂದಿಗಳು ನಗರದ ತಹಶೀಲ್ದಾರ್ ಕಚೇರಿಯಲ್ಲಿ ಮತದಾನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಭೀಮಸಮುದ್ರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳ
ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗಿರುವ ವಿವಿಧ ಕ್ಷೇತ್ರಗಳ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಮತದಾನಕ್ಕೆ ವಿಶೇಷ ಕಲ್ಪಿಸಿದೆ.
ಈಗಾಗಲೇ ಆರೋಗ್ಯ ಇಲಾಖೆ, KSRTC, ಪೊಲೀಸ್ ಇಲಾಖೆ, ಆಕಾಶವಾಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪತ್ರಕರ್ತರು ಸೇರಿದಂತೆ ವಿವಿಧ ವೃತ್ತಿಪರರು ಮತದಾನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೊಳಾಳು ಕೆಂಚಾವಧೂತರ ಹಂಪೆ ಹುಣ್ಣಿಮೆ ಮಹೋತ್ಸವ
ಅಗತ್ಯ ಸೇವೆಗಳ ನೌಕರರು ಮತ ಚಲಾಯಿಸಲು ಏಪ್ರಿಲ್ 21 ರವರೆಗೆ ಕಾಲಾವಕಾಶ ಕಲ್ಪಿಸಿದ್ದು, ಇಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಸಿಇಓ ಎಸ್.ಜೆ.ಸೋಮಶೇಖರ್ ಮತದಾನ ಮಾಡಿ ಸೆಲ್ಫಿ ಫ್ರೇಮ್‍ನಲ್ಲಿ ಪೋಟೋಗೆ ಪೋಸ್ ಕೊಟ್ಟರು.
