CHITRADURGA NEWS | 15 MARCH 2025
ಚಿತ್ರದುರ್ಗ: ಕೋಟೆನಾಡಿನ ಇತಿಹಾಸ ಪ್ರಸಿದ್ಧವಾದ ಚಂದ್ರವಳ್ಳಿಯ ಕೆರೆಯ ಪರಿಸರದಲ್ಲಿ ನರ್ತಕಿಯ ಶಿಲೆ ಪತ್ತೆಯಾಗಿದೆ.
Also Read: ನಾಳೆ ವಿದ್ಯುತ್ ವ್ಯತ್ಯಯ | ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಕರೆಂಟ್ ಇರಲ್ಲ..
ನಿವೃತ್ತ ಎಂಜಿನಿಯರ್ ಚಂದ್ರಶೇಖರಪ್ಪ ಗುಂಡೇರಿ ಅವರು ವಾಯುವಿಹಾರಕ್ಕಾಗಿ ಚಂದ್ರವಳ್ಳಿ ಪ್ರದೇಶಕ್ಕೆ ಹೋದಾಗ ಒಡ್ಡಿನ ಬಳಿ ಮನುಷ್ಯ ಸಂಚಾರವಿಲ್ಲದ ಜಾಗದಲ್ಲಿ, ರೂಢಿಯಂತೆ ಇವರು ಅಲ್ಲಿ ಬಿದ್ದಿದ್ದ ಅನಪೇಕ್ಷಿತ ವಸ್ತುಗಳನ್ನು ತೆಗೆದು ಆ ಜಾಗವನ್ನು ಸ್ವಚ್ಛಗೊಳಿಸುತ್ತಿದ್ದಾಗ ಪ್ರತಿಮೆ ದೊರಕಿದೆ.
ಪ್ರತಿಮೆ ಬಗ್ಗೆ ಶಾಸನ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರ ಗಮನಕ್ಕೆ ತಂದಾಗ ಅದನ್ನು ಅವರು ಪರಿಶೀಲಿಸಿ ಅದು ವಿಜಯನಗರ ಕಾಲದ ಒಂದು ಅಪರೂಪದ ಪ್ರತಿಮೆ ಎಂದು ಗುರುತಿಸಿ ಮುರುಘಾ ಶ್ರೀ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರ ಮಾಡಿದ್ದಾರೆ.
ಮೂಲತಃ ಈ ಪ್ರತಿಮೆ ಎಲ್ಲಿಯದು ಎಂದು ತಿಳಿಯದು. ನರ್ತಕಿಯ ಪ್ರತಿಮೆ ಎನ್ನಬಹುದಾದ ಇದು ಬಹಳ ಸುಂದರವಾಗಿದೆ. ಎಡಗೈ ಭಗ್ನವಾಗಿದ್ದು, ಆ ಭಗ್ನವಾದ ಕೈ ಅದರ ಜೊತೆಯಲ್ಲಿ ಲಭ್ಯವಾಗಿದ್ದು ಅದನ್ನು ಮುಂದೆ ಜೋಡಿಸಬಹುದು ಎಂದು ಮುರುಘಾ ಶ್ರೀ ವಸ್ತು ಸಂಗ್ರಹಾಲಯ ಅಧಿಕಾರಿ ಶಂಕರ ಅಥಣಿಯವರು ತಿಳಿಸಿದ್ದಾರೆ.
Also Read: ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ..!!?
ಈ ಸ್ತುತ್ಯ ಕಾರ್ಯಕ್ಕಾಗಿ ಶ್ರೀ ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳು, ಡಾ.ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್ ಅವರುಗಳು ಈ ಕಾರ್ಯದಲ್ಲಿ ಭಾಗಿಯಾದ ಎಲ್ಲರನ್ನು ಮತ್ತು ವಿಶೇಷವಾಗಿ ಚಂದ್ರಶೇಖರಪ್ಪ ಗುಂಡೇರಿ ಅವರನ್ನು ಅಭಿನಂದಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
