CHITRADURGA NEWS | 22 JANUARY 2026
ಚಿತ್ರದುರ್ಗ: ಚಿತ್ರದುರ್ಗದ ಖ್ಯಾತ ನೃತ್ಯ ಕಲಾವಿದೆ ಶ್ವೇತಾ ಭಟ್ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ‘ಐಬಿಆರ್ ಅಚೀವರ್’ ಗೌರವ ಲಭಿಸಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಪ್ರತಿಷ್ಠಿತ ‘ಐಬಿಆರ್ ಅಚೀವರ್ (IBR Achiever)’ ಬಿರುದು ಲಭಿಸಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 22 | ಹತ್ತಿ ರೇಟ್ ಎಷ್ಟಿದೆ?
ಕರ್ನಾಟಕ ನೃತ್ಯಮತ್ತು ಸಂಗೀತ ಅಕಾಡೆಮಿಯ ಅಧ್ಯಕ್ಷರೂ, ಖ್ಯಾತ ಭರತನಾಟ್ಯ ಗುರುಗಳಾದ ಗುರು ಶುಭ ಧನಂಜಯ್ ಅವರ ಶಿಷ್ಯೆಯಾದ ಶ್ವೇತಾ ಮಂಜುನಾಥ್, ಶ್ರವಣ ಹಾಗೂ ಮಾತು ಅಸಮರ್ಥತೆಯಿರುವ ವಿಶೇಷ ಸಾಮರ್ಥ್ಯದ ವಿದ್ಯಾರ್ಥಿನಿಗೆ ಭರತನಾಟ್ಯದ ಸಾಂಪ್ರದಾಯಿಕ ಏಕಾಂಗ ಪ್ರದರ್ಶನವಾದ ‘ರಂಗಪ್ರವೇಶ’ಕ್ಕೆ ಯಶಸ್ವಿಯಾಗಿ ತರಬೇತಿ ನೀಡಿ ಪ್ರಸ್ತುತಿಗೊಳಿಸಿದ ಅಪರೂಪದ ಸಾಧನೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ರಂಗಪ್ರವೇಶ ಕಾರ್ಯಕ್ರಮವು 2025ರ ನವೆಂಬರ್ 16ರಂದು ಚಿತ್ರದುರ್ಗದ ಜಿ.ಜಿ. ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನೆರವೇರಿದ್ದು, ನಂತರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಸಂಪಾದಕೀಯ ಮಂಡಳಿಯಿಂದ ನಡೆದ ಸವಿಸ್ತಾರ ಪರಿಶೀಲನೆಯ ಬಳಿಕ, ಈ ಸಾಧನೆಯನ್ನು 2025ರ ಡಿಸೆಂಬರ್ 10ರಂದು ಅಧಿಕೃತವಾಗಿ ದೃಢಪಡಿಸಲಾಗಿದೆ.
ಇದನ್ನೂ ಓದಿ: ವೃತ್ತಿ ಆಧಾರಿತ ಕೌಶಲ್ಯ ತರಬೇತಿ | ಅರ್ಜಿ ಅಹ್ವಾನ
ಶ್ವೇತಾ ಮಂಜುನಾಥ್ ಅವರ ಈ ಸಾಧನೆ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಕಲಾ ಶಿಕ್ಷಣ ನೀಡುವ ಕ್ಷೇತ್ರದಲ್ಲಿ ಹೊಸ ದಿಕ್ಕು ತೋರಿಸುವುದರ ಜೊತೆಗೆ, ಸಮಾಜಕ್ಕೆ ಪ್ರೇರಣೆಯಾಗುವ ಮಹತ್ವದ ಸಾಧನೆಯಾಗಿದೆ. ಗುರು ಶುಭ ಧನಂಜಯ್ ಅವರ ಮಾರ್ಗದರ್ಶನದಲ್ಲಿ ಈ ಅಪೂರ್ವ ಸಾಧನೆ ಸಾಧ್ಯವಾಗಿತ್ತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
