CHITRAADURGA NEWS | 30 APRIL 2026
ಚಿತ್ರದುರ್ಗ: ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಶ್ರೀ ಜಯದೇವ ವೇದಿಕೆಯಲ್ಲಿ ಸ್ಫೂರ್ತಿ-2026ರ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಿಸ್ಟರ್ ಜೆ.ಎಂ.ಐ.ಟಿ, ಮಿಸ್ ಜೆ.ಎಂ.ಐ.ಟಿ ಹಾಗೂ ಸೋಲೊ ಡ್ಯಾನ್ಸ್ ಸ್ಪರ್ಧೆಗಳು ನಡೆದವು.
ಇದನ್ನೂ ಓದಿ: ಅಡಿಕೆ ಧಾರಣೆ | 29 ಏಪ್ರಿಲ್ | ಚನ್ನಗಿರಿ ಸೇರಿ ರಾಜ್ಯದ ಅಡಿಕೆ ವಹಿವಾಟು ವಿವರ
ಸ್ಫರ್ಧೆಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಖ್ಯಾತ ನೃತ್ಯಪಟು ಕೌಶಿಕ್ ಸುವರ್ಣ ಹಾಗೂ ಸಮನ್ವಿ ಸುವರ್ಣ ಆಗಮಿಸಿದ್ದರು.
ಮಿಸ್ಟರ್ ಜೆ.ಎಂ.ಐ.ಟಿ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ 4ನೇ ಸೆಮಿಸ್ಟರ್‌ನ ತರುಣ್.ಬಿ.ವಿ ಪ್ರಥಮ ಹಾಗು ಕಂಪ್ಯೂಟರ್ ಸೈನ್ಸ್ ವಿಭಾಗದ 6ನೇ ಸೆಮಿಸ್ಟರ್‌ನ ಜೀವನ್ .ಆರ್ ದ್ವೀತಿಯ ಸ್ಥಾನ ಪಡೆದರು.
ಮಿಸ್ ಜೆ.ಎಂ.ಐ.ಟಿ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ 4ನೇ ಸೆಮಿಸ್ಟರ್‌ನ ಪ್ರಾಂಜಲ ಎನ್.ಎಂ ಪ್ರಥಮ ಹಾಗು ಎಲೆಕ್ಟ್ರಿಕಲ್ ವಿಭಾಗದ 4ನೇ ಸೆಮಿಸ್ಟರ್‌ನ ಅಲ್ಫಿಯಾ.ಯೈ ದ್ವೀತಿಯ ಸ್ಥಾನ ಪಡೆದರು.
ಇದನ್ನೂ ಓದಿ: ಡಿಪ್ಲೊಮಾ ಪ್ರವೇಶಕ್ಕೆ ವಿಶೇಷಚೇತನರಿಂದ ಅರ್ಜಿ ಆಹ್ವಾನ
ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ವಿಭಾಗದ 8ನೇ ಸೆಮಿಸ್ಟರ್‌ನ ಕೀರ್ತನ, ಸಿವಿಲ್ ವಿಭಾಗದ 4ನೇ ಸೆಮಿಸ್ಟರ್‌ನ ಯಶವಂತ್ ಉತ್ತಮ ನಡಿಗೆಗಾಗಿ ಪ್ರಶಸ್ತಿ ಪಡೆದರು.
ಎಲೆಕ್ಟ್ರಿಕಲ್ ವಿಭಾಗದ 6ನೇ ಸೆಮಿಸ್ಟರ್‌ನ ಹರ್ಷಿತಾ.ಎನ್ ಹಾಗು ಕಂಪ್ಯೂಟರ್ ಸೈನ್ಸ್ ವಿಭಾಗದ 6ನೇ ಸೆಮಿಸ್ಟರ್‌ನ ಜೀವನ್.ಆರ್ ಸಾಂಪ್ರದಾಯಿಕ ಉಡುಗೆಗಾಗಿ ಪ್ರಶಸ್ತಿ ಪಡೆದರು.
ಎಲೆಕ್ಟ್ರಿಕಲ್ ವಿಭಾಗದ 4ನೇ ಸೆಮಿಸ್ಟರ್‌ನ ಬಬಿತಾ ಹಾಗೂ ಎಲೆಕ್ಟ್ರಿಕಲ್ ವಿಭಾಗದ 6ನೇ ಸೆಮಿಸ್ಟರ್‌ನ ಶಿವಕುಮಾರ್ ಪಾಶ್ಚಾತ್ಯ ಉಡುಗೆಗಾಗಿ ಪ್ರಶಸ್ತಿ ಪಡೆದರು.
ಸೋಲೊ ಡ್ಯಾನ್ಸ್ ಸ್ಪರ್ಧೆಯಲ್ಲಿ ಸಿವಿಲ್ ವಿಭಾಗದ 6ನೇ ಸೆಮಿಸ್ಟರ್‌ನ ಸಂಜನಾಗೌಡ ಜಿ.ಎಸ್ ಪ್ರಥಮ ಸ್ಥಾನ ಪಡೆದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 29 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್…
ಇದೇ ಸಂದರ್ಭದಲ್ಲಿ “ಮೋಡ ಕವಿದ ವಾತವರಣ” ಕನ್ನಡ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಯಿತು. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ.ಪಿ.ಬಿ.ಭರತ್, ನಟ ನಟಿಯರಾದ ಶೀಲಂ ಎಂ. ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕ, ಸ್ಫೂರ್ತಿ 2026ರ ಮುಖ್ಯ ಸಂಚಾಲಕರಾದ ಡಾ.ಕೃಷ್ಣಾರೆಡ್ಡಿ.ಕೆ.ಆರ್, ಡಾ.ಅರವಿಂದ್.ಟಿ.ವಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಿದ್ದೇಶ್ ಹಾಗು ದಿವ್ಯ ನಿರೂಪಿಸಿ ನಿರ್ವಹಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
