
CHITRADURGA NEWS | 28 OCTOBER 2025
ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ರೆಡಿಂಗ್ಟನ್ ಫೌಂಡೆಷನ್ ಮತ್ತು ಐ.ಸಿ.ಟಿ ಅಕಡೆಮಿಯ ಸಹಯೋಗದೊಂದಿಗೆ ಉದ್ಯೋಗ ಮತ್ತು ತರಬೇತಿ ವಿಭಾಗದ ವತಿಯಿಂದ 21 ದಿನಗಳ ಸೈಬರ್ ಸೆಕ್ಯುರಿಟಿ ಮತ್ತು ಸಾಪ್ಟ್ ಸ್ಕಿಲ್ಸ್ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಇದನ್ನೂ ಓದಿ: ಪತ್ರಕರ್ತರ ಸಂಘದ ಚುನಾವಣೆ | 49 ನಾಮಪತ್ರ ಸಲ್ಲಿಕೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಭರತ್ ಪಿ.ಬಿ ಮಾತನಾಡಿ, ಕರ್ನಾಟಕದಲ್ಲಿ 250ಕ್ಕೂ ಹೆಚ್ಚು ಕಾಲೇಜುಗಳಿದ್ದು ಅವುಗಳು ಪೈಕಿ ಕೆವಲ 2 ಕಾಲೇಜುಗಳು ಈ ಕಾರ್ಯಗಾರಕ್ಕೆ ಆಯ್ಕೆಯಾಗಿದ್ದು, ಅದರಲ್ಲಿ ನಮ್ಮ ಕಾಲೇಜು ಈ ಕಾರ್ಯಗಾರಕ್ಕೆ ಆಯ್ಕೆಯಾಗಿರುವುದು ನಮಗೆ ತುಂಬಾ ಹೆಮ್ಮಯ ವಿಷಯ.
ಭಾರತದ 140 ಕೊಟಿ ಜನರ ವೈಯಕ್ತಿಕ ಮಾಹಿತಿ ಆಧಾರನಲ್ಲಿ ಅಡಕವಾಗಿದೆ ಎಂದರೆ ಡೆಟಾ ಎಷ್ಟು ಅಮೂಲ್ಯ? ಇಂತಹ ಡೆಟಾ ಸುರಕ್ಷಿತವಾಗಿರಲು ಈ ಸೈಬರ್ ಸೆಕ್ಯುರಿಟಿ ಜಾಗೃತಿ ಕಾರ್ಯಗಾರವೂ ಅತ್ಯಂತ ಅವಶ್ಯಕವಾಗಿದೆ. ಭಾರತ ಸರ್ಕಾರ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡುತ್ತದೆ ಎಂದರು.
ಐ.ಸಿ.ಟಿ ಅಕಡೆಮಿಯ ಸಿನಿಯರ್ ಅಸೋಸಿಯೆಟ್ ಪ್ರವೀಣ್ ವಿ ಗಸ್ತಿ ಮಾತನಾಡಿ, ಪ್ರಸ್ತುತ ಕಾರ್ಪೋರೇಟ್ ಕಂಪನಿಗಳಲ್ಲಿ ಕೌಶಲ್ಯವಿಲ್ಲದ ಹಲವರು ವಿದ್ಯಾರ್ಥಿಗಳು ಉದ್ಯೋಗವಾಕಶಗಳಿಂದ ವಂಚಿತರಾಗುತ್ತಿದ್ದಾರೆ. ಆದರೆ ನೀವೂ ಉತ್ತಮ ಕೌಶಲ್ಯಗಳನ್ನು ಹೊಂದಿದರೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಆಯ್ಕೆ ಪ್ರಕಿಯೆಯಲ್ಲಿ ಹೆಚ್ಚು ಸಹಕಾರಿಯಾಗಲಿದೆ. ಈ ಕಾರ್ಯಗಾರ ಅಂತ್ಯದಲ್ಲಿ ಪ್ರಾಯೋಗಿಕ ಪರಿಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ನೀಡಲಾಗುವುದು ಎಂದರು.
ಗಣಕ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಪಕರಾದ ಪ್ರೋ.ಬಿ.ಇ.ರಮೇಶ ಮಾತನಾಡಿ, ನಮ್ಮ ಮನೆ, ಹೊಲ ಮತ್ತು ನಮ್ಮ ವಾಹನಗಳು ನಮ್ಮ ಹಿಡಿತದಲ್ಲಿವೆ ಆದರೆ ನಮ್ಮ ಮೋಬೈಲ್‌ನಲ್ಲಿರುವ ನಮ್ಮ ಡೆಟಾ ನಮ್ಮ ಹಿಡಿತದಲ್ಲಿಲ್ಲ, ಇಂತಹ ಕಾರ್ಯಗಾರಗಳಲ್ಲಿ ನಾವು ಹೆಚ್ಚು ಭಾಗವಹಿಸುವುದರಿಂದ ಸೈಬರ್ ಅಟಾಕ್‌ಗಳನ್ನು ತಡೆಯಬಹುದು ಎಂದರು.
ಇದನ್ನೂ ಓದಿ: ರೈತರಿಗೆ ಬೆಸ್ಕಾಂ ಮನವಿ | ವಿದ್ಯುತ್ ಸಮಸ್ಯೆ ಇದ್ದರೆ ವಾಟ್ಸಪ್ ಮಾಡಿ
ನಮಗೆ ಯಾವುದೇ ಸೈಬರ್ ತೊಂದರೆಯಾದರೆ ನಾವೂ ಸೈಬರ್ ಸಹಯವಾಣಿ ಸಂಖ್ಯೆ 1930 ಗೆ ದೂರು ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿನಿಯರ್ ರಿಲೆಷನ್‌ಶಿಪ್ ಮ್ಯೆನೆಜರ್ ಎಂ.ಎಸ್.ಜಕಾಉಲ್ಲ, ಟ್ರೇಂನರ್ ಮುತ್ತುಕುಮಾರ್, ಇ ಅಂಡ್ ಸಿ ವಿಭಾಗದ ಮುಖ್ಯಸ್ಥೃ ಡಾ.ಸಿದ್ದೇಶ್ ಕೆ.ಬಿ, ಸಿ ಎಸ್ ವಿಭಾಗದ ಮುಖ್ಯಸ್ಥೃ ಡಾ.ಕೆ.ಅರ್.ಕೃಷ್ಣರೆಡ್ಡಿ,
ಕಾರ್ಯಕ್ರಮದ ಸಂಯೋಜಕರು ಹಾಗೂ ಎ.ಐ ಅಂಡ್ ಎಂ.ಎಲ್ ವಿಭಾಗದ ಮುಖ್ಯಸ್ಥ ಡಾ.ಅರವಿಂದ್ ಟಿ.ವಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
