
ಚಿತ್ರದುರ್ಗ ನ್ಯೂಸ್.ಕಾಂ:

ಒಂದು ಪಂದ್ಯವನ್ನೂ ಸೋಲದೆ ಭಾರತ ಕ್ರಿಕೇಟ್ ತಂಡ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯದಲ್ಲೂ ಗೆಲುವು ಸಾಧಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಬೇಕು. ಭಾರತ ಗೆದ್ದೇ ಗೆಲ್ಲಲಿ ಎನ್ನುವುದು ನಮ್ಮ ಆಶಯ
| ಎಸ್.ಕೆ.ಬಸವರಾಜನ್, ಮಾಜಿ ಶಾಸಕರು
****


ಈ ಭಾರಿಯ ವಿಶ್ವಕಪ್‍ನಲ್ಲಿ ಭಾರತ ಅಜೇಯವಾಗಿ ಫೈನಲ್ ತಲುಪಿದೆ. ಅಂತಿಮ ಪಂದ್ಯಾವಳಿಯನ್ನು ನೋಡುವ ತವಕ ಜಗತ್ತಿಗೆ ಮೂಡಿದೆ. ಭಾರತ ತಂಡ ಅದ್ಬುತ ಪ್ರದರ್ಶನ ನೀಡುವ ಮೂಲಕ ಕಪ್ ಗೆದ್ದೇ ತೀರುತ್ತದೆ.
ಟಿ.ಎನ್.ಸತೀಶ್, ಉಪನ್ಯಾಸಕರು, ಸಿರಿಗೆರೆ.
****

ಭಾರತದಲ್ಲಿ ಕ್ರಿಕೇಟ್ ಆರಾಧಿಸುವ ಕ್ರೀಡೆಯಾಗಿದೆ. ಜಗತ್ತಿನಾದ್ಯಂತ ಇಂಡಿಯಾವನ್ನು ಪ್ರೋತ್ಸಾಹಿಸುವ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಎಲ್ಲರ ಹಾರೈಕೆಯಿಂದ ಟೀಂ ಇಂಡಿಯಾ ವಿಶ್ವಕಪ್ ಜಯಿಸಿ ದಾಖಲೆ ನಿರ್ಮಿಸಲಿದೆ.
| ಹರ್ಷವರ್ಧನ, ಚಿಕ್ಕಗೊಂಡನಹಳ್ಳಿ.
****

ವಿಶ್ವಕಪ್ ಪ್ರಾರಂಭದಿಂದ ಈವರೆಗೂ ಭಾರತ ತಂಡ ಗೆಲುವು ಸಾಧಿಸಿ ಫೈನಲ್‍ಗೆ ಸಜ್ಜಾಗಿದೆ. ಕೊನೆ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದರನಾಗಿ ತಂಡ ಹೊರಹೊಮ್ಮಲಿದೆ. ಗೆದ್ದು ಬಾ ಭಾರತ.
| ಗಂಗಾಧರೇಶ್ವರ ಬಿ.ಟಿ.ಗಣೇಶ್, ಬಿಜೆಪಿ ಸೋಷಿಯಲ್ ಮೀಡಿಯಾ.
****

ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‍ನಲ್ಲೂ ಈಗಿನ ಭಾರತ ತಂಡ ಅತ್ಯುತ್ತಮವಾಗಿದೆ. ಇಂದು ಮಧ್ಯಾಹ್ನ ನಡೆಯುವ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡಾ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ.
| ಆದರ್ಶ, ಚಿತ್ರದುರ್ಗ.
****



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
