
ಚಿತ್ರದುರ್ಗ ನ್ಯೂಸ್. ಕಾಂ: ಕಲುಷಿತ ನೀರು ಸೇವಿಸಿ ಸಾವು-ನೋವು ಅನುಭವಿಸಿದ್ದ ಕವಾಡಿಗರಹಟ್ಟಿಗೆ ಮುಖ್ಯಮಂತ್ರಿ ಶುಕ್ರವಾರ ಸಿದ್ದರಾಮಯ್ಯ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ವಿಷಯ ತಿಳಿದ ತಕ್ಷಣ ಡಿಸಿ ಸೇರಿದಂತೆ ಎಲ್ಲರಿಗೂ ಮಾತನಾಡಿ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಹೇಳಿದ್ದೆ.
ಶುದ್ಧ ನೀರು ಕೊಡುವುದು ಸರ್ಕಾರದ ಜವಾಬ್ದಾರಿ. ಉಚಿತವಾಗಿ ಶುದ್ಧ ನೀರು ಕೊಟ್ಟಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ. ಎಲ್ಲಿಯೂ ಅಶುದ್ಧ ನೀರು ಕೊಡಬಾರದು. ಒಂದು ವೇಳೆ ಕಲುಷಿತ ನೀರು ಕೊಟ್ಟರೆ, ಸಂಬಂಧಿಸಿದ ಅಧಿಕಾರಿ ನೇರ ಹೊಣೆ.


ಸರ್ಕಾರದಿಂದ ಹತ್ತು ಲಕ್ಷ ಪರಿಹಾರ ನೀಡಲಾಗಿದೆ. ಮುಂದೆ ಜಿಲ್ಲಾಧಿಕಾರಿ ಸಭೆ ನಡೆಸಿ ಇಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಬೇಕು.
ನಿವೇಶನಗಳಿಗೆ 3 ಎಕರೆ ಜಾಗ ಮೀಸಲಿಡಲಾಗಿದೆ. ಈ ಭಾಗದ ಅಭಿವೃದ್ಧಿಗೆ 4ಕೋಟಿ ಮಂಜೂರಾಗಿದೆ. ಮೃತರ ಆರು ಕುಟುಂಬಗಳಿಗೆ ಸರ್ಕಾರದಿಂದ ಉದ್ಯೋಗ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಜಿಲ್ಲೆಯ ಮೊದಲ ಭೇಟಿ ಕವಾಡಿಗರಹಟ್ಟಿಗೆ ನೀಡಿದ ಸಿಎಂ
ಕಲುಷಿತ ನೀರು ಸೇವಿಸಿ ಏಳು ಜನ ಮೃತಪಟ್ಟು, 250ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ನೀಡಿದ ಮೊದಲ ಭೇಟಿ ಸಂದರ್ಭದಲ್ಲಿ ತಮ್ಮ ಮೊದಲ ಕಾರ್ಯಕ್ರಮವನ್ನು ಕವಾಡಿಗರಹಟ್ಟಿ ಗ್ರಾಮಕ್ಕೆ ನೀಡಿದರು.
ಈ ವೇಳೆ ಕವಾಡಿಗರಹಟ್ಟಿ ಗ್ರಾಮಸ್ಥರು, ದಲಿತ ಸಮುದಾಯಕ್ಕೆ ಸೇರಿದ ಏಳು ಜನ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾರೆ. ಇಡೀ ಕಾಲೋನಿ ಸಂಕಷ್ಟದಲ್ಲಿದ್ದು, ನಿವೇಶನ, ಮನೆ, ಜಮೀನು, ಉದ್ಯೋಗ ನೀಡಲು ಒತ್ತಾಯಿಸಿದರು.
ಹೆದ್ದಾರಿ ಅಗಲೀಕರಣಕ್ಕೆ ಸುಮಾರು 60 ಮನೆಗಳು ಹೋಗುತ್ತಿವೆ. ಎಲ್ಲರಿಗೂ ಪರಿಹಾರ ಬರುವಂತೆ ಮಾಡಿ, ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಜನರ ಮನವಿಯನ್ನು ಓದಿ ಹೇಳಿದರು.
ಈ ವೇಳೆ ಕೃಷಿ ಸಚಿವ ಚೆಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕಾರಾದ ಕೆ.ಸಿ.ವೀರೇಂದ್ರ(ಪಪ್ಪಿ), ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾಧಿಕಾರಿ ದಿವ್ಯಪ್ರಭು, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಪೌರಾಯುಕ್ತೆ ಎಂ.ರೇಣುಕಾ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
