
CHITRADURGA NEWS | 09 July 2025
ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಜು.11 ರಿಂದ 13ರವರೆಗೆ ಪ್ರೋ ಮಾದರಿಯ 25 ವರ್ಷದೊಳಗಿನ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.
ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ವಕೀಲರಾದ ಫಾತ್ಯರಾಜನ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಬಿಜೆಪಿ ಯುವ ಮುಖಂಡ ಅನಿತ್‌ಕುಮಾರ್, ಕರವೇ ಜಿಲ್ಲಾಧ್ಯಕ್ಷ ರಮೇಶ್, ಅಹೋಬಲ ಟಿವಿಎಸ್ ಮಾಲಿಕರಾದ ಪಿ.ವಿ.ಅರುಣ್‌ಕುಮಾರ್, ತಾಪಂ ಮಾಜಿ ಸದಸ್ಯ ಸುರೇಶ್‌ನಾಯ್ಕ್ ಭಾಗವಹಿಸಲಿದ್ದಾರೆ.
ಸಿಕೆಪಿಎಲ್ ಕಬಡ್ಡಿ ಪ್ರೀಮಿಯರ್ ಲೀಗ್‌ನಲ್ಲಿ 6 ತಂಡಗಳನ್ನು ಮಾಡಿದ್ದು, ಜು.06 ರಂದು ಆಟಗಾರರ ಹಾರಜು ಪ್ರಕ್ರಿಯೆಯನ್ನು ಸರಸ್ವತಿ ಕಾನೂನು ಕಾಲೇಜಿನಲ್ಲಿ ನಡೆಸಲಾಗಿದೆ.
1. 7 ಸ್ಟಾರ್ ತಂಡ ಬಳ್ಳಾರಿ, ಮಾಲೀಕರು, ಅಗ್ರಹಾರ ಗೋವಿಂದ.
2. ಕೆಳಗೋಟೆ ಕಿಂಗ್ಸ್ ಮಾಲೀಕರು, ದೇವರಾಜ್.
3. ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್, ಮಾಲೀಕರು, ಡಿ.ನಾಗಭೂಷಣ್.
4. ಸರ್ಕಲ್ ಅಡ್ಡ, ಮಾಲೀಕರು, ಪ್ರಜ್ವಲ್.
5. ರಾಯರಸೇನೆ ಮಾಲೀಕರು, ಮಧು ಮತ್ತು ಶ್ರೀನಿವಾಸ್.
6. ಎಸ್.ಬಿ.ಐ. ಲೈಫ್, ಮಾಲೀಕರು, ಚಂದ್ರಶೇಖರ್.
ಈ 6 ತಂಡಗಳಿಂದ ಪ್ರತಿಷ್ಠಿತ 6 ಕಬಡ್ಡಿ ಆಟಗಾರರನ್ನು ಮೊದಲನೇ ಐಕಾನ್ ಆಗಿ ಹಾಗೂ 6 ಪ್ರತಿಷ್ಠಿತ ಕಬಡ್ಡಿ ಆಟಗಾರರನ್ನು 2ನೇ ಐಕಾನ್ ಆಗಿ ಆಯ್ಕೆ ಮಾಡಲಾಗಿರುತ್ತದೆ.
ಮೊದಲನೇ ಐಕಾನ್‌ಗೆ ರೂ.4,000/-, 2ನೇ ಐಕಾನ್ ರೂ.2,000/-ಗೆ ಖರೀದಿಸಿರುತ್ತಾರೆ. 7 ಸ್ಟಾರ್ ತಂಡದಿಂದ ಅಭಿಷೇಕ್ ತಳವಾರ್ ರೂ.4,500/-ಗೆ, ಕೆಳಗೋಟೆ ತಂಡದ ಸುಹೇಲ್ ರೂ.2,700/-ಗೆ, ಸರ್ಕಲ್ ಅಡ್ಡ ತಂಡದ ಮನುನಾಯ್ಕ್ ರೂ.3,600/-ಗೆ, ರಾಯರಸೇನೆ ತಂಡದ ಮಲ್ಲೇಶ್‌ಗೌಡ ರೂ.4,900/-ಗೆ, ಎಸ್.ಬಿ.ಐ. ಲೈಫ್ ತಂಡದ ದರ್ಶನ್ ಗೌಡ ರೂ.6,100/-ಗೆ, ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್‌ನ ನಿಖಿಲ್ ಅತೇಲಿ ರೂ.3,100 ರೂ.ಗಳಿಗೆ ಮಾರಾಟವಾಗಿರುತ್ತಾರೆ.
ಈ ಲೀಗ್ ಪಂದ್ಯಾವಳಿಯನ್ನು ಲೀಗ್ ಕಮ್ ನಾಕ್-ಔಟ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಲಾಗುವುದು. ಒಟ್ಟು 18 ಪಂದ್ಯಗಳು ಈ ಪಂದ್ಯಾವಳಿಯಲ್ಲಿ ನಡೆಯುತ್ತವೆ.
ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ 15 ಜನ ಕ್ರೀಡಾ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ವಿಜೇತರಿಗೆ ಪ್ರಥಮ ಬಹುಮಾನ ರೂ.50,000/- ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾನ ರೂ.30,000/- ನಗದು ಮತ್ತು ಪಾರಿತೋಷಕ, ತೃತೀಯ ಬಹುಮಾನ ರೂ.20,000/- ನಗದು ಮತ್ತು ಪಾರಿತೋಷಕ, ಚತುರ್ಥ ಬಹುಮಾನ ರೂ.10,000/- ನಗದು ಮತ್ತು ಪಾರಿತೋಷಕ, ಐದನೇ ಬಹುಮಾನ ರೂ.5,000/-ನಗದು ಮತ್ತು ಪಾರಿತೋಷಕ, ಆರನೇ ಬಹುಮಾನ ರೂ.5,000/-ನಗದು ಮತ್ತು ಪಾರಿತೋಷಕ, ಉತ್ತಮ ಹಿಡಿತಗಾರ, ಉತ್ತಮ ದಾಳಿಗಾರ ಮತ್ತು ಪಂದ್ಯಾವಳಿಯ ಸರ್ವೋತ್ತಮ ಆಟಗಾರನಿಗೆ ಸೈಕಲ್ ನೀಡಲಾಗುವುದು.
2000 ಜನ ಕುಳಿತು ವೀಕ್ಷಣೆ ಮಾಡುವ ಗ್ಯಾಲರಿ ವ್ಯವಸ್ಥೆ ಮಾಡಿದ್ದು, ಮಹಿಳೆಯರಿಗೆ ಪ್ರತ್ಯೇಕವಾಗಿ ಕುಳಿತು ವಿಕ್ಷೇಣೆ ಮಾಡುವ ವ್ಯವಸ್ಥೆ ಇರುತ್ತವೆ ಎಂದು ಕಾರ್ಯದರ್ಶಿ ಪಿ.ಸಿ.ಮುರುಗೇಶ್ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
