ನಿಧನವಾರ್ತೆ
ಕನ್ನಡ ಶಿಕ್ಷಕಿ ಟಿ.ಸ್ವೀಟಿ ಕಲಾಂಜಲಿ ನಿಧನ | ಶನಿವಾರ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ

CHITRADURGA NEWS | 19 DECEMBER 2024
ಚಿತ್ರದುರ್ಗ: ನಗರದ ಚಿನ್ಮೂಲಾದ್ರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಸ್ವೀಟಿ ಕಲಾಂಜಲಿ(68) ಚಿಕ್ಕಬಳ್ಳಾಪುರದಲ್ಲಿ ಡಿಸೆಂಬರ್ 18 ಬುಧವಾರ ನಿಧನರಾಗಿದ್ದಾರೆ.
ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯ | ಪ್ರಾಣಿ ದತ್ತು ಪಡೆಯಲು ಸುವರ್ಣಾವಕಾಶ | ಯಾವ ಪ್ರಾಣಿಗೆ ಎಷ್ಟು ರೇಟ್ ?

ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ. ಸುಧೀರ್ಘ ವರ್ಷಗಳ ಕಾಲ ಕನ್ನಡ ಶಿಕ್ಷಕಿಯಾಗಿ ಸಾವಿರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಟೀಚರ್ ಆಗಿದ್ದವರು.
ಶನಿವಾರ ಅಂತ್ಯಕ್ರಿಯೆ:
ಮೃತ ಶಿಕ್ಷಕಿ ಸ್ವೀಟಿ ಕಲಾಂಜಲಿ ಅವರ ಪುತ್ರಿ ಅಮೇರಿಕಾದಿಂದ ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಂತ್ಯಕ್ರಿಯೆಯನ್ನು ಶನಿವಾರ ನಡೆಸಲಾಗುತ್ತದೆ ಎಂದು ಮೃತರ ಪುತ್ರ ಡಾ.ರಿತಿಶ್ ಜಾನ್ಸ್‍ನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೋಟೆನಾಡಿಗೆ ಕಿಚ್ಚ ಸುದೀಪ್ | ಡಿ.22 ರಂದು ಮ್ಯಾಕ್ಸ್ ಫ್ರೀ ರಿಲೀಸ್ ಇವೆಂಟ್
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಸೆಂಟ್ ಮಾಕ್ಸ್ ಕ್ಯಾಥೆಡ್ರಾಲ್ ಚರ್ಚ್‍ನಲ್ಲಿ ಡಿಸೆಂಬರ್ 21 ಶನಿವಾರ ಮಧ್ಯಾಹ್ನ 2 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಜೆ 4 ಗಂಟೆಗೆ ಹೊಸೂರು ರಸ್ತೆಯಲ್ಲಿರುವ ಇಂಡಿಯನ್ ಕ್ರಿಶ್ಚಿಯನ್ ಸೆಮೆಂಟರಿ, ಗೇಟ್ ನಂ.2 ರಲ್ಲಿ ಅಂತ್ಯಕ್ರಿತೆ ನಡೆಸಲಾಗುವುದು ಎಂದು ಮೃತರ ಪುತ್ರ ಚಿತ್ರದುರ್ಗ ನ್ಯೂಸ್‍ಗೆ ತಿಳಿಸಿದ್ದಾರೆ.
